Ad Widget .

ಚುನಾವಣಾ ಹಿನ್ನಲೆ| ಪೊಲೀಸರಿಂದಲೇ ಫೀಲ್ಡ್ ಗಿಳಿದು ಹಣ ವಸೂಲಿ| ರಕ್ಷಕರೇ ಭಕ್ಷಕರಾದ ಕಥೆ!!

ಸಮಗ್ರ ನ್ಯೂಸ್: ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಪೊಲೀಸರ ಅಟ್ಟಹಾಸ ಎಲ್ಲೆ ಮೀರಿದೆ. ಆದರೆ ಚುನಾವಣೆ ಹೊತ್ತಿನಲ್ಲೇ ಮೂವರು ಪೊಲೀಸರು ಸಿಕ್ಕಿಬಿದ್ದಿದ್ದಾರೆ. ವ್ಯಕ್ತಿಯೊಬ್ಬರಿಂದ ಹಣ ವಸೂಲಿ ಮಾಡಿದ ಆರೋಪದ ಮೇಲೆ ಪುಲಕೇಶಿ ನಗರ ಪೊಲೀಸರು ಸಿಕ್ಕಿಬಿದ್ದಿದ್ದಾರೆ.

Ad Widget . Ad Widget .

3 ದಿನದ ತನಿಖೆಯಲ್ಲಿ ಬೆಂಗಳೂರು ಪೊಲೀಸರ ಬಂಡವಾಳ ಬಯಲಾಗಿದ್ದು, ಮೊನ್ನೆ ರಾತ್ರೋರಾತ್ರಿ ಸುಮಾರು 1 ಗಂಟೆಗೆ ಮೂವರು ಸಸ್ಪೆಂಡ್​​ ಆಗಿದ್ದಾರೆ. ರುಮಾನ್ ಪಾಷಾ ಪಿಎಸ್‌ಐ, ಲೇಪಾಕ್ಷಪ್ಪ ಹೆಡ್ ಕಾನ್ ಸ್ಟೇಬಲ್, ಲಕ್ಷಣ್ ಹೆಡ್ ಕಾನ್ಸ್ ಸ್ಟೇಬಲ್ ಈ ಮೂವರು ಪೊಲೀಸರು ರೈಸ್ ಪುಲ್ಲಿಂಗ್ ಕೇಸಿನಲ್ಲಿ ಅಮಾನತಾಗಿದ್ದಾರೆ.

Ad Widget . Ad Widget .

ಈ ತನಿಖೆಯನ್ನ ಹಿರಿಯ ಅಧಿಕಾರಿಗಳು ಕೈಗೊಂಡಿದ್ದರು. ಈ ಹಿರಿಯ ಅಧಿಕಾರಿಗಳು ಕೇಸ್ ಸಂಬಂಧ ಪುಲಕೇಶಿ ನಗರ ಇನ್ಸ್‌ಪೆಕ್ಟರ್ ಬಳಿಯೂ ಮಾಹಿತಿ ಪಡೆದುಕೊಂಡಿದ್ದಾರೆ. ಈ ವೇಳೆ ಇನ್ಸ್‌ಪೆಕ್ಟರ್ 10 ಲಕ್ಷ ಹಣ ತೆಗೆದುಕೊಂಡು ಆರೋಪಿಯನ್ನ ಬಿಟ್ಟು ಕಳುಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಕೊಂಡಯ್ಯ ಎಂಬುವವರು ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಶೇಖರ್‌ಗೆ ದೂರು ನೀಡಿದ್ದಾರೆ.

ದೂರಿನನ್ವಯ ತನಿಖೆ ಕೈಗೊಂಡಿದ್ದ ಚಂದ್ರಶೇಖರ್, ತನಿಖೆಯಲ್ಲಿ ಲೋಪದೋಷ ಕಂಡುಬಂದಿದ್ದು ರಾತ್ರೋರಾತ್ರಿ ಈ ಕೇಸ್​​ಗೆ ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಇದರಿಂದ ಹೆದರಿದ ಇನ್ಸ್‌ಪೆಕ್ಟರ್ ಈಗಾಗಲೇ 8 ಲಕ್ಷ ಹಿಂದಿರುಗಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಹಿರಿಯ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಬೇಲಿಯೇ ಎದ್ದು ಹೋಲ ಮೇಯ್ದಂತೆ ಸಾಮಾನ್ಯ ರಕ್ಷಿಸಬೇಕಾದ ಆರಕ್ಷಕರೇ ಹೀಗೆ ಭಕ್ಷಕರಾದದು ನಿಜಕ್ಕೂ ವಿಪರ್ಯಾಸ.

Leave a Comment

Your email address will not be published. Required fields are marked *