March 2023

ಮೊದಲ ರಾತ್ರಿಯ ಖಾಸಗಿ ಕ್ಷಣಗಳನ್ನು ಶೇರ್ ಮಾಡಿ ಜೈಲು ಸೇರಿದ ನವವಿವಾಹಿತ

ಸಮಗ್ರ ನ್ಯೂಸ್: ಇತ್ತೀಚೆಗೆ ನವ ದಂಪತಿಯೊಂದು ಇನ್‌ಸ್ಟಾಗ್ರಾಂನಲ್ಲಿ ತಮ್ಮ ಫಸ್ಟ್‌ ನೈಟ್‌ ದಿನದ ವಿಡಿಯೋ ಶೇರ್ ಮಾಡಿ ನೆಟ್ಟಿಗರಿಂದ ಕ್ಲಾಸ್‌ ತೆಗೆದುಕೊಂಡಿತ್ತು. ಇದೀಗ ಇಂತಹದ್ದೇ ಮತ್ತೊಂದು ವಿಚಿತ್ರ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ನವವಿವಾಹಿತ ಯುವಕನೊಬ್ಬ ತನ್ನ ಪತ್ನಿಯ ಜೊತೆಗಿನ ಮೊದಲ ರಾತ್ರಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಲು ಹೋಗಿ ಜೈಲು ಸೇರಿದ್ದಾನೆ. ಆಂಧ್ರ ಪ್ರದೇಶದ ಕೋನಸೀಮಾ ಜಿಲ್ಲೆಯ ಕಟ್ರೇನಿಕೋಣದಲ್ಲಿ ಈ ಘಟನೆ ನಡೆದಿದ್ದು, ತನ್ನ ಪತ್ನಿಯ ಒಪ್ಪಿಗೆ ಪಡೆಯದೆ ಆಕೆಯೊಂದಿಗೆ ರಾತ್ರಿ ಕಳೆದ ಖಾಸಗಿ ಕ್ಷಣಗಳನ್ನು […]

ಮೊದಲ ರಾತ್ರಿಯ ಖಾಸಗಿ ಕ್ಷಣಗಳನ್ನು ಶೇರ್ ಮಾಡಿ ಜೈಲು ಸೇರಿದ ನವವಿವಾಹಿತ Read More »

ಮೋದಿಗೆ ಓಟು ಹಾಕಿ ಎಂದು ಬರುವವರಿಗೆ ಚಪ್ಪಲಿಯಲ್ಲಿ ಹೊಡೆಯಿರಿ – ಪ್ರಮೋದ್ ಮುತಾಲಿಕ್

ಸಮಗ್ರ ನ್ಯೂಸ್: ಈ ಬಾರಿಯೂ ಮೋದಿಗೆ ವೋಟ್ ಹಾಕಿ ಎಂದು ಬರುವವರಿಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್ ಹೇಳಿದ್ದಾರೆ. ಉ.ಕನ್ನಡದ ಶಿರಸಿಯ ಸಹ್ಯಾದ್ರಿ ರಂಗಮಂದಿರದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದಿಂದ ಏರ್ಪಡಿಸಲಾಗಿದ್ದ ಬೃಹತ್ ಹಿಂದೂ ಸಮಾಜೋತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಬಿಜೆಪಿ ನಾಯಕರನ್ನು ತೀವ್ರವಾಗಿ ತರಾಟಗೆತ್ತಿಕೊಂಡರು. ಆರೇಳು ಬಾರಿ ಗೆದ್ದವರು ಇಲ್ಲಿದ್ದಾರೆ. ಕರ್ನಾಟಕವನ್ನು ಲೂಟಿ ಮಾಡಿದವರು ಇದ್ದಾರೆ. ಮೊದಲು ಇದ್ದಾಗ ಇವರ ಆಸ್ತಿ ಎಷ್ಟಿತ್ತು, ಈಗ ಎಷ್ಟಿದೆ ಎಂಬುದನ್ನು ಅಳೆಯಲೂ

