March 2023

ಉಡುಪಿ: ಅಮಲೇರಿ ಹೆದ್ದಾರಿಯಲ್ಲಿ ಮಲಗಿದ್ದಾತನ ಉಪಚರಿಸಿ ಮಾನವೀಯತೆ ಮೆರೆದ‌ ಡಿಸಿ, ಎಸ್ಪಿ

ಸಮಗ್ರ ನ್ಯೂಸ್: ಮದ್ಯಪಾನ ಮಾಡಿ ರಾ. ಹೆ. 66ರಲ್ಲಿ ಮಲಗಿದ್ದ ವ್ಯಕ್ತಿಯೋರ್ವನನ್ನು ಎಬ್ಬಿಸಿ, ಉಪಚರಿಸುವ ಮೂಲಕ ಉಡುಪಿ ಡಿಸಿ ಮತ್ತು ಎಸ್‌ಪಿ ಮಾನವೀಯತೆ ಮೆರೆದಿದ್ದಾರೆ. ಉಡುಪಿ ಡಿಸಿ ಕೂರ್ಮಾ ರಾವ್‌ ಮತ್ತು ಎಸ್‌ಪಿ ಹಾಕೆ ಅಕ್ಷಯ್‌ ಮಚ್ಚೀಂದ್ರ ತಮ್ಮ ವಾಹನಗಳಲ್ಲಿ ಉಡುಪಿಯಿಂದ ಹೆಜಮಾಡಿ ಕಡೆಗೆ ತೆರಳುತ್ತಿದ್ದ ವೇಳೆ ಎರ್ಮಾಳು ಬಳಿ ಹೆದ್ದಾರಿಯಲ್ಲಿ ವ್ಯಕ್ತಿಯೊಬ್ಬ ಮಲಗಿದ್ದನ್ನು ಗಮನಿಸಿದ್ದರು. ವಾಹನ ನಿಲ್ಲಿಸಿ ಆತನ ಬಳಿಗೆ ಬಂದ ಅವರು ಎಬ್ಬಿಸಿ ಅಂಗರಕ್ಷಕ ಸಿಬಂದಿ ಮತ್ತು ಸ್ಥಳೀಯರ ಸಹಕಾರದೊಂದಿಗೆ ರಸ್ತೆ ಬದಿಗೆ ಕರೆ […]

ಉಡುಪಿ: ಅಮಲೇರಿ ಹೆದ್ದಾರಿಯಲ್ಲಿ ಮಲಗಿದ್ದಾತನ ಉಪಚರಿಸಿ ಮಾನವೀಯತೆ ಮೆರೆದ‌ ಡಿಸಿ, ಎಸ್ಪಿ Read More »

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ಶ್ರೀರಾಮ ನವಮಿ ವಿಶೇಷ ಲೇಖನ

ಸಮಗ್ರ ನ್ಯೂಸ್: ಭಗವಾನ್ ರಾಮನಿಗೆ ಸಮರ್ಪಿತವಾದ ಸನಾತನ ಧರ್ಮದ ವಿಶೇಷ ಹಬ್ಬ ರಾಮ ನವಮಿ ಹಬ್ಬ. ಇಂದು ನಾಡಿನಾದ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ. ಪ್ರತಿವರ್ಷ ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ದಿನಾಂಕದಂದು ಭಕ್ತರು ರಾಮನವಮಿ ಆಚರಿಸುತ್ತಾರೆ. ಸನಾತನ ಧರ್ಮದಲ್ಲಿ ರಾಮ ನವಮಿಗೆ ಭಾರೀ ಮಹತ್ವವಿದೆ. ಈ ದಿನವನ್ನು ಧರ್ಮಗ್ರಂಥಗಳ ಪ್ರಕಾರ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ದುಷ್ಟರ ವಿರುದ್ಧ ಒಳಿತಿನ ವಿಜಯದ ಸಂದೇಶವನ್ನು ಸಾರಲು ಶ್ರೀ ವಿಷ್ಣುವು ಶ್ರೀರಾಮನಾಗಿ ಮರುಜನ್ಮ ಪಡೆದನು.

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ಶ್ರೀರಾಮ ನವಮಿ ವಿಶೇಷ ಲೇಖನ Read More »

ಪತ್ರಕರ್ತರಿಗೂ ಪೋಸ್ಟಲ್ ವೋಟಿಂಗ್ ಗೆ ಅವಕಾಶ| ಧನ್ಯವಾದ ತಿಳಿಸಿದ KUWJ

ಸಮಗ್ರ ನ್ಯೂಸ್: ವಿಧಾನಸಭೆ ಚುನಾವಣೆಯಲ್ಲಿ ಕಾರ್ಯ ನಿರತ ಪತ್ರಕರ್ತರಿಗೆ ಅಂಚೆ ಮತದಾನ (ಪೋಸ್ಟಲ್ ವೋಟಿಂಗ್) ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (KUWJ) ಮಾಡಿದ ಮನವಿ ಪುರಸ್ಕರಿಸಿರುವ ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ಇಂಥದೊಂದು ಅವಕಾಶ ಕಲ್ಪಿಸಿದೆ. ಇದರಿಂದಾಗಿ ನಾನಾ ಕಡೆಯಲ್ಲಿ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ‌ ಮಾಡುತ್ತಿದ್ದ ಕಾರ್ಯ ನಿರತ ಪತ್ರಕರ್ತರು ಮತದಾನ ವಂಚಿತರಾಗುವುದು ತಪ್ಪಿದಂತಾಗಿದೆ. ಕರ್ತವ್ಯ ನಿರತರಾಗಿದ್ದಲ್ಲಿಂದಲೇ (ಅಗತ್ಯವಿದ್ದವರು)ತಮ್ಮ ಮತವಿರುವ ಕ್ಷೇತ್ರದಲ್ಲಿ ಮತದಾನ ಮಾಡಲು ಅವಕಾಶ ದೊರೆತಿರುವುದು

ಪತ್ರಕರ್ತರಿಗೂ ಪೋಸ್ಟಲ್ ವೋಟಿಂಗ್ ಗೆ ಅವಕಾಶ| ಧನ್ಯವಾದ ತಿಳಿಸಿದ KUWJ Read More »

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆ| ಜಿಲ್ಲೆಯಾದ್ಯಂತ ಪ್ಲೆಕ್ಸ್, ಬ್ಯಾನರ್ ತೆರವಿಗೆ ದ.ಕ ಜಿ.ಪಂ ಸಿಇಒ ಡಾ.ಕುಮಾರ್ ಸೂಚನೆ

ಸಮಗ್ರ ನ್ಯೂಸ್: ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು ಮಾದರಿ ಸಂಹಿತೆ ಜಾರಿಗೊಂಡ ಮೇರೆಗೆ ಸರಕಾರದ ಅನುದಾನವನ್ನು ಬಳಸಿಕೊಂಡು ಜಿಲ್ಲಾದ್ಯಂತ ಹಾಕಿರುವ ಜಾಹೀರಾತು ಫ್ಲೆಕ್ಸ್, ಬ್ಯಾನರ್ ಹಾಗೂ ಬಂಟಿಂಗ್ಸ್‌ಗಳನ್ನು ಕೂಡಲೇ ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದ.ಕ.ಜಿಪಂ ಸಿಇಒ ಡಾ. ಕುಮಾರ್ ಸೂಚನೆ ನೀಡಿದ್ದಾರೆ. ಜಿಪಂನಲ್ಲಿ ಬುಧವಾರ ನಡೆದ ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಮಾತನಾಡಿದ ಅವರು ಅಧಿಕೃತ ಹಾಗೂ ಅನಧಿಕೃತವಾಗಿ ಹಾಕಲಾಗಿರುವ ಎಲ್ಲಾ ರೀತಿಯ ಜಾಹೀರಾತುಗಳನ್ನು ತೆರವುಗೊಳಿಸಬೇಕು, ಯಾವುದೇ ಸರಕಾರಿ ಕಚೇರಿ, ಅಧಿಕೃತ ವೆಬ್‌ಸೈಟ್‌ಗಳಲ್ಲಿ ಹಾಕಲಾಗಿರುವ ರಾಜಕೀಯ ಪಕ್ಷಗಳ ಮುಖಂಡರ

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆ| ಜಿಲ್ಲೆಯಾದ್ಯಂತ ಪ್ಲೆಕ್ಸ್, ಬ್ಯಾನರ್ ತೆರವಿಗೆ ದ.ಕ ಜಿ.ಪಂ ಸಿಇಒ ಡಾ.ಕುಮಾರ್ ಸೂಚನೆ Read More »

ನೀತಿಸಂಹಿತೆ ಹಿನ್ನಲೆ; ಗೃಹಸಚಿವರ ಕಾರು ವಶಕ್ಕೆ ಪಡೆದ ಚುನಾವಣೆ ಆಯೋಗ

ಸಮಗ್ರ ನ್ಯೂಸ್ : ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಅವರ ಸರ್ಕಾರಿ ಕಾರನ್ನ ವಶಪಡಿಸಿಕೊಂಡ ಸುದ್ದಿ ಹರಿದಾಡಿತು. ಇದರ ಜೊತೆಗೆ ಗೃಹ ಸಚಿವರ ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಅರಳಸುರಳಿಯಲ್ಲಿ ಕಾರ್ಯಕರ್ತನ ಆರೋಗ್ಯ ವಿಚಾರಿಸಲು ಆರಗದಿಂದ ಹೊರಟಿದ್ದ ಗೃಹಸಚಿವ ಜ್ಞಾನೇಂದ್ರ ಕಾರ್ಯಕರ್ತನ ಆರೋಗ್ಯ ವಿಚಾರಿಸಿ ತೂದೂರು ಕಾರ್ಯಕ್ರಮಕ್ಕೆ ತೆರಳಬೇಕಿತ್ತು. ತೂದೂರಿನ ಕಾಕನಗದ್ದೆ ಕೋದಂಡ ಸ್ವಾಮಿ ದೇವಸ್ಥಾನಕ್ಕೆ ಬರುವ ವೇಳೆ ಚುನಾವಣೆ ನೀತಿ ಜಾರಿಯಾಗಿತ್ತು. ದೇವಸ್ಥಾನದ ಬಳಿ ಗೃಹಸಚಿವರು ಸರ್ಕಾರಿ ಕಾರನ್ನು ಬಿಟ್ಟು ತಮ್ಮ ಖಾಸಗಿ ಕಾರಿನಲ್ಲಿ

ನೀತಿಸಂಹಿತೆ ಹಿನ್ನಲೆ; ಗೃಹಸಚಿವರ ಕಾರು ವಶಕ್ಕೆ ಪಡೆದ ಚುನಾವಣೆ ಆಯೋಗ Read More »

ಮಂಗಳೂರು: ಅಪಾರ್ಟ್’ಮೆಂಟ್ ನಿಂದ ಬಿದ್ದು ಎಸಿ ಟೆಕ್ನೀಶಿಯನ್ ಮೃತ್ಯು

ಸಮಗ್ರ ನ್ಯೂಸ್: ಕೆಲಸ ನಿರ್ವಹಿಸುತ್ತಿದ್ದ ವೇಳೆ ಎಸಿ ಟೆಕ್ನೀಶಿಯನ್’ವೋರ್ವರು ಆಯ ತಪ್ಪಿ ಅಪಾರ್ಟ್ ಮೆಂಟ್ ನಿಂದ ಬಿದ್ದು ಮೃತಪಟ್ಟ ಘಟನೆ ಮಂಗಳೂರು ನಗರದಿಂದ ವರದಿಯಾಗಿದೆ. ವಿನಯ್ ಜೋಯೆಲ್ ತಾವ್ರೋ (22) ಮೃತಪಟ್ಟ ಎಸಿ ಟೆಕ್ನೀಶಿಯನ್. ಇವರು ಬುಧವಾರ ಸಂಜೆ ಸುಮಾರು 5.58ರ ವೇಳೆಗೆ ನಂತೂರು ಬಳಿಯಿರುವ ಮೌಂಟ್ ಟಿಯರಾ ಅಪಾರ್ಟ್‌ಮೆಂಟ್‌ನ 9ನೇ ಮಹಡಿಯಲ್ಲಿ ಎಸಿ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಿದ್ದ ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದುಬಂದಿದೆ.

ಮಂಗಳೂರು: ಅಪಾರ್ಟ್’ಮೆಂಟ್ ನಿಂದ ಬಿದ್ದು ಎಸಿ ಟೆಕ್ನೀಶಿಯನ್ ಮೃತ್ಯು Read More »

ಚುನಾವಣೆ ಘೋಷಣೆ ಬೆನ್ನಲ್ಲೇ ಘರ್ಜಿಸಿದ ಕಾಂಗ್ರೆಸ್| ಸ್ಲೋಗನ್ ಬಿಡುಗಡೆ ಮಾಡಿದ ಕೈ ಪಾಳಯ

ಸಮಗ್ರ ನ್ಯೂಸ್: ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾದ ದಿನದಿಂದಲೇ ಕಾಂಗ್ರೆಸ್ ಪಕ್ಷ ‘ಮತ್ತೆ ಗರ್ಜಿಸಲಿದೆ ಕರ್ನಾಟಕ’ ಎಂಬ ಹೊಸ ಅಭಿಯಾನ ಆರಂಭಿಸಿದೆ. ಈ ಅಭಿಯಾನಕ್ಕೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಚಾಲನೆ ನೀಡಿ ಲೋಗೋ ಬಿಡುಗಡೆ ಮಾಡಿದ್ದಾರೆ. ಈ ಅಭಿಯಾನವು ಕರ್ನಾಟಕದ ಜನರಿಗೆ ಪಕ್ಷದ ಬದ್ಧತೆಯನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ ಮತ್ತು ಎಲ್ಲರಿಗೂ ಉತ್ತಮ ಭವಿಷ್ಯವನ್ನು ಸೃಷ್ಟಿಸುವ ದೂರದೃಷ್ಟಿಯನ್ನು ಹೊಂದಿದೆ ಎಂದು ಎಂ.ಬಿ. ಪಾಟೀಲ್‌ ಹೇಳಿದ್ದಾರೆ. ‘ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕದ ಜನರು ನಿರಾಸೆಗೊಂಡಿದ್ದಾರೆ. ಕೋವಿಡ್-19,

ಚುನಾವಣೆ ಘೋಷಣೆ ಬೆನ್ನಲ್ಲೇ ಘರ್ಜಿಸಿದ ಕಾಂಗ್ರೆಸ್| ಸ್ಲೋಗನ್ ಬಿಡುಗಡೆ ಮಾಡಿದ ಕೈ ಪಾಳಯ Read More »

ಹೊರಬಿತ್ತು ಸಿ-ವೋಟರ್ ಸಮೀಕ್ಷೆ| ಈ ಪಕ್ಷಕ್ಕೆ ಸಿಗಲಿದೆ ಬಹುಮತ

ಸಮಗ್ರ ನ್ಯೂಸ್: ಬಹುನಿರೀಕ್ಷಿತ ಕರ್ನಾಟಕ ವಿಧಾನಸಭಾ ಚುನಾವಣೆಗೆ ಈಗಾಗಲೇ ಕೇಂದ್ರ ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಿದೆ. ಮೇ 10ನೇ ತಾರೀಕಿನಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಇದಾದ 2 ದಿನಗಳ ಬಳಿಕ ಅಂದರೆ ಮೇ 13ನೇ ತಾರೀಕು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಇನ್ನು, ಕಾಂಗ್ರೆಸ್​, ಬಿಜೆಪಿ ಮತ್ತು ಜೆಡಿಎಸ್​ ಸೇರಿದಂತೆ ಎಲ್ಲಾ ಪಕ್ಷಗಳು ಈ ಬಾರಿ ಹೇಗಾದರೂ ಚುನಾವಣೆ ಗೆದ್ದು ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆ ಹಿಡಿಯಬೇಕು ಎಂದು ಸಜ್ಜಾಗಿವೆ. ಈ

ಹೊರಬಿತ್ತು ಸಿ-ವೋಟರ್ ಸಮೀಕ್ಷೆ| ಈ ಪಕ್ಷಕ್ಕೆ ಸಿಗಲಿದೆ ಬಹುಮತ Read More »

ಸುಳ್ಯ: 35 ವರ್ಷದಿಂದ ಸೇತುವೆ ನಿರ್ಮಾಣಕ್ಕೆ ಸ್ಪಂದನೆ ನೀಡದ ಜನಪ್ರತಿನಿಧಿಗಳು|ಐವರ್ನಾಡು ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಐವರ್ನಾಡು(ivarnadu) ಗ್ರಾಮದಲ್ಲಿರುವ ಸೇತುವೆ ನಿರ್ಮಿಸಲು 35 ವರ್ಷದಿಂದ ಬೇಡಿಕೊಳ್ಳುತ್ತಿದ್ದರು ಜನಪ್ರತಿನಿಧಿಗಳು ಯಾವುದೆ ಸ್ಪಂದನೆ ನೀಡದ ಹಿನ್ನಲೆ ಗ್ರಾಮಸ್ಥರು ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಐವರ್ನಾಡು ಗ್ರಾಮದ ಬಿರ್ಮುಕಜೆ,ಚಲ್ಲತ್ತಡಿ, ಸಾರಕೆರೆಗೆ ಹಾದು ಹೋಗುವ ರಸ್ತೆಯಲ್ಲಿರುವ ಐವರ್ನಾಡು ಗ್ರಾಮದ ಬಿರ್ಮುಕಜೆ,ಚಲ್ಲತ್ತಡಿ, ಸಾರಕೆರೆಗೆ ಹಾದು ಹೋಗುವ ರಸ್ತೆಯಲ್ಲಿರುವ ಚಲ್ಲತ್ತಡಿ ಎಂಬಲ್ಲಿ ಸೇತುವೆ ನಿರ್ಮಾಣದ ಬಗ್ಗೆ ಕಳೆದ 35 ವರ್ಷದಿಂದ ಸಾಕಷ್ಟು ಬೇಡಿಕೊಳ್ಳುತ್ತಿದ್ದರು. ಆದರು ಯಾವುದೇ ಸ್ಪಂದನೆ ಕೊಡದೆ ಊರಿನ ಜನತೆಯ ಸಂಕಷ್ಟಗಳಿಗೂ ನಮಗೂ ಯಾವುದೇ ಸಂಬಂಧವೇ ಇಲ್ಲ

ಸುಳ್ಯ: 35 ವರ್ಷದಿಂದ ಸೇತುವೆ ನಿರ್ಮಾಣಕ್ಕೆ ಸ್ಪಂದನೆ ನೀಡದ ಜನಪ್ರತಿನಿಧಿಗಳು|ಐವರ್ನಾಡು ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ Read More »

ಬೈಕ್ ಲಾರಿ ಡಿಕ್ಕಿ ಅಪಘಾತ|ಓರ್ವ ಸಾವು,ಓರ್ವ ಗಂಭೀರ

Samagra news: ಬೈಕ್ ಲಾರಿ ಡಿಕ್ಕಿ ಅಪಘಾತದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿ ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಧರ್ಮಸ್ಥಳ ಸಮೀಪದ ಮುಂಡ್ರುಪ್ಪಾಡಿ ಎಂಬಲ್ಲಿ‌ ನಡೆದಿದೆ. ಗುರುವಾಯನಕೆರೆ ನಿವಾಸಿ ಚೈನರ್ ಅಗಿರುವ ಪ್ರಸಾದ್ ಶೆಟ್ಟಿ(27) ಸಾವನ್ನಪ್ಪಿದ್ದು , ಸಹಸವಾರ ಸರ್ವೆಯರ್ ವಿಶ್ವನಾಥ್ ಗಂಭೀರ ಗಾಯಗೊಂಡಿದ್ದು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳ್ತಂಗಡಿ ಸರ್ವೆ ಇಲಾಖೆಯ ಸರ್ವೆ ಇದ್ದ ಕಾರಣ ಕರ್ತವ್ಯ ಮುಗಿಸಿ ವಾಪಸ್ ಅಗಿವ ವೇಳೆ ಮುಂಡ್ರುಪಾಡಿಯಲ್ಲಿ ಲಾರಿ ಬೈಕ್ ಗೆ ಡಿಕ್ಕಿ ಹೊಡೆದಿದ್ದು ಈ

ಬೈಕ್ ಲಾರಿ ಡಿಕ್ಕಿ ಅಪಘಾತ|ಓರ್ವ ಸಾವು,ಓರ್ವ ಗಂಭೀರ Read More »