ಸಮಗ್ರ ನ್ಯೂಸ್: ಸರಿಯಾದ ನಿರ್ವಹಣೆ ಇಲ್ಲದೆ ಸಾರ್ವಜನಿಕ ಸೇವೆಗೆಂದು ಮೀಸಲಿರಿಸಿದ್ದ ಅಂಬ್ಯುಲೆನ್ಸ್ ಶಿಥಿಲಾವಸ್ಥೆಗೊಂಡಿದ್ದು, ಸದ್ಯ ಅದನ್ನು ನವೀಕರಣಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ಲಭ್ಯವಾಗಿದೆ.
ತಾಲೂಕಿನ ಐವರ್ನಾಡು ಜನಸ್ಪಂದನಾ ಟ್ರಸ್ಟ್ ವತಿಯಿಂದ ನೀಡಲ್ಪಟ್ಟಿದ್ದ ಅಂಬ್ಯುಲೆನ್ಸ್ ಸರಿಯಾದ ನಿರ್ವಹಣೆ ಇಲ್ಲದೆ ಪಾಳುಬಿದ್ದಿತ್ತು. ಈ ಕುರಿತಂತೆ ನಿಮ್ಮ ‘ಸಮಗ್ರ ಸಮಾಚಾರ’ ವರದಿ ಬಿತ್ತರಿಸಿದ ಬಳಿಕ ಮಾಧ್ಯಮಗಳೂ ವರದಿ ಮಾಡಿದ್ದವು.
ವರದಿ ಬಳಿಕ ಎಚ್ಚೆತ್ತುಕೊಂಡ ಸ್ಥಳೀಯ ಮುಖಂಡರು ಅಂಬ್ಯುಲೆನ್ಸ್ ಅನ್ನು ದುರಸ್ತಿಗೊಳಿಸಿದ್ದು, ಮತ್ತೆ ಸಾರ್ವಜನಿಕ ಸೇವೆಗೆ ಲಭಿಸುವಂತಾಗಿದೆ.

ತುರ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಪಯೋಗಕ್ಕೆ ಲಭಿಸಲೆಂದು ಕೆಲವರ್ಷಗಳ ಹಿಂದೆ ಇಲ್ಲಿನ ಪಂಚಾಯತ್ ಗೆ ದಾನಿಗಳ ಸಹಾಯದಿಂದ ಅಂಬ್ಯುಲೆನ್ಸ್ ಒದಗಿಸಲಾಗಿತ್ತು.