ಮೋದಿಗೆ ಓಟು ಹಾಕಿ ಎಂದು ಬರುವವರಿಗೆ ಚಪ್ಪಲಿಯಲ್ಲಿ ಹೊಡೆಯಿರಿ – ಪ್ರಮೋದ್ ಮುತಾಲಿಕ್ Read More »

ಮಂಗಳೂರು ಚಿನ್ನದ ಅಂಗಡಿ ಸಿಬ್ಬಂದಿ ಕೊಲೆ ಪ್ರಕರಣ| ಕೇರಳ ಮೂಲದ ಆರೋಪಿಯ ಸೆರೆ

ಸಮಗ್ರ ನ್ಯೂಸ್: ಮಂಗಳೂರು ನಗರದ ಚಿನ್ನಾಭರಣದ ಅಂಗಡಿಯೊಂದರ ಸಿಬ್ಬಂದಿಯನ್ನು ಫೆ.3ರಂದು ಮಧ್ಯಾಹ್ನ ಚೂರಿಯಿಂದ ಇರಿದು ಕೊಲೆಗೈದು ತಲೆಮರೆಸಿಕೊಂಡಿದ್ದ ಆರೋಪಿ ಕೇರಳ ಮೂಲದ ಕೊಯಿಲಾಂಡಿಯ ಶಿಫಾಝ್ (33) ಎಂಬಾತನನ್ನು ಗುರುವಾರ ಕಾಸರಗೋಡಿನಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಹಂಪನಕಟ್ಟೆಯ ‘ಮಂಗಳೂರು ಜ್ಯುವೆಲ್ಲರ್ಸ್‌’ನಲ್ಲಿ ಕೆಲಸ ಮಾಡುತ್ತಿದ್ದ ಅತ್ತಾವರ ನಿವಾಸಿಯಾಗಿದ್ದ ರಾಘವೇಂದ್ರ ಆಚಾರ್ಯ (50) ರನ್ನು ಫೆ.3ರಂದು ಕೊಲೆ ಮಾಡಲಾಗಿತ್ತು.ಅಂದು ಮಧ್ಯಾಹ್ನ 1:30ಕ್ಕೆ ತಾನು ಊಟಕ್ಕೆ ತೆರಳಿದ್ದು, ಅಪರಾಹ್ನ 3:44ರ ವೇಳೆಗೆ ಮರಳಿ ಅಂಗಡಿಯ ಬಳಿ ಬಂದು ಕಾರು ನಿಲ್ಲಿಸಿದಾಗ ‘ತನಗೆ ಚೂರಿಯಿಂದ

ಮಂಗಳೂರು ಚಿನ್ನದ ಅಂಗಡಿ ಸಿಬ್ಬಂದಿ ಕೊಲೆ ಪ್ರಕರಣ| ಕೇರಳ ಮೂಲದ ಆರೋಪಿಯ ಸೆರೆ Read More »

