ಸಮಗ್ರ ನ್ಯೂಸ್: ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಯಾರಾರು ಎಷ್ಟೆಷ್ಟು ಸಿರಿವಂತರು ಎಂಬ ವರದಿಯನ್ನು ಅಸೊಶಿಯೇಷನ್ ಫಾರ್ ಡೆಮಾಕ್ರಟಿಕ್ ರಿಪಾರ್ಮ್ಸ್ ಸಂಸ್ಥೆ ದೇಶದ ಬಿಡುಗಡೆ ಮಾಡಿದೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಅವರು ಒಟ್ಟು ₹512 ಕೋಟಿ ಆಸ್ತಿಯೊಂದಿಗೆ ದೇಶದಲ್ಲಿಯೇ ನಂಬರ್ 1 ಶ್ರೀಮಂತ ಸಿಎಂ ಎನಿಸಿಕೊಂಡಿದ್ದಾರೆ.
₹15 ಲಕ್ಷ ಆಸ್ತಿಯೊಂದಿಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಪಟ್ಟಿಯಲ್ಲಿ ಕೊನೆಯ ಸ್ಥಾನ (30ನೇ ಸ್ಥಾನ) ಪಡೆದಿದ್ದಾರೆ.
ಮಮತಾ ಬ್ಯಾನರ್ಜಿ ಅವರನ್ನು ಹೊರತುಪಡಿಸಿದರೆ 30 ಮುಖ್ಯಮಂತ್ರಿಗಳಲ್ಲಿ 29 ಸಿಎಂಗಳು ಕರೋಡಪತಿಗಳಾಗಿದ್ದಾರೆ ಎಂದು ವರದಿ ತಿಳಿಸಿದೆ.
ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೇಮಾ ಖಂಡು ಅವರು ₹163 ಕೋಟಿ ಆಸ್ತಿಯೊಂದಿಗೆ ಎರಡನೇ ಸ್ಥಾನದಲ್ಲಿ ಹಾಗೂ ಒಡಿಶಾ ಸಿಎಂ ನವೀನ್ ಪಟ್ನಾಯಿಕ್ ಅವರು ₹63 ಕೋಟಿಯೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಆ ಪ್ರಕಾರ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ₹8ಕೋಟಿ ಆಸ್ತಿ ಮೌಲ್ಯದೊಂದಿಗೆ ಸಿರಿವಂತ ಸಿಎಂಗಳ ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿದ್ದಾರೆ.
ಪ್ರಸ್ತುತ ದೇಶದಲ್ಲಿ 28 ಪೂರ್ಣ ಪ್ರಮಾಣದ ರಾಜ್ಯಗಳಿದ್ದು 8 ಕೇಂದ್ರಾಡಳಿತ ಪ್ರದೇಶಗಳಿವೆ. ಇದರಲ್ಲಿ ದೆಹಲಿ, ಪುದುಚೇರಿ ಹಾಗೂ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿಗಳನ್ನು ಹೊಂದಿವೆ. ಸದ್ಯ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಸ್ಥಾನ ತೆರವಾಗಿದ್ದು ದೆಹಲಿ, ಪುದುಚೇರಿಯಲ್ಲಿ ಮುಖ್ಯಮಂತ್ರಿಗಳಿದ್ದಾರೆ. ಒಟ್ಟು 30 ಸಿಎಂಗಳ ಚುನಾವಣಾ ಅಫಿಡೆವಿಟ್ ಅನುಸಾರ ಎಡಿಆರ್ ಈ ವರದಿ ತಯಾರಿಸಿದೆ ಎಂದು ದಿ ಹಿಂದೂಸ್ತಾನ್ ಟೈಮ್ಸ್ ವೆಬ್‌ಸೈಟ್ ಸುದ್ದಿ ಬಿತ್ತರಿಸಿದೆ.