Ad Widget .

ಮಂಗಳೂರು: ದೆಹಲಿ ಮೂಲದ ಯುವತಿ ನಾಪತ್ತೆ…!!

Samagra news: ಹೊಸದಿಲ್ಲಿಯ ಯುವತಿಯೊಬ್ಬಳು ಮಂಗಳೂರಿನಲ್ಲಿ ನಾಪತ್ತೆಯಾಗಿರುವ ಕುರಿತಂತೆ ದೂರು ದಾಖಲಾಗಿದೆ.

Ad Widget . Ad Widget .

ನಾಪತ್ತೆಯಾದ ಯುವತಿ ದೀಕ್ಷಿತಾ ಅಲಿಯಾಸ್‌ ರಿಯಾ (20). ಈಕೆ ಅಶೋಕನಗರ ಗೋಕುಲ ಕಲ್ಯಾಣ ಮಂಟಪ ಬಳಿ ತನ್ನ ಬಂಧುಗಳ ಮನೆಯಲ್ಲಿ ಕಳೆದ 5 ವರ್ಷಗಳಿಂದ ನೆಲೆಸಿದ್ದರು.

Ad Widget . Ad Widget .

ಸಾಮಾಜಿಕ ಜಾಲತಾಣದಲ್ಲಿ ವ್ಯಸ್ತವಾಗಿರುತ್ತಿದ್ದ ಹಿನ್ನೆಲೆಯಲ್ಲಿ ಮನೆಯವರು ಬುದ್ಧಿಮಾತು ಹೇಳಿದ್ದರು ಎನ್ನಲಾಗಿದ್ದು. ಎಪ್ರಿಲ್ 4ರಂದು ಸಂಜೆ 5 ಗಂಟೆಗೆ ಮನೆಯಿಂದ ತೆರಳಿದವರು ಮರಳಿಲ್ಲ.

ಚಹರೆ: ಎತ್ತರ 5.1 ಅಡಿ ಎತ್ತರ, ದುಂಡು ಮುಖ ಗೋಧಿ ಮೈಬಣ್ಣ. ಮನೆಯಿಂದ ಹೋಗುವಾಗ ಹಳದಿ ನೀಲಿ ಮಿಶ್ರಿತ ಚೂಡಿದಾರ ಧರಿಸಿದ್ದು, ಹಿಂದಿ ಭಾಷೆ ಬಲ್ಲವರಾಗಿದ್ದಾರೆ. ಯುವತಿ ಕಂಡುಬಂದಲ್ಲಿ ಉರ್ವ ಪೊಲೀಸ್‌ ಠಾಣೆ ಅಥವಾ ಕಂಟ್ರೋಲ್‌ ರೂಮ್‌ ಗೆ ಮಾಹಿತಿ ನೀಡುವಂತೆ ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *