March 2023

ಕಾಳ್ಗಿಚ್ಚಿಗೆ ಹೊತ್ತಿ‌ ಉರಿದ ಅರಣ್ಯ ಇಲಾಖೆ ಸಿಬ್ಬಂದಿ ಬೈಕ್ ಗಳು

ಸಮಗ್ರ ನ್ಯೂಸ್: ಅರಣ್ಯ ಪ್ರದೇಶಕ್ಕೆ ಬೆಂಕಿ ಹತ್ತಿಕೊಂಡ ಘಟನೆ ಚಿಕ್ಕಮಗಳೂರು ತಾಲೂಕಿನ ಸಿಂದಿಗೆರೆ ಗ್ರಾಮದಲ್ಲಿ ನಡೆದಿದೆ. ಕಾಡ್ಗಿಚ್ಚಿನ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿದ ಅರಣ್ಯ ಇಲಾಖೆ ಸಿಬ್ಬಂದಿ ಮೂರು ಬೈಕ್​ಗಳನ್ನು ರಸ್ತೆ ಪಕ್ಕ ನಿಲ್ಲಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಬೆಂಕಿ ಬಿದ್ದ ವ್ಯಾಪ್ತಿಯಲ್ಲಿ ಗಾಳಿ ಜೋರಾಗಿ ಬೀಸಿದ ಪರಿಣಾಮ ಬೆಂಕಿ ಮತ್ತಷ್ಟು ಹೆಚ್ಚಾಗಿದೆ. ಪರಿಣಾಮ ಗಾಳಿಯಲ್ಲಿ ಬಂದ ಬೆಂಕಿಯ ಕಿಡಿ ಅರಣ್ಯ ಇಲಾಖೆ ಸಿಬ್ಬಂದಿಯ ಬೈಕ್​ಗಳಿಗೆ ತಗುಲಿದೆ. ಅದರಂತೆ ಮೂರು ಬೈಕ್​ಗಳು ಸಂಪೂರ್ಣ […]

ಕಾಳ್ಗಿಚ್ಚಿಗೆ ಹೊತ್ತಿ‌ ಉರಿದ ಅರಣ್ಯ ಇಲಾಖೆ ಸಿಬ್ಬಂದಿ ಬೈಕ್ ಗಳು Read More »

ಇಂದು ವೋಲ್ವೋ ಸೇರಿದಂತೆ ಬಿಎಂಟಿಸಿ ಎಲ್ಲಾ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ

ಸಮಗ್ರ ನ್ಯೂಸ್: ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಇಂದು ಬೆಂಗಳೂರಿನ ಎಲ್ಲಾ ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗುತ್ತದೆ. ಮಹಿಳೆಯರಿಗೆ ಸುರಕ್ಷಿತ ಮತ್ತು ಭದ್ರತೆಯುಳ್ಳ ಸಾರ್ವಜನಿಕ ಸಾರಿಗೆ ಸೌಲಭ್ಯ ಒದಗಿಸುವುದು ಬಿಎಂಟಿಸಿ ಉದ್ದೇಶವಾಗಿದೆ. ಮಹಿಳಾ ದಿನದಂದು ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರು ಒಂದು ದಿನ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುವ ಮೂಲಕ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕುರಿತು ಅರಿವು ಮೂಡಿಸಿದಂತಾಗಲಿದೆ. ಜೊತೆಗೆ ವಿಶ್ವ ಮಹಿಳಾ ದಿನದಂದು ಮಹಿಳೆಯರಿಗೆ ವಿಶೇಷ

ಇಂದು ವೋಲ್ವೋ ಸೇರಿದಂತೆ ಬಿಎಂಟಿಸಿ ಎಲ್ಲಾ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ Read More »

ಮಕ್ಕಳಾಗದೆಂಬ ಭಯಕ್ಕೆ ರಾಹುಲ್ ಮದುವೆಯಾಗುತ್ತಿಲ್ಲ ಎಂದ ಕಟೀಲ್| ಮದುವೆಯಾಗಿ ಮಕ್ಕಳನ್ನು ಪಡೆಯಲೇ ಬೇಕೇ ಎಂದು ಆಕ್ಷೇಪಿಸಿದ ಅಹಿಂಸಾ ಚೇತನ್

