March 2023

ಕಡಬ: ಹೃದಯಾಘಾತಕ್ಕೆ ಯೋಧ ಬಲಿ| ಇಂದು(ಮಾ.28) ಹುಟ್ಟೂರಿಗೆ ಲಿಜೇಶ್ ಪಾರ್ಥಿವ ಶರೀರ

ಸಮಗ್ರ ನ್ಯೂಸ್: ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ‌ ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ಯೋಧ ಲಿಜೇಶ್ ಕುರಿಯನ್ ಪಾರ್ಥಿವ ಶರೀರ‌‌ ಇಂದು ಹುಟ್ಟೂರಿಗೆ ಬರಲಿದೆ. ಲಿಜೇಶ್ ಮಾ.26 ರಂದು ಕೊಯಂಬತ್ತೂರು ಮದ್ರಾಸ್ ರಿಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಕುಟ್ರುಪ್ಪಾಡಿ ತರಪ್ಪೇಳ್‌ ನಿವಾಸಿ ಜೋನಿ ಎಂಬವರ ಮಗನಾಗಿರುವ ಲಿಜೇಶ್ ತಮ್ಮ ಪತ್ನಿ ಜೋಮಿತಾ, ಒಂದು ವರ್ಷದ ಮಗು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. “ಲಿಜೇಶ್ ಪಾರ್ಥಿವ ಶರೀರ ಇಂದು ಬೆಳಗ್ಗೆ ಕಡಬ ತಲುಪಲಿದೆ. 11:30ಕ್ಕೆ ಕುಟ್ರುಪ್ಪಾಡಿ ಸಂತ ಮೇರಿಸ್ ಕ್ಯಾಥೋಲಿಕ್ […]

ಕಡಬ: ಹೃದಯಾಘಾತಕ್ಕೆ ಯೋಧ ಬಲಿ| ಇಂದು(ಮಾ.28) ಹುಟ್ಟೂರಿಗೆ ಲಿಜೇಶ್ ಪಾರ್ಥಿವ ಶರೀರ Read More »

ಸೈಬರ್ ಸೆಂಟರ್ ಗಳಲ್ಲಿ ಪಾನ್-ಆಧಾರ್‌ ಲಿಂಕ್ ಮಾಡಿಸ್ತಿದೀರಾ? ಹಾಗಾದ್ರೆ ಈ ಸ್ಟೋರಿ ಓದ್ಲೇ ಬೇಕು…

ಸಮಗ್ರ ನ್ಯೂಸ್: ಪಾನ್‌ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸಲು ಇನ್ನು ಕೇವಲ ಮೂರು ದಿನವಷ್ಟೇ ಬಾಕಿ ಇದೆ. ಹೀಗಾಗಿ ಜನರು ಪಾನ್ ಆಧಾರ್ ಕಾರ್ಡ್ ಲಿಂಕ್ ಮಾಡುವ ಸಲುವಾಗಿ ಸೈಬರ್ ಸೆಂಡರ್ ಗಳತ್ತ ಮುಖ ಮಾಡ್ತಿದ್ದಾರೆ. ಪಾನ್​​​ಗೆ ಆಧಾರ್​ ನಂಬರ್​ ಲಿಂಕ್ ಮಾಡಲೇಬೇಕು, ಲಿಂಕ್​​ ಮಾಡದಿದ್ರೆ ಬ್ಯಾಂಕ್ ಅಕೌಂಟ್​ ಕ್ಲೋಸ್ ಆಗುತ್ತೆ. ಅಮೌಂಟ್ ತೆಗೆಯೋಕಾಗಲ್ಲ. ಹೀಗೆ ನಾನಾ ರೀತಿಯ ಭಯ ಕಾಡುತ್ತಿದೆ. ಮಾರ್ಚ್​​​​ 31ರೊಳಗೆ ಆಧಾರ್​​ ಲಿಂಕ್ ಮಾಡಲು ಡೆಡ್​​ಲೈನ್ ಕೊಟ್ಟಿದ್ದು ಜನರೆಲ್ಲ ಸೈಬರ್​ ಸೆಂಟರ್​ಗಳತ್ತ

ಸೈಬರ್ ಸೆಂಟರ್ ಗಳಲ್ಲಿ ಪಾನ್-ಆಧಾರ್‌ ಲಿಂಕ್ ಮಾಡಿಸ್ತಿದೀರಾ? ಹಾಗಾದ್ರೆ ಈ ಸ್ಟೋರಿ ಓದ್ಲೇ ಬೇಕು… Read More »

ಮಂಗಳೂರು: ಅಡ್ಯಾರ್ ಐಸ್ ಕ್ರೀಂ ದಾಸ್ತಾನು ಕೇಂದ್ರದಲ್ಲಿ ಭಾರೀ ಅಗ್ನಿ ಅವಘಡ| ಕೋಟ್ಯಾಂತರ ರೂ. ನಷ್ಟ

