ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ನಳಿನ್ ಕುಮಾರ್ ಮೇಲುಗೈ| ಬಿಎಸ್ವೈ ಸೇರಿದಂತೆ ಹಿರಿಯ ನಾಯಕರ ಕಡೆಗಣನೆ

ಸಮಗ್ರ ನ್ಯೂಸ್: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಬಹುತೇಕ ಬಿಜೆಪಿಯ ಹಿರಿಯರಿಗೆ ಟಿಕೆಟ್ ವಿಚಾರದಲ್ಲಿ ದೊಡ್ಡ ಹಿನ್ನಡೆಯಾಗಿದ್ದು, ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಬಿಜೆಪಿ ಅವರನ್ನು ಕಡೆಗಣಿಸಿದೆ ಎನ್ನಲಾಗಿದೆ.

Ad Widget ... ..

ಕರಡು ಪಟ್ಟಿಯಲ್ಲಿನ ಬಹುತೇಕ ಅಭ್ಯರ್ಥಿಗಳಿಗೆ ಬಿಎಸ್‌ವೈ ಅನುಮೋದನೆ ನೀಡಿದ್ದು, ಅದಾದ ಬಳಿಕ ಪರಿಷ್ಕರಣೆ ವೇಳೆ ರಾಜಾಹುಲಿಯ‌ನ್ನು ಕಡೆಗಣಿಸಲಾಗಿದೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮೇಲುಗೈ ಸಾಧಿಸಿದ್ದು, ಹಿರಿಯರು ಬಿಜೆಪಿಯಲ್ಲಿ ಮೂಲೆಗುಂಪಾಗಿದ್ದಾರೆ.

Ad Widget

ಯಡಿಯೂರಪ್ಪನವರ ಅನುಪಸ್ಥಿತಿಯಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ರಾಷ್ಟ್ರೀಯ ನಾಯಕರು ಪರಿಷ್ಕರಿಸಿದ್ದಾರೆ

ಯಡಿಯೂರಪ್ಪ ಅವರನ್ನು ಸಂಪೂರ್ಣವಾಗಿ ದೂರವಿಟ್ಟು ಗುಜರಾತ್ ಮಾದರಿಯನ್ನು ಕರ್ನಾಟಕದಲ್ಲೂ ಅನುಸರಿಸಲಾಗಿದೆ. ಸುಮಾರು 52 ಹೊಸ ಮುಖಗಳನ್ನು ಅಭ್ಯರ್ಥಿಗಳಾಗಿ ಬಿಜೆಪಿ ಘೋಷಿಸಿದ್ದು, ಅನೇಕ ಹಿರಿಯರಿಗೆ ಗೇಟ್ ಪಾಸ್ ನೀಡಲಾಗಿದೆ.

Leave a Comment

Your email address will not be published. Required fields are marked *