ಸಮಗ್ರ ನ್ಯೂಸ್; ಉತ್ತರ ಕನ್ನಡ ಜಿಲ್ಲೆಯ ಜೆ.ಡಿ.ಎಸ್. ಚುನಾವಣಾ ಉಸ್ತುವಾರಿಯಾಗಿ ಎಂ.ಬಿ.ಸದಾಶಿವರವರು ಆಯ್ಕೆಯಾಗಿದ್ದಾರೆ.
ಜೆಡಿಎಸ್ ರಾಜ್ಯ ವಕ್ತಾರರಾದ ಎಂ.ಬಿ.ಸದಾಶಿವ ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಜಾತ್ಯತೀತ ಜನತಾದಳದ ಚುನಾವಣಾ ಉಸ್ತುವಾರಿ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ೬ ಕ್ಷೇತ್ರಗಳಾದ
ಭಟ್ಕಳ, ಕುಮಟಾ, ಹಳಿಯಾಳ, ಕಾರವಾರ, ಯಲ್ಲಾಪುರ ಕ್ಷೇತ್ರಗಳ ಅಭ್ಯರ್ಥಿಗಳ ಚುನಾವಣಾ ಪ್ರಚಾರದ ಉಸ್ತುವಾರಿಯನ್ನು ಎಂ.ಬಿ.ಯವರು ನೋಡಿಕೊಳ್ಳಲಿದ್ದಾರೆ.
ಈ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಚುನಾವಣಾ ಕಾರ್ಯದಲ್ಲಿ ತೊಡಗಿರುವ ಅವರು ಹೆಚ್.ಡಿ.ಕುಮಾರಸ್ವಾಮಿ ಅವರು ಭಾಗವಹಿಸಿದ ಎರಡು ಬೃಹತ್ ಚುನಾವಣಾ ಪ್ರಚಾರ ಸಭೆಗಳನ್ನು ಕುಮಟಾ ಮತ್ತು ದಾಂಡೇಲಿಯಲ್ಲಿ ಸಂಘಟಿಸಲು ನೇತೃತ್ವ ವಹಿಸಿದ್ದರು.