Ad Widget .

ಸಚಿವ ಎಸ್.ಅಂಗಾರ ಸೇರಿ 25 ಮಂದಿ ಹಾಲಿ ಶಾಸಕರಿಗೆ ಟಿಕೆಟ್ ಡೌಟ್| ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮಹತ್ವದ ನಿರ್ಧಾರ

ಸಮಗ್ರ ನ್ಯೂಸ್: ಆಡಳಿತಾ ವಿರೋಧಿ ಅಲೆ ಹಾಗೂ ಅನ್ಯ ಕಾರಣಗಳಿಗಾಗಿ ಆಡಳಿತಾರೂಢ ಬಿಜೆಪಿಯ ಎರಡು ಡಜನ್‍ಗೂ ಅಧಿಕ ಶಾಸಕರಿಗೆ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಈ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದ್ದು, ಹಾಲಿ ಶಾಸಕರಿಗೆ ಕೋಕ್ ನೀಡಿ ಹೊಸ ಮುಖಗಳಿಗೆ ಮನ್ನಣೆ ನೀಡಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.

Ad Widget . Ad Widget .

ಆಡಳಿತ ವಿರೋಧಿ ಹಾಗೂ ಕೆಲವು ಗಂಭೀರ ಸ್ವರೂಪದ ಆರೋಪಗಳನ್ನು ಎದುರಿಸುತ್ತಿರುವ ಹಿನ್ನಲೆಯಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನೀಡದೆ ಹೊಸಬರಿಗೆ ವಿಶೇಷವಾಗಿ ಪಕ್ಷ ನಿಷ್ಠರಿಗೆ ಟಿಕೆಟ್ ಘೋಷಣೆ ಮಾಡಬೇಕೆಂದು ಕಾರ್ಯಕರ್ತರೇ ಮನವಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

Ad Widget . Ad Widget .

ಆಪರೇಷನ್ ಕಮಲದಿಂದ ಕಳೆದ ಬಾರಿ ಬಿಜೆಪಿಗೆ ಬಂದಿದ್ದ ಹಾಲಿ ಸಚಿವ ಶಿವರಾಮ್ ಹೆಬ್ಬಾರ್‍ಗೆ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದೆ. ಅನರ್ಹತೆ ಭೀತಿ ಎದುರಿಸುತ್ತಿರುವ ಹಾವೇರಿ ಶಾಸಕ ನೆಹರು ಓಲೇಕಾರ್ ಗೆ ಸ್ವಕ್ಷೇತ್ರದಲ್ಲೇ ಕಾರ್ಯಕರ್ತರಿಂದ ಟಿಕೆಟ್ ನೀಡಲು ವಿರೋಧ ವ್ಯಕ್ತವಾಗಿರುವುದರಿಂದ ಬಿಜೆಪಿ ಹೊಸ ಮುಖಗಳಿಗೆ ಮನ್ನಣೆ ನೀಡುವ ಸಾಧ್ಯತೆ ಇದೆ.

ವಯಸ್ಸಿನ ಕಾರಣಕ್ಕಾಗಿ ದಾವಣಗೆರೆ ಉತ್ತರಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಈ ಬಾರಿ ಸ್ಪರ್ಧೆ ಮಾಡುವುದು ಅನುಮಾನವಾಗಿದ್ದು, ತಮ್ಮ ಬದಲಿಗೆ ಪುತ್ರಿ ಇಲ್ಲವೇ ತಾವು ಹೇಳಿದವರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ.

ಮಾಯಕೊಂಡದ ಹಾಲಿ ಶಾಸಕ ಪ್ರೋ.ಲಿಂಗಣ್ಣಗೂ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ. ಕ್ಷೇತ್ರದಲ್ಲಿ ಅವರು ಸಕ್ರಿಯವಾಗಿರದ ಕಾರಣ ಹೊಸಬರಿಗೆ ಟಿಕೆಟ್ ಕೊಡಬೇಕೆಂದು ಜಿಲ್ಲಾ ಕೋರ್ ಕಮಿಟಿ ರಾಜ್ಯ ಘಟಕಕ್ಕೆ ಮನವಿ ಮಾಡಿದೆ ಎಂದು ಮೂಲಗಳು ಖಚಿತಪಡಿಸಿವೆ.

ಹೊಸ ಪಕ್ಷ ಕಟ್ಟಿರುವ ಜನಾರ್ಧನ ರೆಡ್ಡಿಯವರ ಕಾರಣಕ್ಕಾಗಿ ಕೊಪ್ಪಳ ಜಿಲ್ಲೆ ಗಂಗಾವತಿ ಶಾಸಕ ಪರಣ್ಣ ಮನವಳ್ಳಿ, ವಯಸ್ಸಿನ ಕಾರಣಕ್ಕಾಗಿ ಶಿರಹಟ್ಟಿಯ ರಾಮಣ್ಣ ಲಮಾಣಿ, ಕಾರ್ಯಕರ್ತರ ವಿರೋಧ ಎದುರಿಸುತ್ತಿರುವ ಕಳಕಪ್ಪ ಬಂಡಿ ಅವರುಗಳು ಕೂಡ ಟಿಕೆಟ್ ಕೈತಪ್ಪುವ ಪಟ್ಟಿಯಲ್ಲಿದ್ದಾರೆ.

