ಸಮಗ್ರ ನ್ಯೂಸ್: ತೆಂಗಿನ ಮರದಿಂದ ತೆಂಗಿನಕಾಯಿ ಕೀಳುವ ಸಂದರ್ಭದಲ್ಲಿ ಕಾರ್ಮಿಕನೋರ್ವ ಮರದಿಂದ ಬಿದ್ದು ಸಾವನ್ನಪ್ಪಿದ ಘಟನೆ ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ ಎಂಬಲ್ಲಿ ನಡೆದಿದೆ. ಇಲ್ಲಿನ ನಾರ್ಣಕಜೆ ದಿ|ಕುಂಞ ಎಂಬವರ ಪುತ್ರ ಹರೀಶ (29 ವರ್ಷ) ಎಂಬವರೇ ಮೃತ ವ್ಯಕ್ತಿ.
ಹರೀಶ್ ಇಂದು ಬೆಳಿಗ್ಗೆ ನೆಲ್ಲೂರು ಕೆಮ್ರಾಜೆಯ ಬೊಳ್ಳಾಜೆ ಬಳಿಯ ಕಂದೂರು ಸಚಿನ್ ಕೆ ಎಸ್ ಎಂಬವರ ಜಾಗದಲ್ಲಿ ತೆಂಗಿನ ತೆಗೆಯಲು ಈ ಜಾಗವನ್ನು ನೋಡಿಕೊಳ್ಳುತ್ತಿದ್ದ ಮನಮೋಹನ ಕೆ ಎಂಬವರು ತೆಂಗಿನ ಕಾಯಿ ತೆಗೆಯಲು ಇಬ್ಬರನ್ನು ಕರೆಸಿಕೊಂಡಿದ್ದರೆನ್ನಲಾಗಿದೆ. ಮಧ್ಯಾಹ್ನದ ಸುಮಾರಿಗೆ ಹರೀಶರವರು ತೆಂಗಿನ ಮರದಿಂದ ಕಾಯಿ ಕಿತ್ತು ಇಳಿಯುತ್ತಿದ್ದಾಗ ಸ್ಮೃತಿ ತಪ್ಪಿ ಕೆಳಗೆ ಬಿದ್ದರೆನ್ನಲಾಗಿದೆ.
ಕೂಡಲೇ ಅಲ್ಲಿ ಇದ್ದವರು ಅಸ್ಪತ್ರೆ ಸಾಗಿಸುವ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತರು, ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.