March 2023

ಪಣಂಬೂರು:”7.5 ಕೋ.ರೂ ವೆಚ್ಚದಲ್ಲಿ ಪಣಂಬೂರು ಬೀಚ್ ಅಭಿವೃದ್ಧಿ”
-ಶಾಸಕ ವೈ.ಭರತ್ ಶೆಟ್ಟಿ

ಸಮಗ್ರ ನ್ಯೂಸ್: ಅಂತರಾಷ್ಟ್ರೀಯ ಮಟ್ಟದ ಸೌಕರ್ಯವನ್ನು ಪಣಂಬೂರು ಬೀಚ್‍ನಲ್ಲಿ ಬರುವ ಪ್ರವಾಸಿಗರಿಗೆ ನೀಡುವ ಸಲುವಾಗಿ ಸರಕಾರಿ ಖಾಸಗೀ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಶಾಸಕರಾದ ಡಾ.ಭರತ್ ಶೆಟ್ಟಿ ವೈ ನುಡಿದರು. ಸೋಮವಾರ ಸಂಜೆ 7.5 ಕೋಟಿ ರೂ.ವೆಚ್ಚದಲ್ಲಿ ಪಣಂಬೂರು ಬೀಚ್ ಅಭಿವೃದ್ಧಿ ಕಾರ್ಯಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.ಮಂಗಳೂರು ಉತ್ತರ ಕ್ಷೇತ್ರವು ದೊಡ್ಡದಾದ ಬೀಚ್‍ ಅನ್ನು ಹೊಂದಿದೆ. ಪಣಂಬೂರು ಬೀಚ್ ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಸಬೇಕಿದೆ. ಈ ಹಿಂದೆ ಸರಕಾರಕ್ಕೆ 10 ಸಾವಿರ ರೂ.ಗಳ ಕನಿಷ್ಠ ಆದಾಯ ಬರುತ್ತಿತ್ತು.ಇದೀಗ […]

ಪಣಂಬೂರು:”7.5 ಕೋ.ರೂ ವೆಚ್ಚದಲ್ಲಿ ಪಣಂಬೂರು ಬೀಚ್ ಅಭಿವೃದ್ಧಿ”
-ಶಾಸಕ ವೈ.ಭರತ್ ಶೆಟ್ಟಿ
Read More »

ಬಣ್ಣಗಳೆಷ್ಟೇ ಇದ್ದರೂ ಅಂತಿಮವಾಗಿ ಒಂದೇ ಬಣ್ಣವಲ್ಲವೇ? ಸಂಭ್ರಮದ ಹೊನಲು; ಖುಷಿಯ ಕಡಲು – ಹೋಳಿ

ಸಮಗ್ರ ವಿಶೇಷ: ಜಗತ್ತಿನಲ್ಲೆ ಅತ್ಯಂತ ವರ್ಣಮಯ ಹಬ್ಬ ಎಂದರೆ ಅದು ನಮ್ಮ ದೇಶದಲ್ಲಿ ಆಚರಿಸಲ್ಪಡುವ ಹೋಳಿಹಬ್ಬ. ಪ್ರತಿ ವರ್ಷ ಹೋಳಿಹಬ್ಬದ ಆಚರಣೆಯ ಸಂದರ್ಭದಲ್ಲಿ ದೇಶವ್ಯಾಪಿಯಾಗಿ ಜಾತಿಭೇದ, ಲಿಂಗಭೇದ ಮರೆತು ಜನರು ಪರಸ್ಪರ ಬಣ್ಣಗಳನ್ನು ಎರಚಾಡುತ್ತ ಹಾಡುತ್ತ ಕುಣಿಯುತ್ತ ಸಂಭ್ರಮಿಸುವ ಕಾರಣದಿಂದ ಈ ಹಬ್ಬವು ಬೀದಿ ಬೀದಿಗಳಲ್ಲಿ ಬಣ್ಣದ ಲೋಕವನ್ನೆ ಸೃಷ್ಟಿಸುತ್ತದೆ; ಆಬಾಲವೃದ್ಧರೂ ಸೇರಿದಂತೆ ಎಲ್ಲರಲ್ಲೂ ಸಂಭ್ರಮದ ಹೊನಲನ್ನು ಹರಿಸುತ್ತದೆ. ಸದ್ದು-ಗದ್ದಲದಿಂದ ತುಂಬಿದ ಮೆರವಣಿಗೆಗಳು, ಘೋಷಗಳು, ಡೋಲು-ಡಕ್ಕೆಗಳ ಬಡಿಯುವಿಕೆ, ಬಣ್ಣಗಳಲ್ಲಿ ಮುಚ್ಚಿಹೋದ ಮುಖಗಳು, ಹಾದುಹೋಗುವವರ ಮೇಲೆಲ್ಲ ಚಿಮ್ಮಿಸುವ ಬಣ್ಣಬಣ್ಣದ

