Ad Widget .

ಕೆಲಸ ಕೊಡಿಸುವ ಆಮಿಷ ಒಡ್ಡಿ ವಂಚನೆ| ಫ್ರೀಡಂ ಆ್ಯಪ್ ನ ಸಿಇಒ ಸುಧೀರ್ ಅರೆಸ್ಟ್

ಸಮಗ್ರ ನ್ಯೂಸ್: ಫಾರ್ಟ್ ಟೈಂ ಕೆಲಸದ ಆಮಿಷವೊಡ್ಡಿ ಹಣ ನೀಡದೆ ವಂಚಿಸಿರುವ ಆರೋಪದ ಮೇಲೆ ಇಂಡಿಯನ್ ಮನಿ ಮತ್ತು ಫೈನಾನ್ಸಿಯಲ್ ಫ್ರೀಡಂ ಆ್ಯಪ್‍ನ ಸಿಇಒ ಸಿ.ಎಸ್.ಸುಧೀರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

ವಂಚನೆಗೊಳಗಾಗಿರುವ 21 ಮಂದಿ ನೀಡಿದ ದೂರಿನ ಅನ್ವಯ ಸಿ.ಎಸ್.ಸುಧೀರ್ ಸೇರಿದಂತೆ 23 ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ನಿರೀಕ್ಷಣಾ ಜಾಮೀನು ಪಡೆದಿದ್ದ ಸುಧೀರ್‍ನನ್ನು ಮತ್ತೊಂದು ಪ್ರಕರಣದಲ್ಲಿ ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

4 ಪ್ರತ್ಯೇಕ ವಂಚನೆ ಕೇಸ್ ದಾಖಲಾದ ಹಿನ್ನೆಲೆ ವಿಚಾರಣೆಗೆ ಬಂದಿದ್ದ ಸಿ.ಎಸ್.ಸುಧೀರ್ ನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಳೆದ ಏಪ್ರಿಲ್ 4ರಂದು ಸುಧೀರ್ ಸೇರಿ 22 ಜನರ ವಿರುದ್ದ ಕೇಸ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಸುಧೀರ್ ಅಂಡ್ ಟೀಂ ನಿರೀಕ್ಷಣಾ ಜಾಮೀನು ಪಡೆದಿತ್ತು. ಮಂಗಳವಾರ ಈ ಪ್ರಕರಣ ಸಂಬಂಧ ಬನಶಂಕರಿ ಪೊಲೀಸರು ವಿಚಾರಣೆಗೆ ಕರೆದಿದ್ದರು. ವಿಚಾರಣೆ ನಡೆಯುವಾಗಲೇ ಸುಧೀರ್ ವಿರುದ್ದ 4 ಪ್ರತ್ಯೇಕ ದೂರು ದಾಖಲಾಗಿದ್ದವು. ಈ ದೂರು ಆಧಾರಿಸಿ ಪ್ರತ್ಯೇಕ FIR ದಾಖಲಿಸಿ ಅವರನ್ನು ಬಂಧಿಸಲಾಗಿದೆ. ಸದ್ಯ ACMM ಕೋರ್ಟ್‍ಗೆ ಬನಶಂಕರಿ ಪೊಲೀಸರು ಸುಧೀರ್‍ನನ್ನು ಹಾಜರುಪಡಿಸಿದ್ದಾರೆ.

Leave a Comment

Your email address will not be published. Required fields are marked *