ಸಮಗ್ರ ನ್ಯೂಸ್: ಮಂಗಳೂರು ನಗರದ‌ ಹೊರವಲಯದಲ್ಲಿರುವ ಅಡ್ಯಾರ್ ನ ಪೋಲಾರ್ ಐಸ್ ಕ್ರೀಂ‌ ಸೂಪರ್ ಸ್ಟಾಕಿಸ್ಟ್ ಎಂಬ ನಂದಿನಿ ಐಸ್ ಕ್ರೀಂ ದಾಸ್ತಾನು ಕೇಂದ್ರಕ್ಕೆ ಇಂದು (ಮಾ.28) ಮುಂಜಾನೆ ಎರಡು ಗಂಟೆಯ ಸುಮಾರಿಗೆ ಬೆಂಕಿ ತಗಲಿ ಕೋಟ್ಯಂತರ ರೂ. ನಷ್ಟ ಸಂಭವಿಸಿದೆ. ಘಟನೆಯ ಪರಿಣಾಮ ವಾಹನ ಸೇರಿದಂತೆ ಸುಮಾರು 5 ಕೋ.ರೂ ಮೌಲ್ಯದ ಸೊತ್ತುಗಳು ಬೆಂಕಿಗೆ ಆಹುತಿಯಾಗಿವೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗಲಿದೆ ಎನ್ನಲಾಗಿದ್ದು, ಮೂರು ಅಗ್ನಿಶಾಮಕ ವಾಹನಗಳು ಸುಮಾರು ನಾಲ್ಕು ತಾಸು ಕಾರ್ಯಾಚರಣೆ ನಡೆಸಿ

ಮಂಗಳೂರು: ಅಡ್ಯಾರ್ ಐಸ್ ಕ್ರೀಂ ದಾಸ್ತಾನು ಕೇಂದ್ರದಲ್ಲಿ ಭಾರೀ ಅಗ್ನಿ ಅವಘಡ| ಕೋಟ್ಯಾಂತರ ರೂ. ನಷ್ಟ Read More »

ಬಂಟ್ವಾಳ: ಬರೋಬ್ವರಿ 4.33 ಲಕ್ಷ ರೂ ಗಳಿಗೆ ಹರಾಜಾಯ್ತು ಹಲಸು| Jack Fruit ನಿಂದ ಹೊಡೆದ ಜಾಕ್ ಪಾಟ್!!

ಸಮಗ್ರ ನ್ಯೂಸ್: ಧಾರ್ಮಿಕ ಕ್ಷೇತ್ರದಲ್ಲಿ ಕಾಣಿಕೆಯಾಗಿ ಹರಕೆ ರೂಪದಲ್ಲಿ ಬಂದ ವಸ್ತುಗಳನ್ನು ಹರಾಜು ಮಾಡುವುದು ಸಾಮಾನ್ಯ.ಇದು ದೇಶಾದ್ಯಂತ ಹಲವು ಭಾಗಗಳಲ್ಲಿ ನಡೆಯುತ್ತದೆ. ದೇವರ ಕಾಣಿಕೆಯಾಗಿ ಬರುವ ಇಂತಹ ವಸ್ತುಗಳನ್ನು ಕೊಳ್ಳುವುದಕ್ಕೆ ಭಕ್ತರೂ ಕೂಡ ತುಂಬಾ ಆಸಕ್ತಿ ತೋರಿಸುತ್ತಾರೆ. ಆ ವಸ್ತುವಿನ ಮೂಲಬೆಲೆ ಲೆಕ್ಕಿಸದೇ ನೂರುಪಟ್ಟು, ಸಾವಿರಪಟ್ಟು ಹಣ ನೀಡಿ ಕೊಳ್ಳುತ್ತಾರೆ. ಇಂತಹುದೇ ಒಂದು ‌ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದ್ದು ಕಾಣಿಕೆಯಾಗಿ ಬಂದಿದ್ದ ಹಲಸಿನ ಹಣ್ಣು ಭರ್ಜರಿ ಮೊತ್ತಕ್ಕೆ ಹರಾಜಾಗಿದೆ. ಮೂಲರಪಟ್ಣ ಮಸೀದಿಯಲ್ಲಿ ಭಕ್ತನೊಬ್ಬ ಹರಾಜಿನಲ್ಲಿ

ಬಂಟ್ವಾಳ: ಬರೋಬ್ವರಿ 4.33 ಲಕ್ಷ ರೂ ಗಳಿಗೆ ಹರಾಜಾಯ್ತು ಹಲಸು| Jack Fruit ನಿಂದ ಹೊಡೆದ ಜಾಕ್ ಪಾಟ್!! Read More »

