Ad Widget .

ಕೇಸರಿ ಕಲಿಗಳ ಎರಡನೇ ಪಟ್ಟಿ ರಿಲೀಸ್| ಮತ್ತೆ 23 ಅಭ್ಯರ್ಥಿಗಳ ಹೆಸರು ಪ್ರಕಟ

ಸಮಗ್ರ ನ್ಯೂಸ್: ವಿಧಾನಸಭೆ ಚುನಾವಣೆಗೆ ಬಿಜೆಪಿಯು ಇದೀಗ ಎರಡನೇ ಪಟ್ಟಿಯನ್ನು ಬುಧವಾರ ರಾತ್ರಿ ಬಿಡುಗಡೆ ಮಾಡಿದೆ. ಎರಡನೇ ಪಟ್ಟಿಯಲ್ಲಿ 23 ಮಂದಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲೂ ಜಗದೀಶ್ ಶೆಟ್ಟರ್ ಅವರ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಣೆಯಾಗಿಲ್ಲ.

Ad Widget . Ad Widget .

ಮೂಡಿಗೆರೆ ಕ್ಷೇತ್ರದ ಹಾಲಿ ಶಾಸಕ ಎಂ.ಪಿ ಕುಮಾರಸ್ವಾಮಿ ಸೇರಿ 7 ಮಂದಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಮಂಗಳವಾರ 189 ಮಂದಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದ ಬಿಜೆಪಿ ಇದೀಗ ಒಟ್ಟು 212 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಇನ್ನೂ 12 ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿದೆ.

Ad Widget . Ad Widget .

23 ಮಂದಿ ಅಭ್ಯರ್ಥಿಗಳ ವಿವರ:
ದೇವರ ಹಿಪ್ಪರಗಿ-ಸೋಮನಗೌಡ ಪಾಟೀಲ್
ಬಸವನ ಬಾಗೇವಾಡಿ-ಎಸ್.ಕೆ.ಬೆಳ್ಳುಬ್ಬಿ
ಇಂಡಿ-ಕಾಸಗೌಡ ಬಿರಾದಾರ್
ಗುರುಮಿಠ್ಕಲ್-ಲಲಿತಾ ಅಣ್ಣಾಪುರ್
ಬೀದರ್-ಈಶ್ವರ್ ಸಿಂಗ್ ಠಾಕೂರ್
ಭಾಲ್ಕಿ-ಪ್ರಕಾಶ್ ಖಂಡ್ರೆ
ಗಂಗಾವತಿ-ಪರಣ್ಣ ಮುನವಳ್ಳಿ
ಕಲಘಟಗಿ-ನಾಗರಾಜ್ ಛಬ್ಬಿ
ಹಾನಗಲ್-ಶಿವರಾಜ್ ಸಜ್ಜನರ್
ಹಾವೇರಿ-ಗವಿಸಿದ್ದಪ್ಪ ದ್ಯಾಮನ್ನವರ್
ಹರಪನಹಳ್ಳಿ-ಕರುಣಾಕರ ರೆಡ್ಡಿ
ದಾವಣಗೆರೆ ಉತ್ತರ-ಲೋಕಿಕೆರೆ ನಾಗರಾಜ್
ದಾವಣಗೆರೆ ದಕ್ಷಿಣ-ಅಜಯ್ ಕುಮಾರ್
ಮಾಯಕೊಂಡ-ಬಸವರಾಜ್ ನಾಯ್ಕ್
ಚನ್ನಗಿರಿ-ಶಿವಕುಮಾರ್
ಬೈಂದೂರು-ಗುರುರಾಜ್ ಗಂತಿಹೊಳೆ
ಮೂಡಿಗೆರೆ-ದೀಪಕ್ ದೊಡ್ಡಯ್ಯ
ಗುಬ್ಬಿ-ಎಸ್.ಡಿ.ದಿಲೀಪ್ ಕುಮಾರ್
ಶಿಡ್ಲಘಟ್ಟ-ರಾಮಚಂದ್ರ ಗೌಡ
ಕೆಜಿಎಫ್-ಅಶ್ವಿನಿ ಸಂಪಂಗಿ
ಶ್ರವಣಬೆಳಗೊಳ-ಚಿದಾನಂದ
ಅರಸೀಕೆರೆ-ಜಿ.ವಿ.ಬಸವರಾಜು
ಎಚ್.ಡಿ.ಕೋಟೆ-ಕೃಷ್ಣ ನಾಯ್ಕ್ ಅವರಿಗೆ ಟಿಕೆಟ್ ನೀಡಲಾಗಿದೆ.

Leave a Comment

Your email address will not be published. Required fields are marked *