ಸುರತ್ಕಲ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಉಸ್ಮಾನ್ ರೈಂಬೋ ಕಣಕ್ಕೆ
Samagra news: ಸಾಮಾಜಿಕ ಮುಂದಾಳು, ರಾಜಕೀಯ ಚತುರ ಉಸ್ಮಾನ್ ರೈಂಬೋ ಮಂಗಳೂರು ಉತ್ತರ (ಸುರತ್ಕಲ್) ಕ್ಷೇತ್ರದಿಂದ ಈ ಬಾರಿಯ ವಿಧಾನಸಭಾ ಚುನಾವಣೆಗೆ ಕಣಕ್ಕೆ ಇಳಿದಿದ್ದಾರೆ. ಸ್ಥಳೀಯ ಆಡಳಿತ ಚುನಾವಣೆಯಲ್ಲಿ ಈ ಹಿಂದೆ ಹಲವು ಬಾರಿ ಸ್ಪರ್ಧಿಸಿದ್ದ ಉಸ್ಮಾನ್ ರೈಂಬೋ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ ಎಂಇಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಸಮಾಜಸೇವೆ, ಸಾರ್ವಜನಿಕ ರಂಗಗಳಲ್ಲಿ ಗುರುತಿಸಿಕೊಂಡಿರುವ ಉಸ್ಮಾನ್ ರೈಂಬೋ ಸುರತ್ಕಲ್ ಕ್ಷೇತ್ರದಿಂದ ಕಣಕ್ಕಿಳಿದು ಜನಸೇವೆ ಮಾಡುವ ಇರಾದೆ ಹೊಂದಿದ್ದಾರೆ.
ಸುರತ್ಕಲ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಉಸ್ಮಾನ್ ರೈಂಬೋ ಕಣಕ್ಕೆ Read More »