March 2023

ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ ಭೂಕಂಪ| ಬೆಳ್ಳಂಬೆಳಗ್ಗೆ ‌ನಡುಗಿದ ವಸುಂಧರೆ

ಸಮಗ್ರ ನ್ಯೂಸ್: ಇಂದು ಮುಂಜಾನೆ 5:07 ರ ಸುಮಾರಿಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪೋರ್ಟ್‌ಬ್ಲೇರ್ ಪ್ರದೇಶದಲ್ಲಿ 5.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಮಾಹಿತಿ ನೀಡಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪೋರ್ಟ್‌ಬ್ಲೇರ್ ಪ್ರದೇಶದಲ್ಲಿ ಇಂದು ಮುಂಜಾನೆ 5:07 ರ ಸುಮಾರಿಗೆ ಬೂಮಿಯಿಂದ 10 ಕಿಮೀ ಆಳದಲ್ಲಿ 5.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು NCS ಟ್ವೀಟ್‌ ಮಾಡಿದೆ. ಭೂಕಂಪದಿಂದಾಗಿ ಯಾವುದೇ ಹಾನಿಯ ಬಗ್ಗೆ ಇನ್ನೂ ವರದಿಯಾಗಿಲ್ಲ.

ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ ಭೂಕಂಪ| ಬೆಳ್ಳಂಬೆಳಗ್ಗೆ ‌ನಡುಗಿದ ವಸುಂಧರೆ Read More »

ಕೊಡಗಿನಲ್ಲಿ ಮುಂದುವರಿದ ಕಾಳ್ಗಿಚ್ಚು| ತಾವೂರು ಮತ್ತು ತಣ್ಣಿಮಾನಿ ಬೆಟ್ಟದಲ್ಲಿ ಕಾಣಿಸಿಕೊಂಡ ಬೆಂಕಿ

ಸಮಗ್ರ ನ್ಯೂಸ್: ಕೊಡಗಿನಲ್ಲಿ ಕಾಳ್ಗಿಚ್ಚಿ‌ನ ಹಾವಳಿ ಮುಂದುವರೆದಿದ್ದು, ಭಾಗಮಂಡಲ ಸಮೀಪದ ತಾವೂರು, ತಣ್ಣಿಮಾನಿ ಬೆಟ್ಟದಲ್ಲಿ ಭಾರೀ ಅವಘಡ ಸಂಭವಿಸಿದೆ. ಭಾನುವಾರ ಸಂಜೆಯಿಂದ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು,ಭಾಗಮಂಡಲ ಪಟ್ಟಣಕ್ಕೆ ಬೆಂಕಿಯ ಜ್ವಾಲೆ ಗೋಚರಿಸುತ್ತಿದೆ. ಬೆಟ್ಟದ ಕೆಳಗಿನ ಸ್ಥಳೀಯ ನೂರಾರು ಎಕರೆ ತೋಟಗಳಿಗೆ ಬೆಂಕಿ ಹರಡುವ ಆತಂಕ‌ ಎದುರಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದು, ಅಗ್ನಿಶಾಮಕ ದಳ ತೆರಳಲು ಸಾಧ್ಯವಿಲ್ಲದ ಹಿನ್ನೆಲೆ ಕಾಡು ಸೊಪ್ಪು ಬಳಿಸಿ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ‌. ಡಿ ಎಫ್

ಕೊಡಗಿನಲ್ಲಿ ಮುಂದುವರಿದ ಕಾಳ್ಗಿಚ್ಚು| ತಾವೂರು ಮತ್ತು ತಣ್ಣಿಮಾನಿ ಬೆಟ್ಟದಲ್ಲಿ ಕಾಣಿಸಿಕೊಂಡ ಬೆಂಕಿ Read More »

