ಸಮಗ್ರ ನ್ಯೂಸ್: ಪ್ರಪಂಚದಲ್ಲೇ ಅತೀ ಉತ್ತಮ ಮತ್ತು ಆರೋಗ್ಯಕರವಾದ ಈ ಹಣ್ಣು ನಿಮಿಷಗಳಲ್ಲಿ ಯಾರನ್ನಾದರೂ ಕೊಲ್ಲುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಹೌದು, ಇಂದು ನಾವು ನಿಮ್ಮನ್ನು ಸಾವಿನ ದವಡೆಗೆ ದೂಡಬಲ್ಲ ಒಂದು ಹಣ್ಣಿನ ಬಗ್ಗೆ ಹೇಳಲಿದ್ದೇವೆ.
ಈ ಹಣ್ಣನ್ನು ಇಡೀ ವಿಶ್ವದ ಆರೋಗ್ಯಕರ ಹಣ್ಣು ಎಂದು ಪರಿಗಣಿಸಲಾಗಿದ್ದರೂ, ಈ ಹಣ್ಣು ನಿಮಿಷಗಳಲ್ಲಿ ನಿಮ್ಮ ಪ್ರಾಣವನ್ನು ತೆಗೆಯಬಹುದು. ಇದು ಎಷ್ಟು ಅಪಾಯಕಾರಿ ಎಂದರೆ ಒಂದು ನಿರ್ದಿಷ್ಟ ಪ್ರಮಾಣದ ಬೀಜಗಳು ಆಕಸ್ಮಿಕವಾಗಿ ದೇಹದೊಳಗೆ ಪ್ರವೇಶಿಸಿದರೆ, ನಿಮಿಷಗಳಲ್ಲಿ ಪ್ರಾಣ ಹೋಗಬಹುದು. ಆ ಹಣ್ಣು ಯಾವುದು ಎಂದು ತಿಳಿಯೋಣ.
ಇಂಥಹ ಒಂದು ವಿಚಿತ್ರಕಾರಿ ಗುಣ ಹೊಂದಿರುವ ಹಣ್ಣು ಯಾವುದೆಂದರೆ ಅದು ಆ್ಯಪಲ್. ಈ ಸೇಬು(Apple) ಹಣ್ಣು ನಮ್ಮೆಲ್ಲರ ನೆಚ್ಚಿನ ಹಣ್ಣುಗಳಲ್ಲಿ ಒಂದಾಗಿದೆ. ಇದರಲ್ಲಿರುವ ಬೀಜದೊಳಗೆ ಅಮಿಗ್ಡಾಲಿನ್ ಎಂಬ ಅಂಶವಿದೆ. ಇದು ದೇಹದೊಳಗೆ ತಲುಪುವ ಮೂಲಕ ಸಾಕಷ್ಟು ಮಾರಕವಾಗಬಹುದು.
ಅಮಿಗ್ಡಾಲಿನ್ ಸೈನೈಡ್ ಮತ್ತು ಸಕ್ಕರೆಯಿಂದ ಕೂಡಿದ ಸೈನೋಜೆನಿಕ್ ಗ್ಲೈಕೋಸೈಡ್ ಆಗಿದೆ. ಈ ಎರಡೂ ಜೀರ್ಣಕಾರಿ ಕಿಣ್ವಗಳೊಂದಿಗೆ ಕಾರ್ಯನಿರ್ವಹಿಸುವ ಮೂಲಕ ಹೈಡ್ರೋಜನ್ ಸೈನೈಡ್ (HCN) ಆಗಿ ಪರಿವರ್ತನೆಗೊಳ್ಳುತ್ತವೆ. ಬೀಜಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿದರೆ ಒಳಿತು.
ಒಂದುವೇಳೆ ಪ್ರತೀದಿನ ಸೇಬು ಸೇವಿಸುವಾಗ ಬೀಜಗಳನ್ನು ತಿಂದರೆ ವಾಂತಿ, ತಲೆನೋವು ಮತ್ತು ಹೊಟ್ಟೆನೋವಿನಂತಹ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಪರಿಸ್ಥಿತಿ ಗಂಭೀರವಾಗಿದ್ದರೆ, ಉಸಿರಾಟದ ತೊಂದರೆ, ಬೆವರುವುದು ಮತ್ತು ಬಿಪಿ ಕಡಿಮೆಯಾಗುವುದು ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಇದು ಪ್ರಾಣಕ್ಕೇ ಕುತ್ತು ತರಬಲ್ಲದು.