ಕಾಣಿಯೂರು: ರೈಲ್ವೆ ಟ್ರಾಕ್ ನಲ್ಲಿ ಶವವಾಗಿ ಪತ್ತೆಯಾದ ಕೆಎಸ್ಆರ್ ಟಿಸಿ‌ ಡ್ರೈವರ್

ಸಮಗ್ರ ನ್ಯೂಸ್: ಪುತ್ತೂರು ವಿಭಾಗದ ಕೆ.ಎಸ್.ಆರ್.ಟಿ.ಸಿ ಡ್ರೈವರ್ ಮೃತದೇಹ ಕಾಣಿಯೂರು ರೈಲ್ವೇ ಟ್ರ್ಯಾಕ್ ನಲ್ಲಿ ಪತ್ತೆಯಾದ ಘಟನೆ ಎ.7 ರಂದು ನಡೆದಿದೆ.

Ad Widget ... ..

ರಾತ್ರಿ ಕರ್ತವ್ಯದಿಂದ ಇಳಿದ ಕೆಎಸ್ಆರ್ ಟಿಸಿ ಕಂಡಕ್ಟರ್ ಕಮ್ ಡ್ರೈವರ್ ಆಗಿರುವ ಕುಸುಮಾಧರ ಗೌಡ ಅಭೀರ (34 ವ.) ಮೃತಪಟ್ಟವರು.

Ad Widget

ಸುಮಾರು 8 ವರ್ಷಗಳಿಂದ ಕೆಎಸ್ಆರ್ ಟಿಸಿ ಉದ್ಯೋಗಿಯಾಗಿದ್ದ ಮೃತರು 1 ವರ್ಷದ ಹಿಂದೆ ಮದುವೆಯಾಗಿದ್ದರು.

ದುರ್ಘಟನೆ ಕಾಣಿಯೂರು ರೈಲ್ವೇ ಟ್ರ್ಯಾಕ್ ನಲ್ಲಿ ಮಧ್ಯರಾತ್ರಿ ನಡೆದಿದ್ದು, ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

Leave a Comment

Your email address will not be published. Required fields are marked *