Ad Widget .

ಮಂಗಳೂರು: ಹಿಂದೂ ಯುವಕನನ್ನು ಮದುವೆಯಾದ ಮುಸ್ಲಿಂ ಯುವತಿ

ಸಮಗ್ರ ನ್ಯೂಸ್: ಮುಸ್ಲಿಂ ಯುವತಿ ಹಿಂದೂ ಹುಡುಗನನ್ನು ಪ್ರೀತಿಸಿ ಮದುವೆಯಾದ ಘಟನೆ ಕರಾವಳಿಯಲ್ಲಿ ಬೆಳಕಿಗೆ ಬಂದಿದೆ.

Ad Widget . Ad Widget .

ಮುಸ್ಲಿಂ ಧರ್ಮಕ್ಕೆ ಸೇರಿದ ಕೇರಳದ ಮಣಪ್ಪುರಂ ಮೂಲದ ಯುವತಿ ಫಿದಾ ಫಾತಿಮ ಹಿಂದೂ ಯುವಕನನ್ನು ಮದುವೆಯಾಗಿದ್ದಾಳೆ. ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಹಾಗೂ ಕಾಸರಗೋಡು ಸಂಘ ಪರಿವಾರದ ಕಾರ್ಯಕರ್ತರ ಸಹಾಯದಿಂದ ಅಂತರ್ ಧರ್ಮದ ಜೋಡಿ ಮದುವೆಯಾಗಳು ಸಹಕರಿಸಿದ್ದಾರೆ ಎನ್ನಲಾಗಿದೆ.

Ad Widget . Ad Widget .

ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರೇಮ ಜೋಡಿ ಧರ್ಮದ ಗೋಡೆ ಒಡೆದು ತಮ್ಮ ಪ್ರೀತಿಯನ್ನು ಪರಿಪೂರ್ಣಗೊಳಿಸಿದ್ದಾರೆ. ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಮದುವೆಗೂ ಮುನ್ನ ಮುಸ್ಲಿಂ ಯುವತಿ ಹಿಂದೂ ಧರ್ಮವನ್ನು ಸ್ವೀಕರಿಸಿ ತನ್ನ ಪ್ರಿಯಕರನ ಕೊರಳಿಗೆ ಹಾರ ಹಾಕಿದ್ದಾಳೆ.

ಫಿದಾ ಫತಿಮಾ ಸದ್ಯ ‘ಸ್ಮಿತಾ’ ಎಂದು ಮರುನಾಮಕರಣ ಮಾಡಿಕೊಂಡಿದ್ದಾರೆ. ಈ ಪ್ರೀತಿಯ ಜೋಡಿಗೆ ಹಿಂದೂ ಕಾರ್ಯಕರ್ತರು ಸಾಕ್ಷಿಯಾಗಿದ್ದು, “ಮರಳಿ ಮಾತೃ ಧರ್ಮಕ್ಕೆ ಸ್ವಾಗತ ಸಹೋದರಿ” ಎಂದು ಜೋಡಿಗೆ ಆಶೀರ್ವದಿಸಿದ್ದಾರೆ.

Leave a Comment

Your email address will not be published. Required fields are marked *