ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಕನಕಮಜಲು ಗ್ರಾಮದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ-2023ರ ಭಾಜಪಾ ಸುಳ್ಯ ವತಿಯಿಂದ ಮತ ಪ್ರಚಾರ ಮಾ.16ರಂದು ನಡೆಸಲಾಯಿತು.
ಸಭೆ ಗೆ ಆಗಮಿಸಿದ ಭಾಗೀರಥಿ ಮುರುಳ್ಯರನ್ನು ಮಾಜಿ.ತಾ.ಪಂ ಅಧ್ಯಕ್ಷೆ ಗುಣವತಿ ಕೊಲ್ಲಂತಡ್ಕ ಗ್ರಾಮಸ್ಥರ ಪರವಾಗಿ ಶಾಲು ಹೊದಿಸಿ ಸ್ಚಾಗತಿಸಿದರು. ಕ್ಷೇತ್ರ ಚುನಾವಣಾ ಮಾದ್ಯಮ ವಕ್ತಾರ ವೆಂಕಟ್ ದಂಬೆಕೋಡಿ ಮಾತನಾಡಿ
ಕಾರ್ಯಕರ್ತರ ರಣೊತ್ಸಹ ನಮಗೆ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಮತ್ತಷ್ಟು ಹುರುಪನ್ನು ಕೊಟ್ಟಿದೆ,ಈ ಉತ್ಸಾಹ ಮುಂದೆ ನಮ್ಮ ಅಭ್ಯರ್ಥಿಯು ಗೆಲ್ಲುವವರೆಗೆ ಮುಂದುವರಿಯಲಿ ಎಂದು ಹುರಿತುಂಬಿಸಿದರು.

ಭಾಗೀರಥಿ ಮುರುಳ್ಯ ಮಾತನಾಡಿ ನನಗೆ ಮತ್ತು ಕನಕಮಜಲಿಗೆ ತಾಯಿ ಮಗಳ ಸಂಬಂಧ ಇದೆ ಜಿಲ್ಲಾಪಂಚಾಯತ್ ಸದಸ್ಯೆಯಾಗಿ ಗೆಲ್ಲಿಸಿದ ಕ್ಷೇತ್ರ ಜಾಲ್ಸೂರು,ಇಲ್ಲಿಯ ಜನತೆ ಮಾಡಿದ ಸಹಕಾರವನ್ನು ಯಾವತ್ತುಮರೆಯಲು ಸಾಧ್ಯವಿಲ್ಲ, ಈಬಾರಿ ಕ್ಷೇತ್ರದಿಂದ ಗೆದ್ದು ಸುಳ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನನ್ನ ಶಕ್ತಿ ಮೀರಿ ಪ್ರಯತ್ನಿಸುವುದಾಗಿ ತಿಳಿಸಿದರು. ಹೆಚ್ಚಿನ ಮತಗಳಿಂದ ನನ್ನನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಸುಳ್ಯಯುವಮೊರ್ಚಾ ಅಧ್ಯಕ್ಷ ಗುರುದತ್ ನಾಯಕ್ ಸುಳ್ಯ,
ಚುನಾವಣಾ ವಿಶೇಷ ಸಂಪರ್ಕ ಪ್ರಮುಖ್ ನಗರಪಂಚಾಯತ್ ಮಾಜಿ ಅಧ್ಯಕ್ಷ, ಎನ್.ಎ ರಾಮಚಂದ್ರ ಮಾತನಾಡಿ ಅತಿ ಹೆಚ್ಚು ದೇವದುರ್ಲಬ ಕಾರ್ಯಕರ್ತರಿರುವ ಕ್ಷೇತ್ರ ಕನಕಮಜಲು ಇಲ್ಲಿನ ಯುವ ಪಡೆಗಳು ಸಾಮಾಜಿಕವಾಗಿ,ಧಾರ್ಮಿಕವಾಗಿ, ರಾಜಕೀಯ ಚಟುವಟಿಗಳಲ್ಲಿ ಸದಾ ತೊಡಗಿಸಿಕೊಳ್ಳುವ ಮನೋಭಾವದರು ಹಾಗಾಗಿ ನೀವೆಲ್ಲರೂ ವ್ಯವಸ್ಥಿತರೀತಿಯ ಪಡೆಯನ್ನು ಕಟ್ಟಿಕೊಂಡು ಈ ಬಾರಿಯ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸುನ್ನು ತಂದುಕೊಡಬೇಕೆಂದು ಕರೆನೀಡಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ,ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೆನಾಲ, ಎಸ್,ಎನ್,ಮನ್ಮಥ,
ಜಿಲ್ಲಾ ರೈತ ಮೊರ್ಚಾದ ಉಪಾಧ್ಯಕ್ಷ ಮಹೇಶ್ ರೈ ಮೇನಾಲ, ಸುಳ್ಯ ಮಂಡಲ ಸಾಮಾಜಿಕ ಜಾಲಾತಾಣ ಮತ್ತು ಹೈಟೆಕ್ ಪ್ರಚಾರ ಸಂಚಾಲಕ ಪ್ರಸಾದ್ ಕಾಟೂರು,ಪಕ್ಷದ ಮಹಾಶಕ್ತಿ ಕೇಂದ್ರ ಆಧ್ಯಕ್ಷ ಜಯರಾಜ್ ಕುಕ್ಕೆಟ್ಟಿ , ಕಾರ್ಯದರ್ಶಿ ಹೇಮಂತ್ ಮಠ ಪಂಚಾಯತ್ ರಾಜ್ ಪ್ರಕೋಷ್ಠ ಜಿಲ್ಲಾಧ್ಯಕ್ಷ ಚನಿಯ ಕಲ್ತಡ್ಕ,ಶ್ರೀಧರ ಕುತ್ಯಾಳ,ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ದೇವಕಿ,ಕನಕಮಜಲು ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಬೊಮ್ಮೆಟ್ಟಿ ಮಹಿಳಾ ಪ್ರಮುಖಕರು, ಶಕ್ತಿ ಕೇಂದ್ರ ಪ್ರಮುಖರು, ಬೂತ್ ನ ವಿವಿಧ ಜವಾಬ್ದಾರಿಯ ಪ್ರಮುಖರು, ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.