ಬಣ್ಣಗಳೆಷ್ಟೇ ಇದ್ದರೂ ಅಂತಿಮವಾಗಿ ಒಂದೇ ಬಣ್ಣವಲ್ಲವೇ? ಸಂಭ್ರಮದ ಹೊನಲು; ಖುಷಿಯ ಕಡಲು – ಹೋಳಿ Read More »

ಚಾರ್ಮಾಡಿ ಘಾಟ್‍ನಲ್ಲಿ ಕಾಡ್ಗಿಚ್ಚು

ಸಮಗ್ರ ನ್ಯೂಸ್:ಚಾರ್ಮಾಡಿ ಘಾಟ್‍ನ ಬಿದಿರುತಳ ಸಮೀಪ ಅರಣ್ಯದಲ್ಲಿ ಕಾಡ್ಗಿಚ್ಚಿನಿಂದಾಗಿ ಹತ್ತಾರು ಎಕರೆ ಅರಣ್ಯ ಬೆಂಕಿಗಾಹುತಿಯಾಗಿದೆ. ಅರಣ್ಯದ ನಡುವೆ ಹಾದು ಹೋಗಿರುವ ರಸ್ತೆ ಬದಿಯಲ್ಲೇ ಬೆಂಕಿ ದಗದಗಿಸಿ ಉರಿಯುತ್ತಿದ್ದು ಬಿರುಬಿಸಿಲಿನಿಂದ ಒಣಗಿ ನಿಂತ ಹುಲ್ಲು, ಒಣಗಿದ ಎಲೆಗಳಿಂದಾಗಿ ವೇಗವಾಗಿ ಎಲ್ಲೆಡೆಗೆ ಹರಡುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದು ಒಂದೆಡೆ ಬೆಂಕಿ ಕೆಡಿಸಿದರೇ ಮತ್ತೊಂದು ಕಡೆಯಲ್ಲಿ ಬೆಂಕಿ ಕಾಣಿಸಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ. ಕಳೆದ ಕೆಲ ದಿನಗಳಿಂದ ಚಾರ್ಮಾಡಿ ಘಾಟ್‍ನ ಆಲೇಕಾನ್ ಅರಣ್ಯ, ದೇವರಮನೆ, ಬಲ್ಲಾಳರಾಯನ ದುರ್ಗ ಭಾಗದಲ್ಲಿ ಕಾಡ್ಗಿಚ್ಚು

ಚಾರ್ಮಾಡಿ ಘಾಟ್‍ನಲ್ಲಿ ಕಾಡ್ಗಿಚ್ಚು Read More »

ಸಂಪಾಜೆ: ಅಕ್ರಮ ಮರ ಸಾಗಾಟ| ಲಾರಿ ಮತ್ತು ಮರದ ದಿಮ್ಮಿ ಸಹಿತ ಆರೋಪಿಯ ಬಂಧನ

ಸಮಗ್ರ ನ್ಯೂಸ್: ಕೊಡಗು ಜಿಲ್ಲಾ ಸಂಪಾಜೆ ವಲಯಾರಣ್ಯ ವ್ಯಾಪ್ತಿಯ ಅರಣ್ಯ ತನಿಖಾ ಠಾಣೆ ಸಂಪಾಜೆಯಲ್ಲಿ ಮಡಿಕೇರಿಯಿಂದ ಮಂಗಳೂರು ಕಡೆಗೆ ಲಾರಿಯಲ್ಲಿ ಅಕ್ರಮವಾಗಿ ಹೆಬ್ಬಲಸು ಮರದ ತುಂಡುಗಳನ್ನು ಸಾಗಿಸುತ್ತಿದ್ದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ. ಆರೋಪಿಯನ್ನು ಮಂಗಳೂರು ಅಸೈಗೋಳಿಯ ಮಹಮ್ಮದ್ ಸಪ್ವಾನ್ ಎಂದು ಗುರುತಿಸಲಾಗಿದೆ. ಆರೋಪಿ ಹಾಗೂ ಮರ ಸಾಗಾಟಕ್ಕೆ ಬಳಸಿದ್ದ ವಾಹನವನ್ನು ಸಂಪಾಜೆ ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಒಟ್ಟು 12 ಹೆಬ್ಬಲಸು ಮರದ ದಿಮ್ಮಿಗಳು ಲಭ್ಯವಾಗಿವೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತನಿಖೆ ಕೈಗೊಳ್ಳಲಾಗಿದೆ. ಮಡಿಕೇರಿ

