Ad Widget .

ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಸ್ಪರ್ಧೆ ಹಿನ್ನಲೆ| ಸುಳ್ಯದಲ್ಲೂ ಗರಿಗೆದರಿದ ರಾಜಕೀಯ ಚಟುವಟಿಕೆ| ಬಂಡಾಯದ ಬಾವುಟ ಬೀಸುವತ್ತ ಹಿಂದೂ ಯುವಮುಖಂಡ!?

ಸಮಗ್ರ ನ್ಯೂಸ್: ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಹಿಂದು ಪರ ಸಂಘಟನೆಯ ನಾಯಕರ ಅಭಿಮಾನಿ ಯುವಕರ ತಂಡವು ಮತ್ತೊಮ್ಮೆ ಗುಪ್ತ ಸಭೆ ಸೇರಿರುವುದಾಗಿ ಹೇಳಲಾಗುತ್ತಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಪುತ್ತೂರಿನಲ್ಲಿ ಆಶಾ ತಿಮ್ಮಪ್ಪ ಇವರನ್ನು ಬಿಜೆಪಿ ಕಣಕ್ಕಿಳಿಸಿದ್ದು, ಸುಳ್ಯದಲ್ಲಿ ಕು.ಭಾಗೀರಥಿ ಮುರುಳ್ಯ ಇವರನ್ನು ಬಿಜೆಪಿಯು ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು ಪುತ್ತೂರು ಹಾಗೂ ಸುಳ್ಯದಲ್ಲಿ ಇದೀಗ ಮತ್ತೆ ಕೇಸರಿ ಕಲಿಗಳ ಮಧ್ಯೆ ಭಿನ್ನಾಭಿಪ್ರಾಯ ದಟ್ಟವಾಗಿ ಗೋಚರಿಸುತ್ತಿದೆ.

Ad Widget . Ad Widget . Ad Widget .

ಪುತ್ತೂರಿನಲ್ಲಿ ಹಿಂದು ಯುವಕರ ಕಣ್ಮಣಿ ಅರುಣ್ ಕುಮಾರ್ ಪುತ್ತಿಲ ಸ್ಪರ್ದೆ ಖಚಿತವಾಗುತ್ತಿದ್ದಂತೆ ಸುಳ್ಯದಲ್ಲಿ ಇದೀಗ ಮತ್ತೆ ಭಜರಂಗದಳ ಪ್ರಮುಖ ಲತೀಶ್ ಗುಂಡ್ಯ ಅಭಿಮಾನಿ ಬಳಗವು ಮತ್ತೆ ಗುಪ್ತ ಸ್ಥಳದಲ್ಲಿ ಸಭೆ ಸೇರಿದೆ ಎನ್ನಲಾಗುತ್ತಿದೆ. ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆಯ ಸಂದರ್ಭದಲ್ಲಿ ಕಾರ್ಯಕರ್ತರ ಪರವಾಗಿ ಆ ಕ್ಷಣದಲ್ಲಿ ರಾತ್ರಿ ಹಗಲು ಎನ್ನದೇ ನಿಂತಿರುವುದು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ಹಾಗೂ ಅರುಣ್ ಕುಮಾರ್ ಪುತ್ತಿಲ ಮತ್ತು ಸುಳ್ಯದ ಕೇಸರಿ ಯುವ ಲತೀಶ್ ಗುಂಡ್ಯ ಇಂತಹ ನಾಯಕರಿಗೆ ಮಣೆ ಹಾಕದೇ ಬಿಜೆಪಿಯು ವಂಚಿಸಿದ್ದು ಪುತ್ತೂರಿನಲ್ಲಿ ಅರುಣ್ ಕುಮಾರ್ ಪುತ್ತಿಲ ಹಾಗೂ ಸುಳ್ಯದಲ್ಲಿ ಲತೀಶ್ ಗುಂಡ್ಯರಿಗೆ ನೀಡಬೇಕಾಗಿತ್ತು ಎಂಬ ಅಭಿಮತ ವ್ಯಕ್ತವಾಗಿತ್ತು.

ಪುತ್ತೂರಿನಲ್ಲಿ ಅರುಣ್ ಕುಮಾರ್ ಪುತ್ತಿಲ ಪಕ್ಷೇತರರಾಗಿ ಸ್ಪರ್ಧೆಗಿಳಿದ‌ ಹಿನ್ನಲೆಯಲ್ಲಿ ಲತೀಶ್ ಅಭಿಮಾನಿಗಳ ಬಳಗ ಗುಪ್ತಸಭೆ ನಡೆಸಿರುವುದಾಗಿ ಹೇಳಲಾಗಿದೆ.

ಪುತ್ತೂರಿನಲ್ಲಿ ಅಧಿಕೃತವಾಗಿ ಪುತ್ತಿಲರ ಸ್ಪರ್ಧೆಯ ಬಗ್ಗೆ ಮಾಹಿತಿ ನೀಡಿದ್ದು ಇದೀಗ ಸುಳ್ಯದ ನಾಯಕನ ಬೆಂಬಲಿಗರ ತಂಡವು ಸುಳ್ಯದ ಗುಪ್ತ ಸ್ಥಳದಲ್ಲಿ ಸಭೆ ನಡೆಸಿದ್ದು ಚುನಾವಣೆ ಪ್ರಚಾರದಿಂದ ದೂರ ಸರಿಯಲು ತೀರ್ಮಾನಿಸಿಲಾಗಿದೆ ಎಂದು ಹೇಳಲಾಗುತ್ತಿದೆ . ಕೆಲ ದಿನಗಳ ಹಿಂದೆಯೇ ಹರೀಶ್ ರೈ ಉಬರಡ್ಕ ನೇತೃತ್ವದಲ್ಲಿ ಮಾತುಕತೆ ನಡೆಸಿದ್ದು ಆ ತಕ್ಷಣಕ್ಕೆ ಗೊಂದಲವನ್ನು ನಿವಾರಿಸಲು ಸಫಲರಾಗಿದ್ದರು ಆದರೆ ಇದೀಗ ಪುತ್ತಿಲರ ಸ್ಪರ್ಧೆಯ ಹೇಳಿಕೆ ಬಳಿಕ ಸುಳ್ಯದ ಕಾರ್ಯಕರ್ತರು ಬಿಜೆಪಿ ವಿರುದ್ದ ತಿರುಗಿ ಬೀಳುವ ಎಲ್ಲಾ ಲಕ್ಷಣಗಳು ಗೋಚರಿಸಿದ್ದು ಸುಳ್ಯ ಚುನಾವಣಾ ಕಣ ರೋಚಕತೆಯನ್ನು ಪಡೆದಿದ್ದು ಬಿಜೆಪಿ ಈ ಕಿಚ್ಚನ್ನು ಯಾವ ರೀತಿಯಲ್ಲಿ ಪರಿಹರಿಸುವುದು ಎಂದು ಕಾದು ನೋಡಬೇಕಿದೆ.

Leave a Comment

Your email address will not be published. Required fields are marked *