ಸಮಗ್ರ ನ್ಯೂಸ್: ನೀರು ಸಮರ್ಪಕವಾಗಿ ಸಿಗದ ಹಿನ್ನೆಲೆಯಲ್ಲಿ ಬಂಟ್ವಾಳದ ನರಿಕೊಂಬು ನಾಯಿಲದ ಪಿಯುಸಿ ವಿದ್ಯಾರ್ಥಿ ತಾನೇ ಒಬ್ಬನೇ ಬಾವಿ ಕೊರೆದು ಈಗ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಪಿಯುಸಿ ವಿದ್ಯಾರ್ಥಿ ಸೃಜನ್ ಬಾವಿ ಕೊರೆದ ವಿದ್ಯಾರ್ಥಿಯಾಗಿದ್ದಾನೆ. ಸೃಜನ್ ಮನೆಗೆ ನಲ್ಲಿಯಲ್ಲಿ ಸಮರ್ಪಕವಾಗಿ ನೀರು ಬಾರದ ಹಿನ್ನೆಲೆಯಲ್ಲಿ ಬಾವಿ ಕೊರೆಯುವ ನಿರ್ಧಾರ ಮಾಡಿ, ಬಾವಿ ಕೊರೆಯಲು ಮುಂದಾಗಿದ್ದಾನೆ.
ಆರಂಭದಲ್ಲಿ ಆತನ ಮಾತನ್ನು ಕುಟುಂಬಸ್ಥರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಸೃಜನ್ ಪ್ರಥಮ ಪಿಯುಸಿ ಪರೀಕ್ಷೆ ಮುಗಿದ ನಂತರ ರಜೆಯಲ್ಲಿ ಒಬ್ಬನೇ ಬಾವಿ ತೋಡಲು ಆರಂಭಿಸಿದ್ದಾನೆ. ಸದ್ಯ ಬಾವಿ ತೋಡಿದ ಸೃಜನ್ ಗೆ ಕಳೆದ ವಾರ ಬೇಕಾದಷ್ಟು ನೀರು ಲಭಿಸಿದೆ.
ಬಾವಿ ಆಳವಾಗುತ್ತಿದ್ದಂತೆ ಮೂರ್ನಾಲ್ಕು ಬುಟ್ಟಿಯಲ್ಲಿ ಮಣ್ಣು ತುಂಬಿಸಿ ಬಳಿಕ ಮೇಲೆ ಬಂದು ಅದನ್ನು ಒಬ್ಬನೇ ಎಳೆದು ಮಣ್ಣು ಖಾಲಿ ಮಾಡುತ್ತಿದ್ದ. ಸೃಜನ್ ಗೆ ಸುಮಾರು 24 ಅಡಿ ಆಳದಲ್ಲಿ ನೀರು ಲಭಿಸಿದ್ದು 3 ಅಡಿಯಷ್ಟು ನೀರು ತುಂಬಿಕೊಂಡಿದೆ. ಸೃಜನ್ ಸಾಹಸಕ್ಕೆ ಈಗ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.