Samagra news: ಮೂಡಿಗೆರೆ ತಾಲೂಕಿನ ಐತಿಹಾಸಿಕ ತಾಣ ದೇವರ ಮನೆ ಹೋಗುವ ರಸ್ತೆಯಲ್ಲಿ ಮಾ.14ರ ರಾತ್ರಿ ಕರಡಿಯೊಂದು ಸ್ಥಳೀಯರೊಬ್ಬರ ಕಾರಿಗೆ ಅಡ್ಡಲಾಗಿ ಬಂದು ಸುಮಾರು ಒಂದು ಕಿಲೋಮೀಟರ್ ನಷ್ಟು ರಸ್ತೆಯಲ್ಲಿ ಓಡಿದ ಘಟನೆ ನಡೆದಿದೆ.
ದೇವರು ಮನೆ ಹಾಗೂ ಕೋಗಿಲೆ ಗ್ರಾಮದ ಮಧ್ಯೆ ಈ ಘಟನೆ ಸಂಭವಿಸಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಈ ಹಿಂದೆ ಕಾಡಾನೆ ಹಲವಾರು ಬಾರಿ ಇದೇ ರಸ್ತೆಯಲ್ಲಿ ಹೋಗುವ ವಾಹನಗಳ ಮೇಲೆ ದಾಳಿ ನಡೆಸಿದ್ದು ಇಲ್ಲಿ ಸ್ಮರಿಸಬಹುದು.