Ad Widget .

ಸೇನೆಯಿಂದ ಏಕಾಏಕಿ ಏರ್ ಸ್ಟ್ರೈಕ್| ಮಹಿಳೆಯರು, ಮಕ್ಕಳು ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಬಲಿ

ಸಮಗ್ರ ನ್ಯೂಸ್: ಮಯನ್ಮಾರ್ ಸೇನಾ ಪಡೆ ಹಠಾತ್ ಏರ್ ಸ್ಟ್ರೈಕ್ ನಡೆಸಿದ ಪರಿಣಾಮ ಮಹಿಳೆಯರು, ಮಕ್ಕಳು ಸೇರಿದಂತೆ 100 ಜನರು ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಮಯನ್ಮಾರ್​ ಸೇನಾ ಪಡೆ ಮುಖ್ಯಸ್ಥ ಜನರಲ್ ಮಿನ್ ಆಂಗ್ ಹ್ಲೈಂಗ್ ತಿಳಿಸಿದ್ದಾರೆ. ಸಾಗಯಿಂಗ್ ಪ್ರದೇಶದ ಕಾನ್ಬಾಲು ನಗರದ ಪಜಿಗಿ ಗ್ರಾಮದ ಹೊರಗೆ ಈ ದಾಳಿ ನಡೆದಿದೆ.

Ad Widget . Ad Widget .

ಕಾನ್ಬಾಳು ನಗರದ ಪಜಿಗಿ ಗ್ರಾಮದ ಹೊರಗೆ ಮಯನ್ಮಾರ್​ ವಿರೋಧಿ ಬಣ ಪ್ರತ್ಯೇಕ ಕಚೇರಿ ತೆರೆಯಲು ಪ್ರಾರಂಭಿಸಿತ್ತು. ಇದಕ್ಕಾಗಿ ನಿನ್ನೆ ಅದ್ಧೂರಿ ಸಮಾರಂಭ ಏರ್ಪಡಿಸಿದ್ದರಿಂದ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು. ಈ ಬಗ್ಗೆ ನಿಖರ ಮಾಹಿತಿ ಪಡೆದ ಮಯನ್ಮಾರ್ ಸೇನಾಪಡೆ ವೈಮಾನಿಕ ದಾಳಿ ನಡೆಸಿದೆ. ಪರಿಣಾಮ ಮಹಿಳೆಯರು, 30ಕ್ಕೂ ಹೆಚ್ಚು ಮಕ್ಕಳು ಸೇರಿ 100 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿಸಲಾಗಿದೆ.

Ad Widget . Ad Widget .

ಕಾರ್ಯಕ್ರಮ ನಡೆಯುತ್ತಿದ್ದ ಪ್ರದೇಶದ ಮೇಲೆ ನಿನ್ನೆ ಬೆಳಗ್ಗೆ 8 ಗಂಟೆ ಸುಮಾರಿಗೆ ಸೇನಾ ವಿಮಾನ ಬಾಂಬ್​ಗಳನ್ನು ಹಾಕಿದೆ. ಮಾಹಿತಿ ಪ್ರಕಾರ ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಜನರಿದ್ದರು ಎನ್ನಲಾಗಿದೆ. ಆದರೆ ಮೃತಪಟ್ಟವರು 100 ಮಂದಿ ಎಂದು ಹೇಳಲಾಗುತ್ತಿದೆ. ಈ ದಾಳಿಯನ್ನು ವಿಶ್ವಸಂಸ್ಥೆಯು ತೀವ್ರವಾಗಿ ಖಂಡಿಸಿದ್ದು ಹಿಂಸಾಚಾರವನ್ನು ನಿಲ್ಲಿಸುವಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

Leave a Comment

Your email address will not be published. Required fields are marked *