PAN card – Adhar ಲಿಂಕ್ ಕಡ್ಡಾಯವೇ? ಮಾಡದಿದ್ರೆ ಏನಾಗುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್‌ ಲಿಂಕ್ ಆಗಿದ್ಯಾ? ಅಥವಾ ಆಗಿಲ್ವಾ? ಮಾರ್ಚ್ 31ರೊಳಗೆ ಲಿಂಕ್ ಆಗದಿದ್ರೆ 10 ಸಾವಿರ ರೂಪಾಯಿ ಫೈನ್ ಕಟ್ಟಬೇಕಾ? ಆಧಾರ್, ಪ್ಯಾನ್ ಕಾರ್ಡ್‌ ಲಿಂಕ್‌ ಯಾರಿಗೆಲ್ಲಾ ಕಡ್ಡಾಯ. ಒಂದು ವೇಳೆ ಆಧಾರ್, ಪ್ಯಾನ್ ಕಾರ್ಡ್ ಲಿಂಕ್ ಮಾಡದಿದ್ರೆ ಏನಾಗುತ್ತೆ. ಇತ್ತೀಚಿಗೆ ಇಂತಹ ಹಲವು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಸುಳಿದಾಡುತ್ತಿವೆ. ಸಾಮಾನ್ಯ ಜನರು ಹೆದರೋ ಅವಶ್ಯಕತೆಯೇ ಇಲ್ಲ. ಯಾಕೆ ಗೊತ್ತಾ? ಪ್ಯಾನ್, ಆಧಾರ್ ಕಾರ್ಡ್‌ ಲಿಂಕ್ ಮಾಡೋದು ಕಡ್ಡಾಯ. ಇದಕ್ಕೆ

PAN card – Adhar ಲಿಂಕ್ ಕಡ್ಡಾಯವೇ? ಮಾಡದಿದ್ರೆ ಏನಾಗುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ Read More »

ಕ್ರಿಕೆಟಿಗ ಕೇದಾರ್ ಜಾದವ್ ತಂದೆ ನಾಪತ್ತೆ; ದೂರು ದಾಖಲು

ಸಮಗ್ರ ನ್ಯೂಸ್: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಕೇದಾರ್ ಜಾಧವ್ ಅವರ ತಂದೆ ಮಹದೇವ್ ಸೋಪಾನ್ ಜಾಧವ್ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಕ್ರಿಕೆಟಿಗ ಮಾರ್ಚ್ 27 ರಂದು (ಸೋಮವಾರ) ಪುಣೆ ನಗರದ ಅಲಂಕಾರ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಕೇದಾರ್ ಜಾಧವ್ ವರದಿ ಸಲ್ಲಿಸಿದ ನಂತರ, ಪೊಲೀಸರು ಆತನ 75 ವರ್ಷದ ಅವರ ತಂದೆಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ. ನಾಪತ್ತೆಯಾದ ವರದಿಯ ಪ್ರಕಾರ, ಕೇದಾರ್ ಜಾಧವ್ ಮತ್ತು ಮಹದೇವ್ ಜಾಧವ್ ಪುಣೆ ನಗರದ ಕೊತ್ರೋಡ್ ಪ್ರದೇಶದ

ಕ್ರಿಕೆಟಿಗ ಕೇದಾರ್ ಜಾದವ್ ತಂದೆ ನಾಪತ್ತೆ; ದೂರು ದಾಖಲು Read More »

ಪುತ್ತೂರು ಬಸ್ ನಿಲ್ದಾಣಕ್ಕೆ ‘ಕೋಟಿ ಚೆನ್ನಯ’ ನಾಮಕರಣ

ಸಮಗ್ರ ನ್ಯೂಸ್: ‘ತುಳುನಾಡಿನ ಅವಳಿ ವೀರರಾದ ಕೋಟಿ- ಚೆನ್ನಯರ ಹೆಸರನ್ನು ಪುತ್ತೂರಿನ ಬಸ್‌ ನಿಲ್ದಾಣಕ್ಕೆ ಇಡುವ ಮೂಲಕ ಅವರ ಹೆಸರನ್ನು ಮುಂದಿನ ಪೀಳಿಗೆಗೆ ನೆನಪಿಸುವ ಕೆಲಸವನ್ನು ಸರ್ಕಾರ ಮಾಡಿದೆ’ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ಬಸ್‌ ನಿಲ್ದಾಣಕ್ಕೆ ಭಾನುವಾರ ‘ಕೋಟಿ ಚೆನ್ನಯ ಬಸ್‌ ನಿಲ್ದಾಣ’ ನಾಮಕರಣ ಸಮಾರಂಭದಲ್ಲಿ ನಾಮಫಲಕವನ್ನು ಅನಾವರಣಗೊಳಿಸಿ, ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಕೋಟ ಚೆನ್ನಯರು ಒಂದು ಜಾತಿಗೆ ಸೀಮಿತರಾದವರಲ್ಲ.