ಸಂಪಾಜೆ: ಅಕ್ರಮ ಮರ ಸಾಗಾಟ| ಲಾರಿ ಮತ್ತು ಮರದ ದಿಮ್ಮಿ ಸಹಿತ ಆರೋಪಿಯ ಬಂಧನ Read More »

ಕುಸಿದ ಈರುಳ್ಳಿ ಬೆಲೆ| ಪ್ರಧಾನಿ‌ ನಿವಾಸಕ್ಕೆ ಪಾರ್ಸಲ್ ಕಳುಹಿಸಿದ ರೈತರು!!

ಸಮಗ್ರ ನ್ಯೂಸ್: ಈರುಳ್ಳಿ ಬೆಲೆ ಕುಸಿತದಿಂದ ಕಂಗಾಲಾಗಿರುವ ಮಹಾರಾಷ್ಟ್ರದ ಅಹಮದ್‌ನಗರದ ರೈತರ ಗುಂಪೊಂದು ಪ್ರತಿಭಟನೆ ಸೂಚಕವಾಗಿ ‍ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಂಚೆ ಮೂಲಕ ಸೋಮವಾರ ಈರುಳ್ಳಿಯನ್ನು ‘ಪಾರ್ಸೆಲ್‌’ ಕಳುಹಿಸಿದೆ. ‘ಬೆಲೆ ಇಳಿಕೆಯಿಂದ ಸಂಕಷ್ಟಕ್ಕೆ ಸಿಲುಕಿರುವ ತಮಗೆ ಅಗತ್ಯ ಪರಿಹಾರ ಒದಗಿಸಬೇಕು. ಈರುಳ್ಳಿ ಹಾಗೂ ಇತರೆ ಕೃಷಿ ಉತ್ಪನ್ನಗಳ ರಫ್ತಿನ ಮೇಲೆ ಹೇರಲಾಗಿರುವ ನಿಷೇಧವನ್ನು ತೆರವುಗೊಳಿಸಬೇಕು. ಪ್ರತಿ ಕ್ವಿಂಟಲ್‌ಗೆ ₹1 ಸಾವಿರ ಪರಿಹಾರ ಪ್ರಕಟಿಸಬೇಕು’ ಎಂದು ಶೇತ್ಕಾರಿ ಸಂಘಟನೆ ಹಾಗೂ ಶೇತ್ಕಾರಿ ವಿಕಾಸ್‌ ಮಂಡಳ ಒತ್ತಾಯಿಸಿವೆ. ‘ಕೇಂದ್ರ

ಕುಸಿದ ಈರುಳ್ಳಿ ಬೆಲೆ| ಪ್ರಧಾನಿ‌ ನಿವಾಸಕ್ಕೆ ಪಾರ್ಸಲ್ ಕಳುಹಿಸಿದ ರೈತರು!! Read More »

ವರದಕ್ಷಿಣೆ ಕಿರುಕುಳ ಹಿನ್ನಲೆ| ಶಾಲಾ ಕೊಠಡಿಯಲ್ಲೇ ಆತ್ಮಹತ್ಯೆಗೆ ಶರಣಾದ ಟೀಚರ್

ಸಮಗ್ರ ನ್ಯೂಸ್: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಖಾಸಗಿ ಶಾಲೆ ಶಿಕ್ಷಕಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ನಡೆದಿದೆ. ಶಿಕ್ಷಕಿ‌ ಬಸಮ್ಮ ಆತ್ಮಹತ್ಯೆಗೆ ಶರಣಾದವರು. 10 ವರ್ಷಗಳ ಹಿಂದೆ ಬಸಮ್ಮ ಹಾಗೂ ಅರ್ಜುನ್ ಪ್ರೀತಿಸಿ ಮದುವೆಯಾಗಿದ್ದರು. ಸಹ ಅರ್ಜುನ್ ಶಿಕ್ಷಕನಾಗಿದ್ದ. ಆದರೂ ಅರ್ಜುನ್ ವರದಕ್ಷಿಣೆಗಾಗಿ ಪತ್ನಿಯನ್ನು ಪೀಡಿಸುತ್ತಿದ್ದ ಎನ್ನುವ ಆರೋಪ ಕೇಳಿಬಂದಿದೆ. ಪ್ರೀತಿಸಿ ಮದುವೆಯಾಗಿದ್ದ ಇಬ್ಬರೂ ಹೂವಿನಹಡಗಲಿ ಪಟ್ಟಣದ ನ್ಯಾಷನಲ್ ಶಾಲೆಯಲ್ಲಿ ಶಿಕ್ಷಕ- ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ, ರವಿವಾರ ಪರೀಕ್ಷೆ ಕೆಲಸದ ವೇಳೆ ಶಾಲೆಗೆ