ಕಾಸರಗೋಡು: ರೈಲು ಡಿಕ್ಕಿ ಹೊಡೆದು ಮಹಿಳೆ ದುರ್ಮರಣ

ಸಮಗ್ರ ನ್ಯೂಸ್: ರೈಲು ಡಿಕ್ಕಿ ಹೊಡೆದು ಮಂಜೇಶ್ವರ ತಾಲೂಕು ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಮೃತಪಟ್ಟ ಘಟನೆ ಬುಧವಾರ ಉಪ್ಪಳ ರೈಲ್ವೆ ನಿಲ್ದಾಣದ ಬಳಿ ವರದಿಯಾಗಿದೆ. ಮಂಗಲ್ಪಾಡಿಯಲ್ಲಿರುವ ಮಂಜೇಶ್ವರ ತಾಲೂಕು ಆಸ್ಪತ್ರೆ ಲ್ಯಾಬ್ ಟೆಕ್ನಿಷಿಯನ್ ಪಿ. ಐಶ್ವರ್ಯ (27) ಮೃತ ಪಟ್ಟವರು. ಸಂಜೆ ಕೆಲಸ ಮುಗಿಸಿ ನೀಲೇಶ್ವರ ದಲ್ಲಿರುವ ಮನೆಗೆ ತೆರಳಲು ಉಪ್ಪಳ ರೈಲು ನಿಲ್ದಾಣ ಸಮೀಪ ಹಳಿ ದಾಟುತ್ತಿದ್ದಾಗ ರೈಲು ಬಡಿದು ಈ ಘಟನೆ ನಡೆದಿದೆ ಎನ್ನಲಾಗಿದೆ. ಮೃತಪಟ್ಟ ಐಶ್ವರ್ಯ ನೀಲೇಶ್ವರ ದೇವನ್ ಆರ್ಟ್ಸ್ ನ ವಿಪಿನ್ ರವರ

ಕಾಸರಗೋಡು: ರೈಲು ಡಿಕ್ಕಿ ಹೊಡೆದು ಮಹಿಳೆ ದುರ್ಮರಣ Read More »

ಈಶಾನ್ಯ ರಾಜ್ಯಗಳ ವಿಧಾನಸಭಾ ಚುನಾವಣೆ| ಬಿಜೆಪಿ ಹಾಗೂ ಮೈತ್ರಿ ಪಕ್ಷಗಳ ಜಯಭೇರಿ

ಸಮಗ್ರ ನ್ಯೂಸ್: ಈಶಾನ್ಯ ರಾಜ್ಯಗಳಾದ ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್ ನಲ್ಲಿ ಇತ್ತೀಚೆಗೆ ನಡೆದಿದ್ದ ವಿಧಾನಸಭಾ ಚುನಾವಣೆಯ ಮತಎಣಿಕೆ ಗುರುವಾರ (ಮಾರ್ಚ್ 02) ಬೆಳಗ್ಗೆ ಆರಂಭಗೊಂಡಿದ್ದು, ಆರಂಭಿಕ ಹಂತದ ಮತಎಣಿಕೆಯಲ್ಲಿ ಈಶಾನ್ಯದ ನಾಗಾಲ್ಯಾಂಡ್‌ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಭರ್ಜರಿ ಜಯಭೇರಿ ಗಳಿಸಿದೆ. ಆರಂಭಿಕ ಸುತ್ತುಗಳಲ್ಲಿ ತ್ರಿಪುರದ 60 ಕ್ಷೇತ್ರಗಳ ಪೈಕಿ 57 ಕ್ಷೇತ್ರಗಳ ಮತ ಎಣಿಕೆ ಶುರುವಾಗಿದ್ದು, ಬಿಜೆಪಿ ಮೈತ್ರಿಕೂಟ 35, ಸಿಪಿಎಂ 4, ಟಿಎಂಪಿ 5 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ನಾಗಾಲ್ಯಾಂಡ್ 60 ಕ್ಷೇತ್ರಗಳಲ್ಲಿ

ಈಶಾನ್ಯ ರಾಜ್ಯಗಳ ವಿಧಾನಸಭಾ ಚುನಾವಣೆ| ಬಿಜೆಪಿ ಹಾಗೂ ಮೈತ್ರಿ ಪಕ್ಷಗಳ ಜಯಭೇರಿ Read More »