ಹಿರಿಯತನದ ಹಿನ್ನಲೆಯಲ್ಲಿ ಚಿತ್ರದುರ್ಗದ ತಿಪ್ಪಾರೆಡ್ಡಿ ಹಾಗೂ ಕಾರ್ಯಕರ್ತರನ್ನು ಎದುರು ಹಾಕಿಕೊಂಡಿರುವ ಹೊಸದುರ್ಗದ ಗೂಳಿಹಟ್ಟಿ ಶೇಖರ್‍ಗೂ ಟಿಕೆಟ್ ಕೈ ತಪ್ಪಿದರೂ ಅಚ್ಚರಿ ಇಲ್ಲ.

70 ವರ್ಷ ದಾಟಿದವರಿಗೆ ಟಿಕೆಟ್ ನೀಡಬಾರದೆಂಬ ತೀರ್ಮಾನಕ್ಕೆ ಬಂದರೆ ಹಾಲಿ ಸಚಿವ ಗೋವಿಂದ ಕಾರಜೋಳ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸುಳ್ಯ ಶಾಸಕ ಎಸ್.ಅಂಗಾರ, ವಿಧಾನಸಭೆಯ ಹಾಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೂ ಟಿಕೆಟ್ ತಪ್ಪಬಹುದೆಂದು ಹೇಳಲಾಗಿದೆ.

ರಾಜಧಾನಿ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಹೊಸಬರಿಗೆ ಟಿಕೆಟ್ ಕೊಡಬೇಕಾಗಿರುವುದರಿಂದ ಹಾಲಿ ಶಾಸಕ ಗರುಡಾಚಾರ್‍ಗೆ ಟಿಕೆಟ್ ಡೋಲಾಯಮಾನವಾಗಿದೆ. ಈ ಕ್ಷೇತ್ರದಿಂದ ಮಾಜಿ ಶಾಸಕ ಡಾ.ಹೇಮಚಂದ್ರ ಸಾಗರ್ ಹಾಗೂ ಚಿತ್ರ ನಿರ್ಮಾಪಕ ಜಾಕ್ ಮಂಜುನಾಥ್, ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಪಕ್ಷ ಕಟ್ಟಿದ ಪ್ರಮುಖರಲ್ಲಿ ಒಬ್ಬರಾದ ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್‍ಗೆ ಟಿಕೆಟ್ ನೀಡಬೇಕೆಂದು ಪಕ್ಷದ ಕಾರ್ಯಕರ್ತರು ಒತ್ತಡ ಹಾಕಿದ್ದಾರೆ.
ಹೀಗಾಗಿ ಈ ಬಾರಿ ಬಸವನಗುಡಿಯಿಂದ ಹಾಲಿ ಶಾಸಕ ರವಿ ಸುಬ್ರಹ್ಮಣ್ಯ ಅವರಿಗೆ ಟಿಕೆಟ್ ಕೈತಪ್ಪುವ ಭೀತಿ ಎದುರಾಗಿದ್ದು, ತೇಜಸ್ವಿನಿ ಅನಂತಕುಮಾರ್‍ಗೆ ಟಿಕೆಟ್ ಘೋಷಣೆಯಾಗುವ ಸಾಧ್ಯತೆ ಇದೆ.

ತೇಜಸ್ವಿ ಸೂರ್ಯ ಈಗಾಗಲೇ ಸಂಸದರಾಗಿರುವುದರಿಂದ ಕುಟುಂಬ ರಾಜಕಾರಣದ ಕಳಂಕ ತೊಡೆದು ಹಾಕಲು ರವಿಸ್ರುಹ್ಮಣ್ಯ ಅವರಿಗೆ ಟಿಕೆಟ್ ತಪ್ಪಿಸುವುದು ಒಂದು ಕಡೆಯಾದರೆ, ಅನಂತಕುಮಾರ್ ಕುಟುಂಬಕ್ಕೆ ಪಕ್ಷ ಅನ್ಯಾಯ ಮಾಡಿತು ಎಂಬ ಅಪವಾದವನ್ನು ಹೋಗಲಾಡಿಸಲು ಪತ್ನಿಗೆ ಮಣೆ ಹಾಕುವ ಸಾಧ್ಯತೆಗಳು ಹೆಚ್ಚಾಗಿವೆ.

ವಯಸ್ಸಿನ ಹಾಗೂ ಆಡಳಿತದಲ್ಲಿ ನಿಸ್ತೇಜವಾಗಿರುವ ಕಾರಣಕ್ಕಾಗಿ ಎಸ್.ಅಂಗಾರ, ಕೆ.ಜಿ.ಬೋಪಯ್ಯ, ವಿರೋಧ ಅಲೆಗೆ ಸಿಲುಕಿರುವ ಲಾಲಾಜಿ ಮೆಂಡನ್ ಸೇರಿದಂತೆ ಮತ್ತಿತರರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Leave a Comment

Your email address will not be published. Required fields are marked *