ಮಂಗಳೂರು: ಕರಾವಳಿಯ ಬಿಜೆಪಿ ಶಾಸಕನೊಂದಿಗಿನ ಖಾಸಗಿ ಫೋಟೋ ವೈರಲ್| ಮಹಿಳೆಯಿಂದ ದೂರು ದಾಖಲು

ಸಮಗ್ರ ನ್ಯೂಸ್: ಮಹಿಳೆಯೊಬ್ಬರು ಕರಾವಳಿಯ ಬಿಜೆಪಿ ಶಾಸಕರೊಬ್ಬರ ಜೊತೆಗೆ ಆತ್ಮೀಯವಾಗಿರುವ ಸೆಲ್ಫಿ ಪೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಈ ಬಗ್ಗೆ ಸಂತ್ರಸ್ತ ಮಹಿಳೆಯು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Ad Widget ... ..

ಈಕೆ ನೆಕ್ಕಿಲಾಡಿ ಸಮೀಪದವರು ಎಂದು ಗುರುತಿಸಲಾಗಿದ್ದು, ಈಕೆ ಎ.೫ ರಂದು ಸಂಜೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ. ದೂರು ಸ್ವೀಕರಿಸಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಪೋಟೊ ಅಸಲಿ/ ಎಡಿಟೆಡ್ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸ್ ತನಿಖೆ ನಡೆಯಲಿದೆ.

Ad Widget

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಫೋಟೊಗಳು ರಾಜಕೀಯ ವಲಯದಲ್ಲೂ ತಲ್ಲಣ ಮೂಡಿಸಿದೆ. ಮುಂಬರುವ ವಿಧಾನ ಸಭಾ ಚುನಾವಣೆಯ ಮೇಲೆ ಈ ಫೋಟೊಗಳು ಪರಿಣಾಮ ಬೀರುವ ಸಾಧ್ಯತೆಯಿದೆ.

ಈ ಕುರಿತಂತೆ ‌ಫೋಟೋದಲ್ಲಿ‌ ಇರುವ ಆ ಶಾಸಕರು ‘ಸಮಗ್ರ ಸಮಾಚಾರ‘ದೊಂದಿಗೆ ಮಾತನಾಡಿದ್ದು, ಇದು ರಾಜಕೀಯ ‌ಲಾಭಕ್ಕಾಗಿ ನಡೆಸಿದ ಕುತಂತ್ರ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಈ ಕುರಿತು ಪೊಲೀಸರಿಗೆ ದೂರು ನೀಡಲಾಗುವುದು’ ಎಂದು ತಿಳಿಸಿದ್ದಾರೆ.

Leave a Comment

Your email address will not be published. Required fields are marked *