ಸಮಗ್ರ ನ್ಯೂಸ್: ಲಸಿಕೆ ಪಡೆದರೆ ಮಕ್ಕಳಾಗದೆಂಬ ಸಿದ್ದರಾಮಯ್ಯ ಅವರ ಮಾತು ಕೇಳಿ ರಾಹುಲ್ ಗಾಂಧಿ ಮದುವೆ ಆಗುತ್ತಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಹೇಳಿಕೆಗೆ ನಟ ಚೇತನ್‌ ಅಹಿಂಸಾ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಚೇತನ್ ಕಟೀಲ್‌ ಹೇಳಿಕೆಯು ಕೀಳು ಮಟ್ಟದ್ದು ಮತ್ತು ತರ್ಕವಿಲ್ಲದ್ದು ಎಂದು ಚೇತನ್‌ ಅವರು ಅಭಿಪ್ರಾಯಪಟ್ಟಿದ್ದಾರೆ. ಸಾಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲ್ಲೂಕು ಬಿಜೆಪಿ ಪೇಜ್ ಪ್ರಮುಖರ ಸಭೆಯಲ್ಲಿ ಮಾತನಾಡಿದ್ದ ಕಟೀಲ್‌, ‘ಕೊರೊನಾ ಲಸಿಕೆ

ಮಕ್ಕಳಾಗದೆಂಬ ಭಯಕ್ಕೆ ರಾಹುಲ್ ಮದುವೆಯಾಗುತ್ತಿಲ್ಲ ಎಂದ ಕಟೀಲ್| ಮದುವೆಯಾಗಿ ಮಕ್ಕಳನ್ನು ಪಡೆಯಲೇ ಬೇಕೇ ಎಂದು ಆಕ್ಷೇಪಿಸಿದ ಅಹಿಂಸಾ ಚೇತನ್ Read More »

ಕೊಡಗು: ಆಟೋ ರಿಕ್ಷಾದಲ್ಲಿ ಗಾಂಜಾ ಮಾರಾಟ| ಓರ್ವ ಬಂಧನ

ಸಮಗ್ರ ನ್ಯೂಸ್: ಗೋಣಿಕೊಪ್ಪ-ಮೈಸೂರು ಹೆದ್ದಾರಿಯಲ್ಲಿ ಆಟೋ ರಿಕ್ಷಾದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ. ಗಾಂಜಾ ಮಾರಾಟದ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆ ದಾಳಿ ಮಾಡಿದ ಪೊಲೀಸರು 400 ಗ್ರಾಂ ಗಾಂಜಾ ಸಹಿತ ಗೋಣಿಕೊಪ್ಪಲು ನಿವಾಸಿ ವಿ.ಎಸ್.ಗುರುದತ್ತ (30) ಎಂಬಾತನನ್ನು ವಶಕ್ಕೆ ಪಡೆದರು.ಡಿವೈಎಸ್‌ಪಿ ನಿರಂಜನ್ ರಾಜೇ ಅರಸ್, ಸಿಪಿಐ ವಸಂತ್.ಕೆ.ಎಂ, ಪಿಎಸ್‌ಐ ಸಿದ್ದರಾಜು ಟಿ. ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು. ಇವರ ಕಾರ್ಯಕ್ಷಮತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮಾದಕ ವಸ್ತುಗಳನ್ನು ಬಳಸುವ

ಕೊಡಗು: ಆಟೋ ರಿಕ್ಷಾದಲ್ಲಿ ಗಾಂಜಾ ಮಾರಾಟ| ಓರ್ವ ಬಂಧನ Read More »

