ಸಂಪಾಜೆ: ಕಾರು ಮತ್ತು ಕೆಎಸ್ ಆರ್ ಟಿ ಸಿ ಬಸ್ ನಡುವೆ ಭೀಕರ ಅಪಘಾತ‌| ಮಗು ಸಹಿತ ಮೂರು ಮಂದಿ ದುರ್ಮರಣ

ಸಮಗ್ರ ನ್ಯೂಸ್: ಮಾಣಿ – ಮೈಸೂರು ರಾ.ಹೆದ್ದಾರಿಯ ಸಂಪಾಜೆ ಬಳಿ ರಾಜ್ಯ ರಸ್ತೆ ಸಾರಿಗೆ ಬಸ್ ಹಾಗೂ ಕಾರೊಂದರ ನಡುವೆ ನಡೆದ ಭೀಕರ ಅಪಘಾತದಲ್ಲಿ ಮಗು ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

Ad Widget ... ..

ಸುಳ್ಯದಿಂದ ವಿರಾಜಪೇಟೆಗೆ ತೆರಳುತ್ತಿದ್ದ ಬಸ್ ಹಾಗೂ ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿರುವುದಾಗಿ ತಿಳಿದುಬಂದಿದೆ.

Ad Widget

ಘಟನೆಯಲ್ಲಿ ಕಾರಿನಲ್ಲಿದ್ದ ಪ್ರಯಾಣಿಕರ ಪೈಕಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ವರದಿಯಾಗಿದ್ದು ಗಾಯಗೊಂಡ ಪ್ರಯಾಣಿಕರನ್ನು ಸುಳ್ಯದ ಆಸ್ಪತ್ರೆಗೆ ಸಾಗಿಸಲಾಗಿದೆ. ಹೆಚ್ಚಿನ ಮಾಹಿತಿ ‌ನಿರೀಕ್ಷಿಸಲಾಗಿದೆ.

Leave a Comment

Your email address will not be published. Required fields are marked *