ಕರಾವಳಿಯಲ್ಲಿ ಹೆಚ್ಚಾಗ್ತಿದೆ ತಾಪಮಾನ| ಎಚ್ಚರವಹಿಸಲು ಆರೋಗ್ಯ ಇಲಾಖೆ ಸೂಚನೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಉಷ್ಣಾಂಶ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಮಾಹಿತಿಯಂತೆ ಮಂಗಳೂರಿನಲ್ಲಿ ಮಾ.3 ರಿಂದ 39 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿ ಉಷ್ಣಾಂಶ ದಾಖಲಾಗಿದೆ. ಇದು ದೇಶದಲ್ಲಿಯೇ ಅತ್ಯಧಿಕವಾಗಿದ್ದು, ವಾಡಿಕೆಗಿಂತ 3 ಡಿಗ್ರಿ ಸೆಲ್ಸಿಯಸ್‌ ಹೆಚ್ಚಳವಾಗಿದೆ. ವಾಡಿಕೆಗಿಂತ 1 ಡಿಗ್ರಿ ಸೆಲ್ಸಿಯಸ್‌ ಏರಿಕೆಯಾಗಿದೆ. 2017ರಲ್ಲಿ 37.9 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದ್ದು ಮಾರ್ಚ್‌ ತಿಂಗಳ ಈವರೆಗಿನ ದಾಖಲೆಯಾಗಿದೆ. ಉಭಯ ಜಿಲ್ಲೆಗಳಲ್ಲಿ ದಿನವಿಡೀ ಸೆಕೆ ಮತ್ತು ಉರಿಬಿಸಿಲಿನಿಂದ ಕೂಡಿದ

ಕರಾವಳಿಯಲ್ಲಿ ಹೆಚ್ಚಾಗ್ತಿದೆ ತಾಪಮಾನ| ಎಚ್ಚರವಹಿಸಲು ಆರೋಗ್ಯ ಇಲಾಖೆ ಸೂಚನೆ Read More »

ಪುತ್ತೂರು: ಎನ್ಐಎ ತಂಡ ಸಂಚರಿಸುತ್ತಿದ್ದ ವಾಹನಕ್ಕೆ ಬೈಕ್ ಡಿಕ್ಕಿ| ಪಾಣಾಜೆ ಸೊಸೈಟಿ ಸಿಇಒ ದುರ್ಮರಣ

ಸಮಗ್ರ ನ್ಯೂಸ್: ಪುತ್ತೂರಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ( ಎನ್.ಐ.ಎ) ತಂಡ ಸಂಚರಿಸುತಿದ್ದ ಪೊಲೀಸ್ ವಾಹನ ಹಾಗೂ ಬೈಕ್ ಅಪಘಾತ ನಡೆದು ಬೈಕ್ ಸವಾರ ಮೃತಪಟ್ಟ ಘಟನೆ ಮಾ.5 ರಂದು ನಡೆದಿದೆ. ಮೃತರನ್ನು ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಬಿ. ಲಕ್ಷ್ಮಣ ನಾಯ್ಕ(50) ಎಂದು ಗುರುತಿಸಲಾಗಿದೆ. ಪೊಲೀಸ್ ವಾಹನ ಜಿಲ್ಲೆಯ ಡಿಆರ್​​ಗೆ ಸೇರಿದ್ದಾಗಿದ್ದು, ಸುಳ್ಯ ಕಡೆಯಿಂದ ಪುತ್ತೂರಿಗೆ ಆಗಮಿಸುತ್ತಿದ್ದ ಸಂದರ್ಭ ಪುತ್ತೂರಿನಿಂದ ಆರ್ಲಪದವು ಕಡೆಗೆ ಹೋಗುತ್ತಿದ್ದ ಬೈಕ್ ಪೊಲೀಸ್ ವಾಹನಕ್ಕೆ ಡಿಕ್ಕಿಯಾಗಿದೆ. ಪ್ರವೀಣ್ ನೆಟ್ಟಾರು

