Ad Widget .

ಐಪಿಎಲ್ ಹಂಗಾಮಾ| ಸಿಎಸ್ ಕೆ ಮಣಿಸಿ ಶುಭಾರಂಭ ಮಾಡಿದ ಗುಜರಾತ್ ಟೈಟಾನ್ಸ್

ಸಮಗ್ರ ನ್ಯೂಸ್: ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಐಪಿಎಲ್ 2023 ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ 5 ವಿಕೆಟ್ ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿದ್ದು, ಈ ಮೂಲಕ ಶುಭಾರಂಭ ಮಾಡಿದೆ.

Ad Widget . Ad Widget .

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು. ಚೆನ್ನೈ ಸೂಪರ್ ಕಿಂಗ್ಸ್ ಪರ ಋತುರಾಜ್ ಗಾಯಕ್ವಾಡ್ 50 ಎಸೆತಗಳಲ್ಲಿ ಭರ್ಜರಿ 92 ರನ್ ಗಳಿಸಿದರೆ, ನಾಯಕ ಎಂಎಸ್ ಧೋನಿ ಅಜೇಯ 14 ರನ್ ಗಳಿಸಿದರು.

Ad Widget . Ad Widget .

ಉಳಿದಂತೆ ಮೋಯಿನ್ ಅಲಿ 23, ಬೆನ್ ಸ್ಟೋಕ್ಸ್ 7, ಅಂಬಟಿ ರಾಯುಡು 12, ಶಿವನ್ ದುಬೆ 19 ರನ್ ಗಳಿಸಿದರು. ಗುಜರಾತ್ ಟೈಟನ್ಸ್ ಪರ ಮೊಹಮ್ಮದ್ ಶಮಿ, ರಶೀಧ್ ಖಾನ್ , ಅಲ್ಜರಿ ಜೋಸೆಪ್ ತಲಾ 2 ವಿಕೆಟ್ ಪಡೆದರೆ, ಜೊಸ್ ಲಿಟ್ಲ್ 1 ವಿಕೆಟ್ ಪಡೆದರು. ಚೆನ್ನೈ ಸೂಪರ್ ಕಿಂಗ್ಸ್ ನೀಡಿದ 179 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಗುಜರಾತ್ ಟೈಟನ್ಸ್ 19.2 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ಆರಂಭಿಕ ಆಟಗಾರರಾದ ವೃದ್ಧಿಮನ್ ಶಹಾ 25, ಶುಭ್ ಮನ್ ಗಿಲ್ 63, ಸಾಯಿ ಸುದರ್ಶನ್ 22 ಮತ್ತು ವಿಜಯ್ ಶಂಕರ್ 27 ರನ್ ಗಳಿಸಿದರು. ಮೂಲಕ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಗೆಲುವಿನ ನಗೆ ಬೀರಿತು.

Leave a Comment

Your email address will not be published. Required fields are marked *