ತಲಕಾವೇರಿಯ ವನ್ಯಜೀವಿ ವಲಯಕ್ಕೆ ಬೇಟೆಗೆಂದು ಬಂದಿದ್ದ ಓರ್ವ ಬಂಧನ|ಮೂವರ ಪರಾರಿ

ಸಮಗ್ರ ನ್ಯೂಸ್: ಕೇರಳ ಗಡಿಯಿಂದ ತಲಕಾವೇರಿ ವನ್ಯಜೀವಿ ವಲಯದಲ್ಲಿ ಬೇಟೆಗೆಂದು ಬಂದಿದ್ದ ನಾಲ್ವರು ಆರೋಪಿಗಳಲ್ಲಿ ಓರ್ವನನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ತಲಕಾವೇರಿ ವನ್ಯಜೀವಿ ವಲಯದ ಪದಿನಾಲ್ಕುನಾಡು ಮೀಸಲು ಅರಣ್ಯದಲ್ಲಿ ಬೇಟೆಗಾರರು ಇರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಚಾಂದೆಟ್ಟುಕೊಲ್ಲಿ ಗಸ್ತು ಹಾಗೂ ಉಪವಲಯದ ಸಿಬ್ಬಂದಿ ದಾಳಿ ನಡೆಸಿದರು. ಈ ವೇಳೆ ಒಂಟಿ ನಳಿಕೆಯ ಎರಡು ನಾಡ ಬಂದೂಕು ಸಹಿತ ಓರ್ವ ಆರೋಪಿಯನ್ನು ವಶಕ್ಕೆ ಪಡೆದರು. ತಲೆ ಮರೆಸಿಕೊಂಡಿರುವ ಮೂವರ ಪತ್ತೆಗೆ ತನಿಖೆ ಮುಂದುವರೆದಿದೆ ಎಂದು

ತಲಕಾವೇರಿಯ ವನ್ಯಜೀವಿ ವಲಯಕ್ಕೆ ಬೇಟೆಗೆಂದು ಬಂದಿದ್ದ ಓರ್ವ ಬಂಧನ|ಮೂವರ ಪರಾರಿ Read More »

ಬಂಟ್ವಾಳ: 81ರ ವೃದ್ಧನಿಗೆ ಜೈಲು ಶಿಕ್ಷೆ ಬದಲು ಅಂಗನವಾಡಿ ಶುಚಿಗೊಳಿಸಲು ತೀರ್ಪಿತ್ತ ಹೈಕೋರ್ಟ್

ಸಮಗ್ರ ನ್ಯೂಸ್: ಸನ್ನಡತೆ ಹಾಗೂ ಪ್ರಾಮಾಣಿಕತೆಯನ್ನು ಪರಿಗಣಿಸಿರುವ ನ್ಯಾಯಾಲಯವು ಜೈಲು ಶಿಕ್ಷೆಯ ಬದಲು 81ರ ವೃದ್ಧರಿಗೆ ಅಂಗನವಾಡಿಯಲ್ಲಿ ಸೇವೆ ಮಾಡಲು ಕಳುಹಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದಲ್ಲಿ ನಡೆದಿದೆ. ಕರೋಪಾಡಿ ಗ್ರಾಮದ ನಿವಾಸಿ ಐತಪ್ಪ ನಾಯ್ಕ ಅವರದ್ದು ಬಡ ಕುಟುಂಬ. ಇವರು 2008ರಲ್ಲಿ ಜಾಗದ ವಿಚಾರಕ್ಕೆ ಸಂಬಂಧಿಸಿ ನೆರೆಮನೆಯ ವ್ಯಕ್ತಿಯೊಬ್ಬರಿಗೆ ಹಲ್ಲೆ ಮಾಡಿದ್ದರು. ಇದಕ್ಕೆ ಸಂಬಂಧಿಸಿ ಬಂಟ್ವಾಳದ ಕೋರ್ಟ್, ಆರೋಪಿ ಐತಪ್ಪ ನಾಯ್ಕರಿಗೆ ಮೂರು ದಿನಗಳ ಜೈಲು ಶಿಕ್ಷೆ ಮತ್ತು ಹತ್ತು

ಬಂಟ್ವಾಳ: 81ರ ವೃದ್ಧನಿಗೆ ಜೈಲು ಶಿಕ್ಷೆ ಬದಲು ಅಂಗನವಾಡಿ ಶುಚಿಗೊಳಿಸಲು ತೀರ್ಪಿತ್ತ ಹೈಕೋರ್ಟ್ Read More »

ಚಿಕ್ಕಮಗಳೂರು: 3 ದಿನದಿಂದ ಹೊತ್ತಿ ಉರಿಯುತ್ತಿರುವ ಚಾರ್ಮಾಡಿ ಅರಣ್ಯ, ಬದುಕುಳಿಯಲು ಮನೆ ಬಳಿ ಬಂದ ಕಾಳಿಂಗ ಸರ್ಪ