ಪುತ್ತೂರು: ಎನ್ಐಎ ತಂಡ ಸಂಚರಿಸುತ್ತಿದ್ದ ವಾಹನಕ್ಕೆ ಬೈಕ್ ಡಿಕ್ಕಿ| ಪಾಣಾಜೆ ಸೊಸೈಟಿ ಸಿಇಒ ದುರ್ಮರಣ Read More »

ಬಿಹಾರದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು| ಬಂಟ್ವಾಳದ ಐವರು ಎನ್ಐಎ ವಶಕ್ಕೆ

ಸಮಗ್ರ ನ್ಯೂಸ್: ಬಿಹಾರದಲ್ಲಿ ಪ್ರಧಾನಿ ಮೋದಿ ಆಗಮನ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಂಟ್ವಾಳ ತಾಲೂಕಿನ ನಂದಾವರದಲ್ಲಿ ದಿಢೀರ್ ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದಿದ್ದಾರೆ. ನಾಲ್ಕು ತಂಡಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು ವಿಧ್ವಂಸಕ ಕೃತ್ಯಕ್ಕೆ ಹಣಕಾಸು ನೆರವು ಒದಗಿಸಿದ ಆರೋಪದಲ್ಲಿ ಐವರನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ನಂದಾವರದ ಮಹಮ್ಮದ್ ಸಿನಾನ್, ಇಕ್ಬಾಲ್, ಸರ್ಪಾಜ್ ನವಾಜ್ ಮತ್ತು ನೌಫಲ್ ಎಂಬವರ ಮನೆಗೆ ದಾಳಿ ನಡೆಸಿದ್ದು ವಿಚಾರಣೆ

ಬಿಹಾರದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು| ಬಂಟ್ವಾಳದ ಐವರು ಎನ್ಐಎ ವಶಕ್ಕೆ Read More »

ಮಾ.9ರಂದು ಕರ್ನಾಟಕ ಬಂದ್ ಗೆ ಕಾಂಗ್ರೆಸ್ ಕರೆ

ಸಮಗ್ರ ನ್ಯೂಸ್: ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಖಂಡಿಸಿ ಮಾರ್ಚ್‌ 9ರಂದು ರಾಜ್ಯ ಬಂದ್‌ಗೆ ಕಾಂಗ್ರೆಸ್ ಕರೆ ನೀಡಿದೆ. ಮಾರ್ಚ್ 9ರಂದು ಬೆಳಿಗ್ಗೆ 9ರಿಂದ 11 ಗಂಟೆ ವರೆಗೆ ಬಂದ್‌ ಮಾಡಲಾಗುವುದು. ಶಾಲೆ, ಕಾಲೇಜು, ಆಸ್ಪತ್ರೆಗಳಿಗೆ ತೊಂದರೆಯಾಗದಂತೆ ಪ್ರತಿಭಟನೆ ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದರು. ಕೊರಟಗೆರೆ ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ‘ವ್ಯಾಪಾರಿಗಳು ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು‌. ಭ್ರಷ್ಟಾಚಾರ ಮುಕ್ತ ರಾಜ್ಯ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ. ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ

ಮಾ.9ರಂದು ಕರ್ನಾಟಕ ಬಂದ್ ಗೆ ಕಾಂಗ್ರೆಸ್ ಕರೆ Read More »

