Ad Widget .

ಮುಂದಿನ ವಾರದಿಂದ ರಾಜ್ಯಾದ್ಯಂತ ‘ಅಮುಲ್’ ಉತ್ಪನ್ನಗಳ ಮಾರಾಟ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಅಮುಲ್ ಉತ್ಪನ್ನಗಳ ಮಾರಾಟಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಇದರ ಮಧ್ಯೆ ಇ ಕಾಮರ್ಸ್ ಮೂಲಕ ಅಮುಲ್ ಹಾಲು ಮತ್ತು ಮೊಸರು ಮಾರಾಟವನ್ನು ಮುಂದಿನ ವಾರದಿಂದ ಆರಂಭಿಸಲಾಗುತ್ತಿದೆ.

Ad Widget . Ad Widget .

ಈ ಕುರಿತಂತೆ ಖಾಸಗಿ ಸುದ್ದಿ ವಾಹಿನಿಯೊಂದರ ಜೊತೆಗೆ ಮಾತನಾಡಿರುವ ಅಮುಲ್ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ, ಕೆಎಂಎಫ್ ಹಾಗೂ ಅಮುಲ್ ಎರಡೂ ರೈತರ ಸಹಕಾರಿ ಸಂಸ್ಥೆಗಳಾಗಿದ್ದು, ಅನಾರೋಗ್ಯಕರ ಪೈಪೋಟಿ ನಡೆಸುವುದಿಲ್ಲ ಎಂದಿದ್ದಾರೆ.

Ad Widget . Ad Widget .

ಅಮುಲ್ ತಾಜಾ ಟೋನ್ಡ್ ಮಿಲ್ಕ್ ಲೀಟರ್ ಗೆ 54 ರೂಪಾಯಿಗಳಾಗಿದ್ದರೆ, ಗೋಲ್ಡ್ ಮಿಲ್ಕ್ 64 ರೂಪಾಯಿಗಳು. ಮೊಸರು ಲೀಟರ್ ಗೆ 66 ರೂಪಾಯಿ ಎಂದು ಅವರು ಮಾಹಿತಿ ನೀಡಿದ್ದಾರೆ.

Leave a Comment

Your email address will not be published. Required fields are marked *