ಕಡಬ: ಮತ್ತೆ ಪ್ರತ್ಯಕ್ಷಗೊಂಡ ಒಂಟಿ‌ಸಲಗ; ಆತಂಕದಲ್ಲಿ ಗ್ರಾಮಸ್ಥರು

ಸಮಗ್ರ ನ್ಯೂಸ್: ಆಪರೇಷನ್ ಎಲಿಫೆಂಟ್ ಕಾರ್ಯಾಚರಣೆಯಲ್ಲಿ ಒಂಟಿಸಲಗವನ್ನು ಹಿಡಿದ ಬಳಿಕ ಶಾಂತವಾಗಿದ್ದ ಕಡಬ ತಾಲೂಕಿನ ಕಲ್ಲುಗುಡ್ಡೆ, ಉದನೆ, ರೆಂಜಿಲಾಡಿ ಗ್ರಾಮಗಳಲ್ಲಿ ಇದೀಗ ಮತ್ತೊಂದು ಒಂಟಿಸಲಗ ಪ್ರತ್ಯಕ್ಷಗೊಂಡಿದೆ. ಕಲ್ಲುಗುಡ್ಡೆ-ಉದನೆ ಸಂಪರ್ಕ ರಸ್ತೆಯ ನಿಡ್ಡೋ ಬಳಿಯ ಅರಣ್ಯದಲ್ಲಿ ನಾಲ್ಕು ದಿನಗಳ ಹಿಂದೆ ಕಾಡಾನೆಯೊಂದು ವ್ಯಕ್ತಿಯೋರ್ವರಿಗೆ ಕಾಣಿಸಿದೆ ಎಂಬ ಮಾಹಿತಿ ಲಭಿಸಿದೆ. ರವಿವಾರ(ಫೆ.26) ಬೆಳಗ್ಗೆ ಕಾಡಾನೆ ಸಿಕ್ಕಿದ್ದು ಅವರು ನೀಡಿದ ಮಾಹಿತಿ ಆಧರಿಸಿ ಅರಣ್ಯ ಇಲಾಖೆಯ ತಂಡವು ಕಾಡಾನೆ ಪತ್ತೆ ಕಾರ್ಯವನ್ನು ಮತ್ತೆ ಚುರುಗೊಳಿಸಿದೆ. ಅಡೆಂಜ, ಬಳಕ್ಕ, ಇಚಿಲಡ್ಕ, ನಿಡ್ಡೋ ಅರಣ್ಯ

ಕಡಬ: ಮತ್ತೆ ಪ್ರತ್ಯಕ್ಷಗೊಂಡ ಒಂಟಿ‌ಸಲಗ; ಆತಂಕದಲ್ಲಿ ಗ್ರಾಮಸ್ಥರು Read More »

ನಾಪೋಕ್ಲು: ಖಾಸಗಿ ಬಸ್ ಪಲ್ಟಿ| ಪ್ರಯಾಣಿಕರಿಗೆ ಗಂಭೀರ

ಸಮಗ್ರ ನ್ಯೂಸ್:ಖಾಸಗಿ ಬಸ್ ಪಲ್ಟಿ ಯಾಗಿ ಪ್ರಯಾಣಿಕರಿಗೆ ಗಂಭೀರ ಗಾಯಗೊಂಡ ಘಟನೆ ನಾಪೋಕ್ಲು ಕಕ್ಕಬ್ಬೆ ಮುಖ್ಯರಸ್ತೆಯ ಕೋಟೇರಿ ಬಳಿ ಸಂಭವಿಸಿದೆ. ಕೊಳಕೇರಿ ಮಾರ್ಗವಾಗಿ ನಾಪೋಕ್ಲು ಮಡಿಕೇರಿಗೆ ತೆರಳುತ್ತಿದ್ದಾಗ ಚಾಲಕನ ವೇಗದ ಚಾಲನೆ ಯಿಂದ ನಿಯಂತ್ರಣ ತಪ್ಪಿ ಕೋಟೇರಿ ಮುಖ್ಯ ರಸ್ತೆಯ ಬದಿಯ ಹಳ್ಳಕ್ಕೆ ಬಿದ್ದಿದೆ. ಶಾಲಾ ಮಕ್ಕಳು ಸೇರಿದಂತೆ ಬಸ್ ನಲ್ಲಿದ್ದ ಹಲವು ಪ್ರಯಾಣಿಕರಿಗೆ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ನಾಪೋಕ್ಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ್ದುಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ

ನಾಪೋಕ್ಲು: ಖಾಸಗಿ ಬಸ್ ಪಲ್ಟಿ| ಪ್ರಯಾಣಿಕರಿಗೆ ಗಂಭೀರ Read More »

ಮೈಸೂರು ಮಹಾರಾಜರು ಸ್ಥಾಪಿಸಿದ ಭದ್ರಾವತಿ ವಿಐಎಸ್ಎಲ್ ಮುಚ್ಚುವ ನಿರ್ಧಾರ ಕೈಬಿಡಿ – ಮುರುಘ ರಾಜೇಂದ್ರ ಸ್ವಾಮೀಜಿ‌ ಒತ್ತಾಯ

ಸಮಗ್ರ ನ್ಯೂಸ್: ಮೈಸೂರು ಮಹಾರಾಜರು ತಮ್ಮಲ್ಲಿದ್ದ ಬಂಗಾರ ಮಾರಾಟ ಮಾಡಿ ಸ್ಥಾಪಿಸಿದ ವಿಐಎಸ್‍ಎಲ್ ಕಾರ್ಖಾನೆ ಮುಚ್ಚುವ ನಿರ್ಧಾರವನ್ನು ಸರ್ಕಾರ ಪುನರ್ ಪರಿಶೀಲನೆ ಮಾಡಬೇಕು ಎಂದು ಮಲೆನಾಡು ವೀರಶೈವ ಲಿಂಗಾಯತ ಮಠಾಧೀಶರರ ಪರಿಷತ್ ಅಧ್ಯಕ್ಷ ಆನಂದಪುರ ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಒತ್ತಾಯಿಸಿದ್ದಾರೆ. ‘ಪರಿಷತ್ತು ಸಾಮಾಜಿಕ ಸಮಸ್ಯೆಗಳ ಸ್ಪಂದನೆಗಾಗಿ ರಚಿಸಲ್ಪಟ್ಟಿದೆ. ಬಿಳಿಕಿ ಶ್ರೀಗಳಿಂದಾಗಿ ವಿಐಎಸ್‍ಎಲ್ ವಿಚಾರ ಹೊತ್ತು ಬಂದಿದ್ದೇವೆ. ಇಂದು ಪರಿಷತ್ತಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಸನ್ಮಾನಿಸಿ ಕಾರ್ಖಾನೆ ಕುರಿತು ಮಾತನಾಡಿದ್ದೇವೆ. ಬೆಂಕಿಯಲ್ಲಿ ಬೆಂದು ಬೆವರು

ಮೈಸೂರು ಮಹಾರಾಜರು ಸ್ಥಾಪಿಸಿದ ಭದ್ರಾವತಿ ವಿಐಎಸ್ಎಲ್ ಮುಚ್ಚುವ ನಿರ್ಧಾರ ಕೈಬಿಡಿ – ಮುರುಘ ರಾಜೇಂದ್ರ ಸ್ವಾಮೀಜಿ‌ ಒತ್ತಾಯ Read More »

ಮಾ.9 ರಿಂದ ಪಿಯುಸಿ ಪರೀಕ್ಷೆ| ಹಿಜಾಬ್ ಧರಿಸಿದ ವಿದ್ಯಾರ್ಥಿ, ಅಧಿಕಾರಿಗಳಿಗೂ ನೋಎಂಟ್ರಿ – ಸಚಿವ ಬಿ.ಸಿ ನಾಗೇಶ್

