ಸಮಗ್ರ ನ್ಯೂಸ್: ಇದೇ ಪ್ರಪ್ರಥಮ ಬಾರಿಗೆ ಸುಳ್ಯ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ ಉಂಟಾಗಿದ್ದು, ಬಿ ಫಾರಂಗಾಗಿ ನಂದಕುಮಾರ್ ಹಾಗೂ ಜಿ ಕೃಷ್ಣಪ್ಪ ನಡುವೆ ಜಂಗಿಕುಸ್ತಿ ಆರಂಭವಾಗಿದೆ.
ಅಭ್ಯರ್ಥಿ ಆಯ್ಕೆ ಸರಿಯಲ್ಲ ನಂದಕುಮಾರ್ ಅವರಿ ಬಿ ಪಾರ್ಮ್ ನೀಡಬೇಕು ಎಂದು ನಂದಕುಮಾರ್ ಬೆಂಬಲಿಗರು ಆಯ್ಕೆ ಪ್ರಕ್ರಿಯೆಗೆಂದು ಆಗಮಿಸಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಎಂಎಲ್ ಸಿ ಮಂಜುನಾಥ್ ಭಂಡಾರಿ, ಮಾಜಿ ಸಚಿವ ರಮಾನಾಥ್ ರೈ, ಕೆ ಪಿ ಸಿ ಸಿ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಮುಂದೆ ಆಗ್ರಹ ವ್ಯಕ್ತಪಡಿಸಿ ಆಕ್ರೋಶ ಹೊರ ಹಾಕಿದ ಘಟನೆ ನಡೆದಿದೆ.
ಸುಮಾರು 500 ಕ್ಕೂ ಅಧಿಕ ಮಂದಿ ಆಕ್ರೋಶ ಹೊರ ಹಾಕುತ್ತಿದ್ದು ಬಹುತೇಕರು ನಂದಕುಮಾರ್ ಪರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಂಗ್ರೇಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸುಳ್ಯದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಆಯ್ಕೆಯಲ್ಲಿ ಕಗ್ಗಂಟು ಉಂಟಾಗಿದ್ದು, ಡಿ ಕೆ ಶಿವಕುಮಾರ್ ನಿನ್ನೆ ಬೆಂಗಳೂರಿನಲ್ಲಿ ಸುಳ್ಯದಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲು ತಿಳಿಸಿದ್ದರು.
ಅದರಂತೆ ಇಂದು ಅಭಿಪ್ರಾಯ ಸಂಗ್ರಹಿಸಲು ಆಗಮಿಸಿದ ನಾಯಕರಿಗೆ ಕಾಂಗ್ರೇಸ್ ಕಾರ್ಯಕರ್ತರ ಅಭಿಪ್ರಾಯ ಸಿಕ್ಕಿದೆ. ಏಕಾಏಕಿ ಕಚೇರಿಯ ಒಳಕೋಣೆಗೆ ನುಗ್ಗಿದ ಕಾರ್ಯಕರ್ತರು ಆಕ್ರೋಶ ಭರಿತರಾಗಿ ಅಭಿಪ್ರಾಯ ಹಂಚಿಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪ್ರಮುಖರಾದ ಬ್ಲಾಕ್ ಅಧ್ಯಕ್ಷ. ಪಿ ಸಿ ಜಯರಾಮ , ಭರತ್ ಮುಂಡೋಡಿ, ಪಿ.ಎಸ್ ಗಂಗಾಧರ , ಪಿ ಎಸ್ ಗಂಗಾಧರ್ ಸೇರಿದಂತೆ ಹಲವು ನಾಯಕರ ವಿರುದ್ಧ ನಂದಕುಮಾರ್ ಬೆಂಬಲಿಗರು ಗರಂ ಆಗಿದ್ದಾರೆ. ಇದರಿಂದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ.