Ad Widget .

ವಿಧಾನ‌ಕದನ| ಪುತ್ತೂರು ಕ್ಷೇತ್ರದಲ್ಲಿ ಹಿಂದೆಂದೂ ಇಲ್ಲದ ನಿಗೂಢತೆ| ಅಳೆದು ತೂಗಿ ಅಭ್ಯರ್ಥಿ ಆಯ್ಕೆಗೆ ಕಸರತ್ತು ನಡೆಸುತ್ತಿವೆ ಕೈ, ಕಮಲ ಪಾಳಯ

ಸಮಗ್ರ ನ್ಯೂಸ್: ರಾಜ್ಯ ಕದನಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಮೇ 10 ರಂದು ರಾಜ್ಯ ವಿಧಾನ ಸಭಾ ಚುನಾವಣೆ ನಡೆಯಲಿದ್ದು ಈಗಾಗಲೆ ಚುನಾಯಿತ ಪಕ್ಷಗಳು ಪ್ರಣಾಳಿಕೆ ಸೇರಿದಂತೆ ಕದನಕ್ಕೆ ಬೇಕಾದ ಅಸ್ತ್ರಗಳನ್ನು ಉಪಯೋಗಿಸಲು ತಯಾರಿಗಳನ್ನು ನಡೆದಿವೆ. ರಾಷ್ಟ್ರೀಯ ಪಕ್ಷಗಳು ಸೇರಿದಂತೆ ನಿನ್ನೆ ಮೊನ್ನೆ ಮೊಳಕೆಯೊಡೆದ ಪಕ್ಷಗಳು ಸಹ ಚುನಾವಣೆಯಲ್ಲಿ ಸ್ಪರ್ಧಿಸಲು ಆಯಾ ಕ್ಷೇತ್ರಗಳ ಅಭ್ಯರ್ಥಿ ಗಳ ಪಟ್ಟಿಯನ್ನು ಸಹ ಬಿಡುಗಡೆ ಮಾಡಿವೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಾಂಗ್ರೆಸ್ ಅಭ್ಯರ್ಥಿ ಯಾರೆಂಬುದು ಇನ್ನು ನಿಗೂಢವಾಗಿ ಉಳಿದಿದೆ. ಈಗಾಗಲೆ ಪುತ್ತೂರಿನ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ರವರ ಹೆಸರಗಳು ಕೇಳಿ ಬಂದರೆ ಇನ್ನು ಕೆಲವರು ಕಾವು ಹೇಮನಾಥ ಶೆಟ್ಟಿ ರವರ ಹೆಸರನ್ನು ಹೇಳುತ್ತಿದ್ದಾರೆ. ಇದೆಲ್ಲದರ ನಡುವೆ ಕಾಂಗ್ರೆಸ್ ಗಾಗಿ ದುಡಿದು ಪ್ರತಿ ಬೂತ್ ಮಟ್ಟದಲ್ಲಿ ಶ್ರಮ ವಹಿಸಿ ಓಡಾಟ ಮಾಡುತ್ತಿರುವ ಹಿರಿಯ ಕಿರಿಯ ಕಾರ್ಯಕರ್ತರು ಶಕ್ಕು ಅಕ್ಕ ನಮ್ಮ ಅಭ್ಯರ್ಥಿ ಎಂದು ಹೇಳುತ್ತಿದ್ದಾರೆ.

Ad Widget . Ad Widget . Ad Widget .

ಕಳೆದ ಬಾರಿ ಶಕುಂತಲಾ ಶೆಟ್ಟಿ ರವರು ಸಂಜೀವ ಮಠಂದೂರ ರವರ ಎದುರು ಸ್ಪರ್ಧಿಸಿ ಸೋಲನುಭವಿಸಿದ್ದರು. ಈ ಸಲ ಅವರ ಬದಲಿಗೆ ಅಶೋಕ್ ಕುಮಾರ್ ರೈ ರವರಿಗೆ ಟಿಕೆಟ್ ನೀಡಿದರೆ ಪುತ್ತೂರಿನಲ್ಲಿ ಮತ್ತೆ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂಬುದು ಕೆಲವು ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯ. ಈ ಸಲ ಕಾವು ಹೇಮನಾಥ ಶೆಟ್ಟಿ ರವರಿಗೆ ಅವಕಾಶಕೊಡಬೇಕೆಂಬುದು ಕೆಲವರ ಬಯಕೆ. ಯಾಕೆಂದರೆ ಪುತ್ತೂರಿನಲ್ಲಿ ಕಾಂಗ್ರೆಸ್ ನ್ನು ಕಟ್ಟಿ ಬೆಳೆಸಿದವರು ಹೇಮನಾಥ ಶೆಟ್ಟಿ ರವರು, ಪಕ್ಷದ ವರಿಷ್ಟರು ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ಮಾಡಿ ತೋರಿಸಿದ ಜನನಾಯಕ ಹೇಮಣ್ಣ. ಹಾಗಾಗಿ ಈ ಸಲ ಅವರಿಗೊಂದು ಅವಕಾಶ ಕೊಡಬೇಕು ಅನ್ನೋದು ಕೆಲವು ಕಾರ್ಯಕರ್ತರ ಮನವಿ.

ಪಕ್ಷಕ್ಕಾಗಿ ದುಡಿದವರು ಹೇಮಣ್ಣ, ಶಾಸಕಿಯಾಗಿ ಅಭಿವೃದ್ಧಿ ಕೆಲಸ ಮಾಡಿದವರು ಶಕ್ಕು ಅಕ್ಕ. ಈ ಎರಡು ಹೆಸರನ್ನು ಬಿಟ್ಟು ಇದೀಗ ಕಾಂಗ್ರೇಸ್ ಗೆ ವಲಸೆ ಬಂದ ಅಶೋಕ್ ಕುಮಾರ್ ರೈ ರವರ ಹೆಸರು ಕೇಳಿ ಬರುತ್ತಿರುವುದು ಹಲವು ಕಾರ್ಯಕರ್ತರಿಗೆ ಬೇಸರ ತಂದಿದೆ ಎನ್ನಲಾಗಿದೆ.
ಈ ಸಲ ಶಕುಂತಲಾ ಶೆಟ್ಟಿರವರು ಸ್ಪರ್ಧಿಸಿದರೆ ಪುತ್ತೂರಿನಲ್ಲಿ ಮತ್ತೆ ಕಾಂಗ್ರೆಸ್ ಗೆಲುವು ಸಾಧಿಸುವುದು ಖಚಿತ. ಈಗಾಗಲೆ ಶಕ್ಕು ಅಕ್ಕರವರ ಪರವಾಗಿ ಕೆಲವು ಬಿಜೆಪಿ ಕಾರ್ಯಕರ್ತರು ಸಹ ಒಲವು ತೋರಿಸುತ್ತಿದ್ದು ಸಂಜೀವ ಮಠಂದೂರುವರು ಬಿಜೆಪಿ ಅಭ್ಯರ್ಥಿಯಾದರೆ ಇತ್ತ ಕಾಂಗ್ರೆಸ್ ನಿಂದ ಶಕುಂತಲಾ ಶೆಟ್ಟಿ ಸ್ಪರ್ಧಿಸಿದರೆ ಅಕ್ಕನನ್ನು ಗೆಲ್ಲಿಸಲು ಮುಂದಾಗಿದ್ದಾರೆಂಬ ಮಾತುಗಳಿವೆ.

ಶಕ್ಕು ಅಕ್ಕನವರನ್ನು ಹೊರತು ಪಡಿಸಿ ಬೇರೆಯವರಿಗೆ ಟಿಕೆಟ್ ನೀಡಿದರೆ ಸಾಮೂಹಿಕ ರಾಜೀನಾಮೆ ನೀಡಲು ಕಾಂಗ್ರೆಸ್ ಕಾರ್ಯಕರ್ತರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Leave a Comment

Your email address will not be published. Required fields are marked *