ಸಮಗ್ರ ನ್ಯೂಸ್: ಮಹಾರಾಷ್ಟ್ರದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಅಕೋಲಾ ಜಿಲ್ಲೆಯ ಬಾಲಾಪುರ ತಾಲೂಕಿನ ಪರಾಸ್ ಪ್ರದೇಶದಲ್ಲಿ ಬೃಹತ್ ಮರ ಬಿದ್ದು 7 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಜಿಲ್ಲೆಯ ಬಾಲಾಪುರ ತಾಲೂಕಿನ ಪರಾಸ್ ಪ್ರದೇಶದಲ್ಲಿರುವ ಬಾಬೂಜಿ ಮಹಾರಾಜ್ ದೇವಾಲಯದ ಸಂಕೀರ್ಣದ ತಗಡಿನ ಶೆಡ್ ಮೇಲೆ ಬೇವಿನ ಮರ ಬಿದ್ದಿದೆ. ಇದು ಶೆಡ್ ಕುಸಿತಕ್ಕೆ ಕಾರಣವಾಯಿತು. ಇದರ ನಂತರ, ಶೆಡ್ ನಲ್ಲಿದ್ದ 7 ಜನರು ಅಲ್ಲಿಯೇ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ 33 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಮಳೆ ಮತ್ತು ಚಂಡಮಾರುತದ ಸಮಯದಲ್ಲಿ ಒಟ್ಟು 30 ರಿಂದ 40 ಜನರು ತಗಡಿನ ಶೆಡ್ ನಲ್ಲಿದ್ದರು.ಈ ವೇಳೆ ಮರ ಬಿದ್ದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದ ಮೂರು ಸಾವುಗಳು ಆಸ್ಪತ್ರೆಯಲ್ಲಿ ಸಂಭವಿಸಿವೆ. ಗಾಯಾಳುಗಳಿಗೆ ಅಕೋಲಾ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.