Ad Widget .

ಬಂಟ್ವಾಳ: ಬಹುಮುಖ ಪ್ರತಿಭೆಯ ಯಕ್ಷಗಾನ ಕಲಾವಿದ ನಿಧನ

ಸಮಗ್ರ ನ್ಯೂಸ್: ಸಸಿಹಿತ್ಲು ಮೇಳದ ಬಹುಮುಖ ಪ್ರತಿಭೆಯ ಪದವೀಧರ ಕಲಾವಿದ ನಲ್ಕ ಜಗದೀಶ(56) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

Ad Widget . Ad Widget .

ಕಳೆದ 21 ವರುಷಗಳಿಂದ ಸಸಿಹಿತ್ಲು ಮೇಳದಲ್ಲಿ ಕಥಾನಾಯಕನ ಪಾತ್ರ ನಿರ್ವಹಿಸುತಿದ್ದರು. ಪೋಷಕ ಪಾತ್ರದಲ್ಲೂ ಸೈ ಎನಿಸಿಕೊಂಡವರು ಭಗವತಿ ಮಹಾತ್ಮೆಯಲ್ಲಿ ಈಶ್ವರನ ಪಾತ್ರ ದೇವಿ ಮಹಾತ್ಮೆಯಲ್ಲಿ ವಿಷ್ಣು, ರಕ್ತಬೀಜ ಪಾತ್ರನಿರ್ವಹಿಸುತಿದ್ದರು. ಪತ್ನಿ ಹವ್ಯಾಸಿ ಯಕ್ಷಗಾನ ಕಲಾವಿದೆ ಹೇಮಾ, ಒಂದು ಹೆಣ್ಣು, ಒಂದು ಗಂಡು ಮಗುವನ್ನು ಅಗಲಿದ್ದಾರೆ.

Ad Widget . Ad Widget .

ಸಸಿಹಿತ್ಲು ಮೇಳದ ಸಂಚಾಲಕ ದಯಾನಂದ ಗುಜರನ್ ಮತ್ತು ರಾಜೇಶ್ ಗುಜರನ್, ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಟದ ಜಿಲ್ಲಾ ಸಂಚಾಲಕ ಸರಪಾಡಿ ಅಶೋಕ ಶೆಟ್ಟಿ, ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ, ಭಾಗವತ ಹೆಬ್ರಿ ಗಣೇಶ್ ಮೊದಲಾದವರು ಮೃತರ ಅಮ್ಮುಂಜೆ ಯ ಸ್ವಗೃಹದಲ್ಲಿ ಅಂತಿಮ ದರ್ಶನ ಪಡೆದರು.

Leave a Comment

Your email address will not be published. Required fields are marked *