Ad Widget .

ಈ ಚಿತ್ರ ಪೇಂಟಿಂಗ್ ಅಲ್ಲ, ಫೋಟೋ ಶೂಟ್ ಕೂಡಾ ಅಲ್ಲ; ಹಾಗಾದ್ರೆ ಮತ್ತೇನು?

ಸಮಗ್ರ ನ್ಯೂಸ್: ಈ ಚಿತ್ರವನ್ನು ನೋಡಿದರೆ ಯಾವುದೋ ಒಂದು ಪೇಂಟಿಂಗ್ ನೋಡಿದಂತೆ ಅನಿಸಬಹುದು. ಆದರೆ ನಿಮ್ಮ ಊಹೆ ತಪ್ಪು. ಇದನ್ನು ರಂಗೋಲಿ ಎಂದರೆ ನಂಬುತ್ತೀರಾ? ಹೌದು! ಈ ಶ್ರೀರಾಮ ಮತ್ತು ಕೌಸಲ್ಯೆಯ ರಂಗೋಲಿಯಾಗಿದ್ದು ಇದನ್ನು ಖ್ಯಾತ ರಂಗೋಲಿಕಾರ ಅಕ್ಷಯ್​ ಜಾಲಿಹಾಳ್​ ರಚಿಸಿದ್ದಾರೆ.

Ad Widget . Ad Widget .

ಅಕ್ಷಯ್​ ಜಾಲಿಹಾಳ್​ ಕೈಯಲ್ಲಿ ರಂಗೋಲಿ ಪುಡಿ ನೆಲಕ್ಕೆ ಉದುರಿ ಈ ಚಿತ್ರ ಅತ್ಯದ್ಬುತವಾಗಿ ಮೂಡಿ ಬಂದಿದೆ. ಈ ಚಿತ್ರದಲ್ಲಿ ಬಲರಾಮ ಹಾಗೂ ತಾಯಿ ಕೌಶಲ್ಯ ಪ್ರೀತಿ ವಾತ್ಸಲ್ಯ ವ್ಯಕ್ತಗೊಂಡಿದೆ. ಇದಕ್ಕಾಗಿ ರಂಗೋಲಿಕಾರರು 45ಕ್ಕೂ ಹೆಚ್ಚು ಬಣ್ಣಗಳನ್ನು ಬಳಸಿದ್ದು ಸತತ 13 ಗಂಟೆಗಳ ಕಾಲ ಪರಿಶ್ರಮ ಪಟ್ಟಿದ್ದಾರೆ.

Ad Widget . Ad Widget .

ಜಿಗಣಿಯಲ್ಲಿ ಆಯೋಜನೆ ರಾಮಾಯಣ ಪಾರಾಯಣ ನಾಟಕ ಹರಿಕಥೆ ಕಾರ್ಯಕ್ರಮದ ಭಾಗವಾಗಿ ಈ ಚಿತ್ರವನ್ನು ಬಿಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅಕ್ಷಯ ಜಾಲಿಹಾಳ್ ರಂಗೋಲಿ ಚಿತ್ರ ಎಲ್ಲರ ಗಮನ ಸೆಳೆದಿದೆ.

Leave a Comment

Your email address will not be published. Required fields are marked *