ರಾಜ್ಯದಲ್ಲಿ ಮತ್ತೆ ಕೊರೊನಾ ಗುಮ್ಮ| ಅಲ್ಲಲ್ಲಿ ಹೆಚ್ಚಾಗ್ತಿದೆ ಸೋಂಕು ಪ್ರಕರಣ|

ಸಮಗ್ರ ನ್ಯೂಸ್: ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮತ್ತೆ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಆರೋಗ್ಯ ಸಚಿವ ಡಾ. ಸುಧಾಕರ್ ತಜ್ಞರ ಜೊತೆಗೆ ಮಹತ್ವದ ಸಭೆ ನಡೆಸಲಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್​​3 ಎನ್​2 ಬಗ್ಗೆ ನಿಗಾವಹಿಸಲು ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ. ಈ ಸಂಬಂಧ ನಾಳೆ ಅಧಿಕಾರಿಗಳು, ತಜ್ಞರ ಜತೆ ಸಭೆ ನಡೆಸಲಾಗುತ್ತೆ. ರೋಗ ಲಕ್ಷಣದಿಂದಾಗಿ ಕೆಮ್ಮು ಉಂಟಾಗಿರುವ ಮಾಹಿತಿ ಇದೆ. ಸೋಂಕು ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ

ರಾಜ್ಯದಲ್ಲಿ ಮತ್ತೆ ಕೊರೊನಾ ಗುಮ್ಮ| ಅಲ್ಲಲ್ಲಿ ಹೆಚ್ಚಾಗ್ತಿದೆ ಸೋಂಕು ಪ್ರಕರಣ| Read More »

ಮಾಡಾಳು ವಿರೂಪಾಕ್ಷಪ್ಪ ಬಳಿಕ ಮತ್ತೊಬ್ಬ ಸಚಿವರ ಮೇಲೆ‌ ಭ್ರಷ್ಟಾಚಾರದ ಆರೋಪ| ಬೈರತಿ ಬಸವರಾಜ್ ಮೇಲೆ‌ ತಿರುಗಿ ಬಿದ್ದ KSDL ನೌಕರರ ಸಂಘ

ಸಮಗ್ರ ನ್ಯೂಸ್: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬೆನ್ನಲ್ಲೇ ಇದೀಗ ಸಚಿವ ಭೈರತಿ ಬಸವರಾಜ್ ವಿರುದ್ಧವೂ ಕೆ ಎಸ್ ಡಿ ಎಲ್ ನೌಕರರ ಸಂಘ ಗಂಭೀರ ಆರೋಪ ಮಾಡಿದೆ. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕೆ ಎಸ್ ಡಿ ಎಲ್ ಅಧ್ಯಕ್ಷರಾಗಿದ್ದಾಗ 800 ಕೋಟಿ ಅಕ್ರಮ ನಡೆಸಿದ್ದಾರೆ ಎಂಬ ಬಗ್ಗೆ ಆರೋಪ ಮಾಡಿರುವ ಕೆ ಎಸ್ ಡಿ ಎಲ್ ನೌಕರರ ಸಂಘ ಹಿಂದಿನ ಅಧ್ಯಕ್ಷರಾಗಿದ್ದ ಭೈರತಿ ಬಸವರಾಜ್ ಅವರೂ ಕೂಡ 3 ಕೋಟಿಗೂ ಅಧಿಕ ಅಕ್ರಮ ನಡೆಸಿದ್ದಾರೆ ಎಂದು

ಮಾಡಾಳು ವಿರೂಪಾಕ್ಷಪ್ಪ ಬಳಿಕ ಮತ್ತೊಬ್ಬ ಸಚಿವರ ಮೇಲೆ‌ ಭ್ರಷ್ಟಾಚಾರದ ಆರೋಪ| ಬೈರತಿ ಬಸವರಾಜ್ ಮೇಲೆ‌ ತಿರುಗಿ ಬಿದ್ದ KSDL ನೌಕರರ ಸಂಘ Read More »

