ಸಮಗ್ರ ನ್ಯೂಸ್: ಮಕ್ಕಳಿಬ್ಬರು ಪೋಷಕರಿಗೆ ಗೊತ್ತಿಲ್ಲದೇ ಹೊಳೆಗೆ ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಸುಳ್ಯ-ಕೇರಳ ಗಡಿಭಾಗದ ಅಡೂರು ಎಂಬಲ್ಲಿ ಸಂಭವಿಸಿದೆ.
ಪೋಷಕರಿಗೆ ತಿಳಿಯದೇ ನದಿಗೆ ಹೋಗಿದ್ದು ನದಿ ನೀರಿನಲ್ಲಿ ಮುಳುಗಿ ಕಂದಮ್ಮಗಳು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅಡೂರು ದೇವರಡ್ಕದ ನಿವಾಸಿ ಶಾಫಿ ಎಂಬವರ ಪುತ್ರ ಮುಹಮ್ಮದ್ ಆಶೀಕ್ (7) ಮತ್ತು ಹಸೈನಾರ್ ರವರ ಪುತ್ರ ಮುಹಮ್ಮದ್ ಫಾಸಿಲ್(9) ನೀರಿನಲ್ಲಿ ಮುಳುಗಿ ಮೃತಪಟ್ಟವರು . ಮೃತದೇಹಗಳನ್ನು ಕಾಸರಗೋಡು ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.