ಮಾಜಿ‌ ಸಂಸದ ದಿ.ಆರ್ ಧ್ರುವನಾರಾಯಣ್ ಪತ್ನಿ ನಿಧನ| ಪತಿ ಅಗಲಿದ 15 ದಿನದಲ್ಲೇ ಸಾವನ್ನಪ್ಪಿದ ವೀಣಾ

ಸಮಗ್ರ ನ್ಯೂಸ್: ಕಾಂಗ್ರೆಸ್ ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ ಅಗಲಿ ಇನ್ನು ಒಂದು ತಿಂಗಳೇ ಕಳೆದಿಲ್ಲ. ಈ ದುಃಖ ಮಾಸುವ ಮುನ್ನವೇ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಧ್ರುವನಾರಾಯಣ ಪತ್ನಿ ವೀಣಾ ವಿಧಿವಶರಾಗಿದ್ದಾರೆ.

Ad Widget ... ..

ವೀಣಾ ಧ್ರುವನಾರಾಯಣ ಅವರಿಗೆ 55 ವರ್ಷ ವಯಸ್ಸಾಗಿತ್ತು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ವೀಣಾ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಳೆದ ಎರಡು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

Ad Widget

ಕಳೆದ ಮಾರ್ಚ್ 11ರಂದು ಆರ್‌. ಧ್ರುವನಾರಾಯಣ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಧ್ರುವನಾರಾಯಣ್ ನಿಧನದ ನಂತರ ವೀಣಾ ಅವರ ಕಾಯಿಲೆ ಮತ್ತಷ್ಟು ಉಲ್ಭಣಿಸಿತ್ತು. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ವೀಣಾ ಮೃತಪಟ್ಟಿದ್ದಾರೆ.

Leave a Comment

Your email address will not be published. Required fields are marked *