ವರದಕ್ಷಿಣೆ ಕಿರುಕುಳ ಹಿನ್ನಲೆ| ಶಾಲಾ ಕೊಠಡಿಯಲ್ಲೇ ಆತ್ಮಹತ್ಯೆಗೆ ಶರಣಾದ ಟೀಚರ್ Read More »

ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ| ಉಗ್ರ ಶಾರೀಕ್ ಆಸ್ಪತ್ರೆಯಿಂದ ಡಿಸ್ಚಾರ್ಜ್

ಸಮಗ್ರ ನ್ಯೂಸ್: ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟದಲ್ಲಿ ಗಾಯಗೊಂಡಿದ್ದ ಶಂಕಿತ ಉಗ್ರ ಶಾರಿಕ್ ಚೇತರಿಸಿಕೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್​ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದ ಶಾರಿಕ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಗೆ ದಾಖಲಿಸಲಾಗಿತ್ತು. ಸುಟ್ಟು ಗಾಯಗೊಂಡಿದ್ದ ಶಂಕಿತ ಉಗ್ರ ಶಾರಿಕ್​ ಚೇತರಿಸಿಕೊಂಡಿದ್ದು ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಎರಡೂವರೆ ತಿಂಗಳ ಬಳಿಕ ಶಾರಿಕ್ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾನೆ. ಶಾರಿಕ್ ಸಂಪೂರ್ಣವಾಗಿ ಗುಣಮುಖನಾಗಿದ್ದು ಸದ್ಯ ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ

ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ| ಉಗ್ರ ಶಾರೀಕ್ ಆಸ್ಪತ್ರೆಯಿಂದ ಡಿಸ್ಚಾರ್ಜ್ Read More »

ಬೈಕ್ ನಲ್ಲಿ‌ ತೆರಳುತ್ತಿದ್ದ ವೇಳೆ ತೆಂಗಿನಮರ ಬಿದ್ದು‌‌ಸಾವು

ಸಮಗ್ರ ನ್ಯೂಸ್: ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಮೈಮೇಲೆ ತೆಂಗಿನ ಮರ ಬಿದ್ದ ಕಾರಣ ಪಟ್ಟಣ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಂಗಾಮಿ ಪೌರ ಕಾರ್ಮಿಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಯಲ್ಲಾಪುರದಲ್ಲಿ ನಡೆದಿದೆ. ಡೇವಿಡ್‌ ಮಾದರ್‌ (39) ಮೃತ ದುರ್ದೈವಿ. ಮಧ್ಯಾಹ್ನ ಮಗಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬರುತ್ತಿರುವ ಸಂದರ್ಭದಲ್ಲಿ ಅಕ್ಬರ್‌ ಗಲ್ಲಿಯಲ್ಲಿರುವ ಮನೆಯ ಸಮೀಪದಲ್ಲಿಯೇ ಇದ್ದ ಒಣಗಿದ ತೆಂಗಿನ ಮರವೊಂದು ಮುರಿದು ತಲೆಯ ಮೇಲೆ ಬಿದ್ದಿದ್ದು, ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಕುರಿತು ಯಲ್ಲಾಪುರ

ಬೈಕ್ ನಲ್ಲಿ‌ ತೆರಳುತ್ತಿದ್ದ ವೇಳೆ ತೆಂಗಿನಮರ ಬಿದ್ದು‌‌ಸಾವು Read More »

