ಸಮಗ್ರ ನ್ಯೂಸ್: ಚುನಾವಣೆ ದಿನಾಂಕ ನಿಗದಿಯಾಗಿ ವಾರ ಕಳೆದರೂ ಭಾರತೀಯ ಜನತಾ ಪಕ್ಷ ಮಾತ್ರ ಇನ್ನು ಅಭ್ಯರ್ಥಿಗಳ ಹುಡುಕಾಟದಲ್ಲಿದೆ. ಕಳೆದೆಲ್ಲ ಚುನಾವಣೆಗೆ ಹೋಲಿಸಿದರೆ ಅಭ್ಯರ್ಥಿ ಆಯ್ಕೆಗೆ ನಾನಾ ರೀತಿಯ ಕಸರತ್ತು, ಮ್ಯಾರಥಾನ್ ಮೀಟಿಂಗ್ ಗಳು ನಡೆಯುತ್ತಿರುವುದು ಇದೆ ಮೊದಲು ಅಂತಾನೆ ಹೇಳಬಹುದು.
ಕೇಸರಿ ಪಾಳಯದಲ್ಲಿ ಅಭ್ಯರ್ಥಿಯಾಗುವುದಕ್ಕೇನು ಕೊರತೆ ಇಲ್ಲ. ಲಕ್ಷಾಂತರ ಕಾರ್ಯಕರ್ತರನ್ನು ಹೊಂದಿದ ಪಕ್ಷ ಅಂದರೆ ಅದು ಭಾರತೀಯ ಜನತಾ ಪಾರ್ಟಿ . ಈ ಬಾರಿ ಮಾತ್ರ ಟಿಕೆಟ್ ಹಂಚಿಕೆ ಮಾಡುವಲ್ಲಿ ಮೀನ ಮೇಷ ಎಣಿಸುತ್ತಿರುವ ಬಿಜೆಪಿ ಯಾವ ಕ್ಷೇತ್ರದಲ್ಲಿ ಯಾರನ್ನು ಕಣಕ್ಕಿಳಿಸಲಿದೆ ಅನ್ನೋದು ಬಾರಿ ಕುತೂಹಲ ಮೂಡಿಸಿದೆ.
ಅದರಲ್ಲೂ ಪುತ್ತೂರು ಮತ್ತು ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಈ ಬಾರಿ ಯಾರು ಕಣಕ್ಕಿಳಿಯಲ್ಲಿದ್ದಾರೆ ಅಂದರೆ ಹತ್ತಾರು ಹೆಸರುಗಳು ಕೇಳಿ ಬರುತ್ತಿವೆ. ಸುಳ್ಯದಲ್ಲಿ ಎಸ್ ಅಂಗಾರರನ್ನು ಬದಲಾಯಿಸಿದರೆ ಭಾಗಿರಥಿ ಮುರುಳ್ಯ ಅಥವಾ ಲತೀಶ್ ಗುಂಡ್ಯ ಹೆಸರು ಕೇಳಿ ಬರುತ್ತಿವೆ. ಇದೇ ವಿಚಾರದಲ್ಲಿ ಇನ್ನೊಂದಷ್ಟು ಭಾಗದ ಜನರು ಶಿವಪ್ರಸಾದ್ ಪೆರುವಾಜೆ ಅಥವಾ ಸೀತರಾಮ ಭರಣ್ಯ ರವರ ಹೆಸರನ್ನು ಹೇಳುತ್ತಿದ್ದಾರೆ.
ಆದರೆ ಸುಳ್ಯಕ್ಕೆ ಈ ಬಾರಿ ಯಾರೊಬ್ಬರು ಊಹಿಸಿರದ ರೀತಿಯಲ್ಲಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ನಡೆದಿದ್ದು ಇಲ್ಲಿ ವರೆಗೂ ಆ ಅಭ್ಯರ್ಥಿಯ ಪೋಟೊ ಅಥವಾ ಬಯೋಡಾಟಗಳು ಯಾವುದೇ ಮಾಧ್ಯಮಗಳಲ್ಲಿ ಪ್ರಸಾರಗೊಂಡಿಲ್ಲ. ಅಚ್ಚರಿಯ ರೀತಿಯಲ್ಲಿ ಈ ಆಯ್ಕೆ ನಡೆದಿದ್ದು ಇನ್ನೇನೋ ಕೆಲವೇ ಗಂಟೆಗಳಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಹೆಸರು ಘೋಷಣೆಯಾಗಲಿದೆ.