Ad Widget .

ಅನ್ಯ ಜಾತಿಯ ಯುವಕರ ಪ್ರೀತಿ|ಇಬ್ಬರು ಹೆಣ್ಣುಮಕ್ಕಳನ್ನು ಕೊಲೆ ಮಾಡಿದ ತಂದೆ-ತಾಯಿ

ಪಾಟ್ನಾ: ಅನ್ಯ ಜಾತಿಯ ಯುವಕರನ್ನು ಪ್ರೀತಿ ಮಾಡಿದಕ್ಕೆ ಇಬ್ಬರು ಹೆಣ್ಣು ಮಕ್ಕಳನ್ನು ಪಾಲಕರು ಕೊಂದಿರುವ ಭಯಾನಕ ಘಟನೆ ಬಿಹಾರದ ಹಾಜಿಪುರದಲ್ಲಿ ನಡೆದಿದೆ.

Ad Widget . Ad Widget .

ತಾಯಿ ರಿಂಕು ದೇವಿ ಮತ್ತು ತಂದೆ ನರೇಶ್ ಕೊಲೆಗಾರರು.ಘಟನೆಯಲ್ಲಿ ರಿಂಕು ದೇವಿಯನ್ನು ಪೊಲೀಸರು ಬಂಧಿಸಿದ್ದು, ತಂದೆ ನರೇಶ್ ತಲೆಮರೆಸಿಕೊಂಡಿದ್ದಾನೆ.

Ad Widget . Ad Widget .

ಬಾಲಕಿಯರು ಗ್ರಾಮದ ಅನ್ಯ ಜಾತಿಯ ಯುವಕರೊಂದಿಗೆ ಆಪ್ತರಾಗಿದ್ದು ಪ್ರೀತಿಸುತ್ತಿದ್ದರು ಮತ್ತು ಅವರ ಪೋಷಕರ ವಿರೋಧವನ್ನು ಲೆಕ್ಕಿಸದೆ ಇಬ್ಬರೂ ಯುವಕರ ಜೊತೆ ಹೋಗುತ್ತಿದ್ದರು ಎಂದು ತಾಯಿ ಹೇಳಿದ್ದಾರೆ.

ರೋಶನಿ ಕುಮಾರಿ ಮತ್ತು ತನು ಕುಮಾರಿ ಅವರು ಮಲಗಿದ್ದಾಗ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿದೆ. ವಿಷಯ ತಿಳಿದು ಪೊಲೀಸರು ಮನೆಗೆ ತಲುಪಿದಾಗ ಎರಡು ಶವಗಳ ಬಳಿ ತಾಯಿ ಮಾತ್ರ ಇದ್ದರು. ಬಾಲಕಿಯ ತಂದೆ ಅಲ್ಲಿ ಇರಲಿಲ್ಲ. ಇಬ್ಬರನ್ನೂ ತನ್ನ ತಂದೆಯೇ ಕೊಂದಿದ್ದಾರೆ ಎಂದು ರಿಂಕು ದೇವಿ ಪೊಲೀಸರಿಗೆ ತಿಳಿಸಿದ್ದಾರೆ.

ನಂತರದ ತನಿಖೆಯಲ್ಲಿ, ಕೊಲೆಯ ಹಿಂದೆ ತಾಯಿ ಮತ್ತು ತಂದೆಯ ಕೈವಾಡವಿದೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ.

Leave a Comment

Your email address will not be published. Required fields are marked *