ಸಮಗ್ರ ನ್ಯೂಸ್: ಮೂಡಿಗೆರೆ ತಾಲೂಕಿನ ಬಾಳೂರು ಮೀಸಲು ಅರಣ್ಯದ ವ್ಯಾಪ್ತಿಗೆ ಸೇರುವ ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶ ಕಳೆದ ಮೂರು ದಿನಗಳಿಂದ ನಿರಂತರವಾಗಿ ಹೊತ್ತಿ ಉರಿಯುತ್ತಿದೆ. ಚಾರ್ಮಾಡಿಯ ದಟ್ಟಕಾನನದಲ್ಲಿದ್ದ ಆಶ್ರಯ ಪಡೆದುಕೊಂಡಿದ್ದ ನೂರಾರು ಪ್ರಾಣಿಪಕ್ಷಿಗಳು ಬೆಂಕಿಯ ಕೆನ್ನಾಲಿಗೆಯಲ್ಲಿ ಸುಟ್ಟು ಕರಕಲಾಗಿವೆ. ಆದರೆ, ಕೆಲ ಪ್ರಾಣಿಗಳು ಜೀವ ಉಳಿಸಿಕೊಳ್ಳಲು ನಾಡಿನತ್ತ ಮುಖ ಮಾಡಿವೆ. ಮರದ ಪೊಟರೆ, ಭೂಮಿಯ ಒಳಗೆ ಹೆಚ್ಚಾಗಿ ವಾಸ ಮಾಡುವ ಕಾಳಿಂಗ ಸರ್ಪಗಳು ಮರದಲ್ಲೂ ಇರಲಾಗದೆ, ಬೆಂಕಿ ಬಿದ್ದ ಭೂಮಿಯ ತಾಪದಿಂದ ಭೂಮಿಯ ಒಳಗೂ ಇರಲಾರದೆ

ಚಿಕ್ಕಮಗಳೂರು: 3 ದಿನದಿಂದ ಹೊತ್ತಿ ಉರಿಯುತ್ತಿರುವ ಚಾರ್ಮಾಡಿ ಅರಣ್ಯ, ಬದುಕುಳಿಯಲು ಮನೆ ಬಳಿ ಬಂದ ಕಾಳಿಂಗ ಸರ್ಪ Read More »

ಸೆಕ್ಸ್ ವೇಳೆ ಮದ್ಯದ ಜೊತೆ ವಯಾಗ್ರ ಸೇವನೆ|‌ ಸ್ನೇಹಿತೆಯೊಂದಿಗೆ ಸರಸದಲ್ಲಿದ್ದವ ಮಸಣ ಸೇರಿದ!!

ಸಮಗ್ರ ನ್ಯೂಸ್: ಮದ್ಯಪಾನ ಮಾಡುತ್ತ, ವಯಾಗ್ರ ಮಾತ್ರೆಗಳನ್ನು ಸೇವಿಸಿದ 41 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಆಘಾತಕಾರಿ ಪ್ರಕರಣ ಮಹಾರಾಷ್ಟ್ರದ ನಾಗ್ಪುರದಲ್ಲಿ ವರದಿಯಾಗಿದೆ. ಸೆಕ್ಸ್ ನಲ್ಲಿ ತೊಡಗುವ ಮೊದಲು ಮದ್ಯದೊಂದಿಗೆ 250 ಎಂಜಿಯ ಸಿಲ್ಡೆನಫಿಲ್​ ಮಾತ್ರೆಗಳನ್ನು ತೆಗೆದುಕೊಂಡಿದ್ದಾಗಿ ವೈದ್ಯಕೀಯ ವರದಿಯನ್ನು ಪ್ರಕಟಿಸಲಾಗಿದೆ. 41 ವರ್ಷದ ವ್ಯಕ್ತಿ ತನ್ನ ಸ್ನೇಹಿತೆಯೊಂದಿಗೆ ನಾಗ್ಪುರದ ಹೋಟೆಲ್​ಗೆ ಹೋಗಿ ತಂಗಿದ್ದ. ಆತ ಮದ್ಯಪಾನ ಮಾಡುತ್ತ, 50ಎಂಜಿಯ 2 ಸಿಲ್ಡೆನ್​ಫಿಲ್​ (ವಯಾಗ್ರ ಬ್ರ್ಯಾಂಡ್​) ಮಾತ್ರೆಗಳನ್ನು ನುಂಗಿದ್ದ. ಮರುದಿನ ಬೆಳಗ್ಗೆ ಎದ್ದವನು ಅಸ್ವಸ್ಥನಾಗಿದ್ದ. ಅವನಿಗೆ ವಾಂತಿ ಕೂಡ

