Ad Widget .

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ| ಹುಲಿ ಕಾಣದ್ದಕ್ಕೆ ಸಫಾರಿ ವಾಹನ ಚಾಲಕನ ಮೇಲೆ ಕ್ರಮಕ್ಕೆ ಒತ್ತಡ

ಸಮಗ್ರ ನ್ಯೂಸ್: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಸಫಾರಿ ನಡೆಸಿದರು. ಈ ವೇಳೆ ಅವರಿಗೆ ಹುಲಿಗಳೇ ಕಾಣದಿರುವುದಕ್ಕೆ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತು ಆತನ ವಾಹನದ ನೋಂದಣಿ ರದ್ದುಪಡಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಬಿಜೆಪಿಯ ಕೆಲವು ಮುಖಂಡರು ಒತ್ತಡ ಹೇರುತ್ತಿದ್ದಾರೆ. ಆದರೆ ಪ್ರಧಾನಿ ಮತ್ತು ಅರಣ್ಯ ಅಧಿಕಾರಿಗಳು ಭದ್ರತಾ ತಂಡಗಳನ್ನು ದೂಷಿಸುತ್ತಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಪ್ರಧಾನಿ ಮೋದಿ ಅವರು 22 ಕಿಲೋಮೀಟರ್ ಸಫಾರಿ ನಡೆಸಿದರೂ ಒಂದೇ ಒಂದು ಹುಲಿ ಕೂಡ ಕಣ್ಣಿಗೆ ಬೀಳದಿರುವುದಕ್ಕೆ, ಸಫಾರಿ ವೇಳೆ ಚಾಲನೆ ಮಾಡಿದ 29 ವರ್ಷದ ಮಧುಸೂಧನ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹಿರಿಯ ಅಧಿಕಾರಿಗಳಿಗೆ ಬಿಜೆಪಿ ನಾಯಕರು ಒತ್ತಾಯಿಸುತ್ತಿದ್ದಾರೆ ಎಂದು ವರದಿಯಾಗಿದೆ.

Ad Widget . Ad Widget . Ad Widget .

ಹುಲಿಗಳು ಕಾಣಿಸಿಕೊಳ್ಳುವ ಕಡೆಗೆ ಸಫಾರಿ ಮಾರ್ಗವನ್ನು ಆಯ್ಕೆ ಮಾಡಲಾಗಿದೆ ಆದರೆ ಮೋದಿ ಹೋದಾಗ ಕಾಣಲಿಲ್ಲ. ”ಚಾಲಕ ಮಾರ್ಗವನ್ನು ಬದಲಾಯಿಸಬಹುದಿತ್ತು, ಆದರೆ ಅದು ಮಾಡಲಿಲ್ಲ” ಎಂದು ಅಧಿಕಾರಿಗಳು ಹೇಳಿದ್ದಾರೆ.

ಆದಾಗ್ಯೂ, ಮುಖ್ಯ ಕಚೇರಿ ಮತ್ತು ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಹಿರಿಯ ಅಧಿಕಾರಿಗಳು ”ಮಧುಸೂಧನ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಅವರು ತಮ್ಮ ಕೆಲಸವನ್ನು ಮಾಡಿದರು. ಭದ್ರತಾ ತಂಡ ಅಂತಿಮಗೊಳಿಸಿದ ಮಾರ್ಗದಲ್ಲಿ ಅವರು ಪ್ರಧಾನಿಯನ್ನು ಕರೆದೊಯ್ದರು. ವಾಸ್ತವವಾಗಿ, ಇದಕ್ಕೆ ನೇರ ಕಾರಣ ಮೋದಿ ಅವರ ಭದ್ರತಾ ತಂಡ ಹಾಗಾಗಿ ಅವರನ್ನು ದೂಷಿಸಬೇಕು” ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತಾರಣ್ಯ ನಿರ್ದೇಶಕ ರಮೇಶ್‌ಕುಮಾರ್‌ ಮಾತನಾಡಿ, ”ಮಧುಸೂಧನ್ ಅವರ ವಾಹನದ ನೋಂದಣಿಯನ್ನು ರದ್ದುಗೊಳಿಸಲಾಗಿದೆ ಎಂಬ ಹೇಳಿಕೆ ಸುಳ್ಳು. ಚಲಾವಣೆಯಲ್ಲಿರುವ ವಾಹನ ಸಂಖ್ಯೆ ಹಳೆಯದಾಗಿದ್ದು, ಅದರ ಅವಧಿ ಈಗಾಗಲೇ ಮುಗಿದಿದೆ. ವಾಹನ ಈಗ ಬಳಕೆಯಲ್ಲಿಲ್ಲ. ಮಧುಸೂಧನ್ ಅವರದ್ದು ಯಾವುದೇ ತಪ್ಪಿಲ್ಲ. ಹೆಚ್ಚಿನ ಭದ್ರತೆಯ ಹೆಸರಿನಲ್ಲಿ, ವಾಹನಗಳು ಪದೇ ಪದೇ ಆಯ್ದ ಮಾರ್ಗದಲ್ಲಿ ಹೋಗುತ್ತಿದ್ದರಿಂದ ಅಲ್ಲಿ ಅವರಿಗೆ ಹುಲಿಗಳು ಕಾಣಿಸಿಕೊಂಡಿಲ್ಲ” ಎಂದು ಹೇಳಿದ್ದಾರೆ.

ಹುಲಿಗಳು ಕಾಣಿಸದಿರುವದಕ್ಕೆ ಪ್ರಧಾನಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಭದ್ರತೆ ವಿಚಾರವಾಗಿ ಆ ಮಾರ್ಗದಲ್ಲಿ ಹೆಚ್ಚು ವಾಹನಗಳು ಓಡಾಡಿದ್ದರಿಂದ ಹುಲಿಗಳು ಕಾಣಿಸಿಕೊಂಡಿಲ್ಲ ಎಂದು ಅವರಿಗೆ ವಿವರಿಸಿದ್ದೇವೆ. ಈ ವಿಚಾರವಾಗಿ ಅವರು ಎಸ್‌ಪಿಜಿಯನ್ನು ಗದರಿಸಿದ್ದರು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Comment

Your email address will not be published. Required fields are marked *