ಶೂಟಿಂಗ್ ‌ವೇಳೆ ಅವಘಡ| ಬಾಲಿವುಡ್ ಹಿರಿಯ ನಟ ಅಮಿತಾಭ್ ‌ಬಚ್ಚನ್ ಗಂಭೀರ

ಸಮಗ್ರ‌ ನ್ಯೂಸ್: ಬಾಲಿವುಡ್ ಸೂಪರ್ ಸ್ಟಾರ್, ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ಚಿತ್ರೀಕರಣದ ವೇಳೆ ಬಿದ್ದು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಹೈದರಾಬಾದ್‌ ನಲ್ಲಿ ನಡೆಯುತ್ತಿದ್ದ ‘ಪ್ರಾಜೆಕ್ಟ್ ಕೆ’ ಚಿತ್ರೀಕರಣದ ವೇಳೆ ನಟ ಅಮಿತಾಬ್ ಬಚ್ಚನ್ ಗಾಯಗೊಂಡಿದ್ದು, ಪಕ್ಕೆಲುಬು ಮುರಿದಿದೆ. ಕೆಲವು ವಾರಗಳ ಕಾಲ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ. ಸಹಜತೆಗೆ ಮರಳು ಕೆಲವು ದಿನಗಳು ಬೇಕಾಗಬಹುದು. ಬಳಿಕ ಶೂಟಿಂಗ್ ಗೆ ಮರಳುತ್ತೇನೆ ಎಂದು ಬಿಗ್ ಬಿ ಹೇಳಿಕೊಂಡಿದ್ದಾರೆ. ನಾಗ್ ಅಶ್ವಿನ್ ಅವರ ನಿರ್ದೇಶನದ ‘ಪ್ರಾಜೆಕ್ಟ್ ಕೆ’

ಶೂಟಿಂಗ್ ‌ವೇಳೆ ಅವಘಡ| ಬಾಲಿವುಡ್ ಹಿರಿಯ ನಟ ಅಮಿತಾಭ್ ‌ಬಚ್ಚನ್ ಗಂಭೀರ Read More »

ರಶ್ಮಿಕಾ ಬ್ಯೂಟಿಗೆ ಕ್ಲೀನ್ ಬೌಲ್ಡ್ ಆದ ಶುಭ್ಮನ್ ಗಿಲ್| ಆಕೆ ನನ್ನ ಕ್ರಶ್ ಎಂದ ಕ್ರಿಕೆಟ್ ತಾರೆ

ಸಮಗ್ರ ನ್ಯೂಸ್: ನ್ಯಾಷನಲ್‌ ಕ್ರಷ್‌, ಹೆಸರೇ ಸೂಚಿಸುವಂತೆ ರಶ್ಮಿಕಾ ಎಂದರೆ ಜನ ಸಾಮಾನ್ಯರಿಗೆ ಮಾತ್ರವಲ್ಲ ಸೆಲೆಬ್ರಿಟಿಗಳಿಗೆ ಕೂಡಾ ಬಹಳ ಇಷ್ಟ. ಕಳೆದ ವರ್ಷ ಟಾಲಿವುಡ್‌ ನಟ ಬಾಲಕೃಷ್ಣ, ತಮ್ಮ ಅನ್‌ಸ್ಟಾಪಬಲ್‌ ಶೋನಲ್ಲಿ ರಶ್ಮಿಕಾ ಎಂದರೆ ಬಹಳ ಇಷ್ಟ ಎಂದು ಹೇಳಿಕೊಂಡಿದ್ದರು. ಇದೀಗ ಭಾರತೀಯ ಕ್ರಿಕೆಟ್‌ ತಂಡದ ಯುವ ಕ್ರಿಕೆಟಿಗ ಶುಭ್ಮನ್‌ ಗಿಲ್‌ ಕೂಡಾ ರಶ್ಮಿಕಾಗೆ ಬೌಲ್ಡ್‌ ಆಗಿದ್ದಾರಂತೆ. ಕಳೆದ ಕೆಲವು ದಿನಗಳಿಂದ ಈ ಸುದ್ದಿ ಹರಿದಾಡುತ್ತಿದೆ. ಕ್ರಿಕೆಟಿಗರ ಹಾಗೂ ಸಿನಿಮಾ ತಾರೆಯರ ಪ್ರೀತಿ ಪ್ರೇಮ ಪ್ರಣಯ ಇಂದು

ರಶ್ಮಿಕಾ ಬ್ಯೂಟಿಗೆ ಕ್ಲೀನ್ ಬೌಲ್ಡ್ ಆದ ಶುಭ್ಮನ್ ಗಿಲ್| ಆಕೆ ನನ್ನ ಕ್ರಶ್ ಎಂದ ಕ್ರಿಕೆಟ್ ತಾರೆ Read More »