Ad Widget .

Elephant resque: ಸುಳ್ಯ: ಕೆರೆಗೆ ಬಿದ್ದ ಕಾಡಾನೆಗಳ ಕಾರ್ಯಾಚರಣೆ ಯಶಸ್ವಿ| ಮತ್ತೆ ಕಾಡಿನತ್ತ ಮರಳಿದ ಗಜಪಡೆ

ಸಮಗ್ರ ನ್ಯೂಸ್: ಯಶಸ್ವೀ ಕಾರ್ಯಾಚರಣೆಯ ಮೂಲಕ ನಾಡಿಗೆ ಬಂದು ತೋಟದ ಕೆರೆಗೆ ಬಿದ್ದು ಪರದಾಡಿದ ಕಾಡಾನೆಗಳನ್ನು ರಕ್ಷಣೆ ಮಾಡಲಾಗಿದೆ.

Ad Widget . Ad Widget .

ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಹಾಗು ಜಿಲ್ಲಾ ಪಂಚಾಯ್ ಮಾಜಿ ಸದಸ್ಯ ನವೀನ್ ಕುಮಾರ್ ರೈ ಮೇನಾಲ ಅವರ ನೇತೃತ್ವದಲ್ಲಿ ಸ್ಥಳೀಯರು ಸೇರಿ ಕಾರ್ಯಾಚರಣೆ ನಡೆಸಿ ಅಜ್ಜಾವರದ ತುದಿಯಡ್ಕದಲ್ಲಿ‌ ಕೆರಯಲ್ಲಿ‌ ಸಿಲುಕಿದ್ದ ಆನೆಗಳನ್ನು ಮೇಲಕ್ಕೆ ತರಲಾಯಿತು.

Ad Widget . Ad Widget .

ಸ್ಥಳೀಯರು ಕೆರೆಯ ಬದಿಯಲ್ಲಿ ಅಗೆತ ಮಾಡಿ ಮಣ್ಣು, ಮರಳು ಕಲ್ಲು ಹಾಕಿ ಆನೆಗಳಿಗೆ ಮೇಲೆ ಬರಲು ದಾರಿ ಮಾಡಿ ಕೊಡಲಾಯಿತು. ಕೆರೆಯಿಂದ ಈ ದಾರಿಯ ಮೂಲಕ ಆನೆಗಳು ಮೇಲೆ ಬಂದವು. ಒಂದು ಮರಿ‌ ಆನೆಗೆ ಮೇಲೆ ಬರಲು ಸ್ವಲ್ಪ ಕಷ್ಟ ಆಯಿತು. ಆದನ್ನು ಬಳ್ಳಿ ಹಾಕಿ‌ ಎಳೆದು ಹಿಂದಿನಿಂದ ದೂಡಿ‌ ಕೆರೆಯಿಂದ ಮೇಲಕ್ಕೆ ತರಲಾಯಿತು.

ಅಜ್ಜಾವರ ಗ್ರಾಮದ ತುದಿಯಡ್ಕ ಎಂಬಲ್ಲಿ ತೋಟದ ಮಧ್ಯೆ ದೊಡ್ಡ ಕೆರೆಗೆ ಎರಡು ದೊಡ್ಡ ಆನೆಗಳು ಮತ್ತು ಎರಡು ಚಿಕ್ಕ‌ ಮರಿ ಆನೆಗಳು ಸೇರಿ ನಾಲ್ಕು ಆನೆಗಳ ಹಿಂಡು ಕೆರೆಗಿಳಿದಿದ್ದು ಅಲ್ಲೇ ಸಿಕ್ಕಿ ಕೊಂಡ ಘಟನೆ ಇಂದು ಬೆಳಿಗ್ಗೆ ಬೆಳಕಿದೆ ಬಂದಿತ್ತು. ಆಳೆತ್ತರದ ಕೆರೆಯಲ್ಲಿ ತುಂಬಾ ಕಾರಣ ಆನೆಗಳಿಗೆ ಮೇಲೆ ಬರಲು ಆಗದ ಸ್ಥಿತಿ ಉಂಟಾಗಿತ್ತು. ವಿಷಯ ತಿಳಿದು ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಸ್ಥಳಕ್ಕೆ ಬಂದು ಸ್ಥಳೀಯರ ಸಹಕಾರದಲ್ಲಿ ರಕ್ಷಣಾ ಕಾರ್ಯ ಕೈಗೊಂಡರು.

Leave a Comment

Your email address will not be published. Required fields are marked *