ನ್ಯೂಯಾರ್ಕ್: ಶಿಕ್ಷಕಲಿರು ತಾವು ಕಲಿಸುತ್ತಿರುವ ಶಾಲೆಯ ವಿಧ್ಯಾರ್ಥಿಗಳೊಂದಿಗೆ ಲೈಂಗಿಕ ಸಂಪರ್ಕಹೊಂದಿದ ಆರೋಪದ ಮೇಲೆ 6 ಮಂದಿಯನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ಎಮಿಲಿ ಹ್ಯಾನ್‌ಕಾಕ್ (26), ಹೀದರ್ ಹೇರ್ (32), ಎಲೆನ್ ಶೆಲ್ (38), ಕ್ರಿಸ್ಟನ್ ಗ್ಯಾಂಟ್ (36), ಅಲಿಹ್ ಖೇರಾಡ್‌ಮಂಡ್ (33), ಹನ್ನಾ ಮಾರ್ತ್ (26) ಎನ್ನಲಾಗಿದ್ದು, ಕಳೆದ ಎರಡು ದಿನಗಳಲ್ಲಿ ಈ ಆರು ಮಂದಿ ಶಿಕ್ಷಕಿಯರನ್ನು ಬಂಧಿಸಲಾಗಿದೆ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.
ಈ ಶಿಕ್ಷಕಿಯರು ವಿವಿಧ ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದರು. ತಾವು ಕೆಲಸ ಮಾಡುವ ಶಾಲೆಗಳಲ್ಲಿ 15 ರಿಂದ 16 ವರ್ಷದೊಳಗಿನ ಬಾಲಕರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ಪೋಷಕರು ಶಾಲೆಯ ಆಡಳಿತ ಮಂಡಳಿಗೆ ದೂರು ನೀಡಿದ್ದರು. ಬಳಿಕ ಶಾಲೆಯ ಮುಖ್ಯಸ್ಥರು ಪೊಲೀಸರಿಗೆ ದೂರು ನೀಡಿದ್ದರು.
ಬಂಧನಕ್ಕೆ ಒಳಗಾಗಿರುವ ಶಿಕ್ಷಕಿಯರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಶಿಕ್ಷಕಿಯರು ವಿದ್ಯಾರ್ಥಿಗಳೊಂದಿಗೆ ಸಂಬಂಧ ಹೊಂದಿದ್ದರು ಎಂಬುದು ದೃಢಪಟ್ಟಿದೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.