ಸಮಗ್ರ ನ್ಯೂಸ್: ಮಾ.9 ರಿಂದ ಆರಂಭವಾಗಲಿರುವ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ ಹಿಜಾಬ್ ಧರಿಸಿ ಹಾಜರಾಗಲು ಅನುಮತಿ ನೀಡುವಂತೆ ವಿದ್ಯಾರ್ಥಿನಿಯರು ಮಾಡಿದ ಮನವಿಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತಿರಸ್ಕರಿಸಿದ್ದು, ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಅಧಿಕಾರಿಗಳಿಗೆ ಹಿಜಾಬ್ ಧರಿಸಲು ಅವಕಾಶವಿಲ್ಲ ಎಂದು ಸೂಚಿಸಿದೆ. ‘ಹಿಜಾಬ್‌ ಪ್ರಸ್ತಾವನೆಯು ಸುಪ್ರೀಂ ಕೋರ್ಟ್‌ನಲ್ಲಿರುವ ಕಾರಣ ವಾರ್ಷಿಕ ಪರೀಕ್ಷೆಯ ವೇಳೆ ಹಿಜಾಬ್ ಅನುಮತಿಸುವ ಪ್ರಶ್ನೆಯೇ ಉದ್ಬಾವಿಸುವುದಿಲ್ಲ. ಈ ಕಾರಣಕ್ಕೆ ಯಾವ ವಿದ್ಯಾರ್ಥಿನಿಯರು ಪರೀಕ್ಷೆಗೆ ಗೈರಾಗುತ್ತಾರೆ ಎಂಬುದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ’

ಮಾ.9 ರಿಂದ ಪಿಯುಸಿ ಪರೀಕ್ಷೆ| ಹಿಜಾಬ್ ಧರಿಸಿದ ವಿದ್ಯಾರ್ಥಿ, ಅಧಿಕಾರಿಗಳಿಗೂ ನೋಎಂಟ್ರಿ – ಸಚಿವ ಬಿ.ಸಿ ನಾಗೇಶ್ Read More »

ಮುಂದಿನ ಮೂರು ದಿನ ಈ ರಾಜ್ಯಗಳಲ್ಲಿ ಮಳೆ‌ ಸಾಧ್ಯತೆ| ಹವಾಮಾನ ಇಲಾಖೆಯಿಂದ ಮಾಹಿತಿ

ಸಮಗ್ರ ನ್ಯೂಸ್: ಮುಂದಿನ ಮೂರು ದಿನಗಳ ಕಾಲ ಕೆಲವು ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನೂ ಕೆಲವು ಕಡೆ ಬಿಸಿಲ ಝಳ ಗಣನೀಯವಾಗಿ ಹೆಚ್ಚಾಗಲಿದೆ. ರಾಷ್ಟ್ರ ರಾಜಧಾನಿ ದೆಹಲಿ, ಗುಜರಾತ್, ರಾಜಸ್ಥಾನ ಕರ್ನಾಟಕ, ದಂತಹ ರಾಜ್ಯಗಳಲ್ಲಿ ತಾಪಮಾನವು ಗಣನೀಯವಾಗಿ ಹೆಚ್ಚಾಗಿದೆ. ದೆಹಲಿಯಲ್ಲಿ ಗರಿಷ್ಠ ಉಷ್ಣಾಂಶ ಗಣನೀಯವಾಗಿ ಏರಿಕೆಯಾಗುತ್ತಿರುವ ಸಮಯದಲ್ಲಿ ವರುಣನ ಆಗಮನವಾಗಿದ್ದು, ಭೂಮಿ ತಂಪಾಗಿದೆ.‌ ಮುಂದಿನ 24 ಗಂಟೆಗಳಲ್ಲಿ ತಮಿಳುನಾಡು, ಕೇರಳ, ಲಕ್ಷದ್ವೀಪ, ಅಸ್ಸಾಂ, ಅರುಣಾಚಲಪ್ರದೇಶ, ಅಂಡಮಾನ್, ನಿಕೋಬಾರ್ ದ್ವೀಪಗಳಲ್ಲಿ ಮಳೆಯಾಗಲಿದೆ,

ಮುಂದಿನ ಮೂರು ದಿನ ಈ ರಾಜ್ಯಗಳಲ್ಲಿ ಮಳೆ‌ ಸಾಧ್ಯತೆ| ಹವಾಮಾನ ಇಲಾಖೆಯಿಂದ ಮಾಹಿತಿ Read More »