ಪುತ್ತೂರು ಬಸ್ ನಿಲ್ದಾಣಕ್ಕೆ ‘ಕೋಟಿ ಚೆನ್ನಯ’ ನಾಮಕರಣ Read More »

ಲಂಚ ಪ್ರಕರಣ; ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅರೆಸ್ಟ್

ಸಮಗ್ರ ನ್ಯೂಸ್: ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಡಾಳ್‌ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಕೆಲವೇ ಗಂಟೆಗಳಲ್ಲಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿಗೆ ಬರುವಾಗ ತುಮಕೂರಿನ ಕ್ಯಾತಸಂದ್ರ ಟೋಲ್‌ ಬಳಿ ಪೊಲೀಸರು ಬಂಧಿಸಿದ್ದಾರೆ. ಕೆಎಸ್‌ಡಿಎಲ್ ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ A1 ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಮಾರ್ಚ್‌ 7 ರಂದು ಹೈಕೋರ್ಟ್‌ ಮಧ್ಯಂತರ ಜಾಮೀನು ಮಜೂರು ಮಾಡಿತ್ತು.

ಲಂಚ ಪ್ರಕರಣ; ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅರೆಸ್ಟ್ Read More »

ಒಳಮೀಸಲಾತಿ ವಿವಾದ| ಶಿವಮೊಗ್ಗದಲ್ಲಿ ಯಡಿಯೂರಪ್ಪ ಮನೆ ಮೇಲೆ ಕಲ್ಲು‌ ತೂರಾಟ; ಹಿಂಸಾಚಾರ

ಸಮಗ್ರ ನ್ಯೂಸ್: ಒಳಮೀಸಲಾತಿ ವರದಿ ಅಂಗೀಕಾರ ಬೆನ್ನಲ್ಲೇ ರಾಜ್ಯದಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರದಿ ಅಂಗೀಕರಿಸಿದ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಇಂದು ಶಿಕಾರಿಪುರದಲ್ಲಿ ಬಂಜಾರ ಸೇವಾ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನಾಕಾರರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮನೆ ಮತ್ತು ಕಚೇರಿ ಮೇಲೆ ಕಲ್ಲು, ಚಪ್ಪಲಿ ತೂರಿದ್ದಾರೆ. ನಡೆಸುತ್ತಿದ್ದ ಬಂಜಾರ ಸಮುದಾಯದ ನೂರಾರು ಜನರು ಶಿಕಾರಿಪುರ ಪಟ್ಟಣದಲ್ಲಿನ ಯಡಿಯೂರಪ್ಪ ಅವರ ಮನೆ ಕಡೆಗೆ ಬ್ಯಾರಕೇಡ್

ಒಳಮೀಸಲಾತಿ ವಿವಾದ| ಶಿವಮೊಗ್ಗದಲ್ಲಿ ಯಡಿಯೂರಪ್ಪ ಮನೆ ಮೇಲೆ ಕಲ್ಲು‌ ತೂರಾಟ; ಹಿಂಸಾಚಾರ Read More »

ಮತ್ತೆ ಏರಿಕೆಯ ಹಾದಿಯಲ್ಲಿ ಕೊರೊನಾ ಕೇಸ್| ರಾಜ್ಯದಲ್ಲಿ 209 ಮಂದಿಗೆ ಪಾಸಿಟಿವ್

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮತ್ತೆ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದೆ. ನಿನ್ನೆ ಹೊಸದಾಗಿ 209 ಮಂದಿ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಸಂಕ್ರೀಯ ಸೋಂಕಿತರ ಸಂಖ್ಯೆ 792ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಕೋವಿಡ್ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಭಾನುವಾರ 7021 ಮಂದಿಯನ್ನು ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ ಬೆಂಗಳೂರು ಗ್ರಾಮಾಂತರ 07, ಬೆಂಗಳೂರು ನಗರ 120, ಬೀದರ್ ಮತ್ತು ಚಿಕ್ಕಬಳ್ಳಾಪುರ 03, ದಕ್ಷಿಣ ಕನ್ನಡ, ದಾವಣಗೆರೆ ಮತ್ತು

ಮತ್ತೆ ಏರಿಕೆಯ ಹಾದಿಯಲ್ಲಿ ಕೊರೊನಾ ಕೇಸ್| ರಾಜ್ಯದಲ್ಲಿ 209 ಮಂದಿಗೆ ಪಾಸಿಟಿವ್ Read More »