ಪ್ರವೀಣ್ ಹತ್ಯೆಗೆ ಮೂರು ಬಾರಿ ಸಂಚು| ಎನ್ಐಎ ನಿಂದ ರಿವೀಲ್ ಆಯ್ತು‌ ಮಾಹಿತಿ

ಸಮಗ್ರ ನ್ಯೂಸ್: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಹೊಸತೊಂದು ಮಾಹಿತಿ ರಿವೀಲ್ ಮಾಡಿದೆ. ಪ್ರವೀಣ್ ಹತ್ಯೆಯಾಗಿದ್ದು ಮೂರನೇ ಯತ್ನದಲ್ಲಿ ಎನ್ನಲಾಗುತ್ತಿದೆ. ಪ್ರವೀಣ್ ಕೊಲೆಯಾಗುವ ಮೊದಲು ಎರಡು ಬಾರಿ ಹತ್ಯೆ ಯತ್ನ ನಡೆದಿತ್ತು. ಜು.23 ಮತ್ತು ಜು.24 ರಂದೇ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಜು.23 ರಂದು ಅದೇ ಬೈಕ್​ನಲ್ಲಿ ಕೊಲ್ಲಲು ತಂಡ ಬಂದಿದ್ದು, ಆದರೆ ಅಂಗಡಿ ಬಳಿ ಜನ ಇದ್ದಿದ್ದರಿಂದ ವಾಪಾಸ್ ಹೋಗಿದ್ದಾರೆ. ಜು.24 ರಂದು ಸಂಜೆ 4.30 ಕ್ಕೆ ಕೊಲ್ಲಲು ಸಂಚು

ಪ್ರವೀಣ್ ಹತ್ಯೆಗೆ ಮೂರು ಬಾರಿ ಸಂಚು| ಎನ್ಐಎ ನಿಂದ ರಿವೀಲ್ ಆಯ್ತು‌ ಮಾಹಿತಿ Read More »

ಮೆದುಳು ನಿಷ್ಕ್ರಿಯ; ಯುವಕನ ಅಂಗಾಂಗ ದಾನ ಮಾಡಿದ ಕುಟುಂಬಸ್ಥರು| ಆರು ಜನರ ಜೀವ ಉಳಿಸಿದ ‘ಮಣಿ’

ಸಮಗ್ರ ನ್ಯೂಸ್: ರಸ್ತೆ ಅಪಘಾತದಲ್ಲಿ ತಲೆ ಭಾಗಕ್ಕೆ ಗಂಭೀರವಾಗಿ ಪೆಟ್ಟು ಬಿದ್ದು ಆಸ್ಪತ್ರೆ ಸೇರಿದ್ದ 27 ವರ್ಷದ ಮಣಿ ಎಂಬ ಯುವಕನ ಮೆದುಳು ನಿಷ್ಕ್ರಿಯ ಗೊಂಡಿದ್ದು, ಅಂಗಾಂಗ ದಾನ ಮಾಡುವ ಮೂಲಕ 6 ಜನರ ಜೀವ ಉಳಿಸಿದ ಮಣಿ, ಸಾವಿನಲ್ಲೂ ಸಾರ್ಥಕತೆ ಮರೆದಿದ್ದಾರೆ. ಹೃದಯ, ಯಕೃತ್ತು, ಎರಡು ಮೂತ್ರಪಿಂಡಗಳು, ಮತ್ತು ಕಾರ್ನಿಯಾಗಳನ್ನು ದಾನ ಮಾಡಲಾಗಿದೆ. ಹೃದಯವನ್ನು ಗ್ರೀನ್ ಕಾರಿಡಾರ್​ ಮೂಲಕ ಬೆಂಗಳೂರಿಗೆ ವರ್ಗಾಯಿಸಲಾಗಿದೆ. ಚಾಮರಾಜನಗರ ಜಿಲ್ಲೆಯ ಬಂಡಿಗೆರೆ ಗ್ರಾಮದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮಣಿ ತಲೆಗೆ ಗಂಭೀರವಾದ

ಮೆದುಳು ನಿಷ್ಕ್ರಿಯ; ಯುವಕನ ಅಂಗಾಂಗ ದಾನ ಮಾಡಿದ ಕುಟುಂಬಸ್ಥರು| ಆರು ಜನರ ಜೀವ ಉಳಿಸಿದ ‘ಮಣಿ’ Read More »