ಸೆಕ್ಸ್ ವೇಳೆ ಮದ್ಯದ ಜೊತೆ ವಯಾಗ್ರ ಸೇವನೆ|‌ ಸ್ನೇಹಿತೆಯೊಂದಿಗೆ ಸರಸದಲ್ಲಿದ್ದವ ಮಸಣ ಸೇರಿದ!! Read More »

ಸುಳ್ಯ: ರಸ್ತೆ ಅಭಿವೃದ್ಧಿ ಭರವಸೆ ಸಂಪೂರ್ಣ ಈಡೇರದಿದ್ದರೇ ಮತ್ತೊಮ್ಮೆ ಹೋರಾಟ ನಡೆಸುತ್ತೇವೆ: ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆ

ಸಮಗ್ರ ನ್ಯೂಸ್: ಅರಂತೋಡು ಅಡ್ತಲೆ ಎಲಿಮಲೆ ರಸ್ತೆ ಅಭಿವೃದ್ಧಿಗಾಗಿ ಅಡ್ತಲೆಯ ನಾಗರಿಕ ಹಿತರಕ್ಷಣಾ ವೇದಿಕೆಯ ಸತತ ಹೋರಾಟ ಮಾಡುತ್ತಾ ಬಂದಿದ್ದು ಜನಪ್ರತಿನಿಧಿಗಳ ಭರವಸೆ ಸಂಪೂರ್ಣ ಈಡೇರದಿದ್ದರೇ ಮತ್ತೊಮ್ಮೆ ಹೋರಾಟ ನಡೆಸುತ್ತೇವೆ ಎಂದು ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಸುಮಾರು 1 ಕೋಟಿ ರೂ ವೆಚ್ಚದಲ್ಲಿ ಅರಂತೋಡಿನಿಂದ ಆರಂಭಗೊಂಡು ಕಾಮಗಾರಿ ಮುಗಿದಿದೆ. ಇನ್ನೂ 2 ಕೋಟಿ ರೂ ಅನುದಾನ ಮಂಜೂರುಗೊಂಡಿದ್ದು ಈ ಕಾಮಗಾರಿ ಒಂದು ವಾರದೊಳಗೆ ಆರಂಭವಾಗದಿದ್ದಲ್ಲಿ ನೋಟ ಅಭಿಯಾನದ ಬಗ್ಗೆ

ಸುಳ್ಯ: ರಸ್ತೆ ಅಭಿವೃದ್ಧಿ ಭರವಸೆ ಸಂಪೂರ್ಣ ಈಡೇರದಿದ್ದರೇ ಮತ್ತೊಮ್ಮೆ ಹೋರಾಟ ನಡೆಸುತ್ತೇವೆ: ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆ Read More »

ಇನ್ಸ್ಟಾಗ್ರಾಂ ಕ್ರೈಂ ಸ್ಟೋರಿ| ಮತ್ತು ಬರುವ ಪಾನೀಯ ನೀಡಿ ಅಪ್ರಾಪ್ತ ಬಾಲಕಿಯ ಸಾಮೂಹಿಕ ಅತ್ಯಾಚಾರ| ಓರ್ವ ಆರೋಪಿಯ ಬಂಧನ; ಏಳು ಮಂದಿ ವಿರುದ್ದ ದೂರು ದಾಖಲು

ಸಮಗ್ರ ನ್ಯೂಸ್: ಹುಕ್ಕಾ ಬಾರ್‌ಗೆ ಕರೆದೊಯ್ದು ಪ್ರಜ್ಞೆ ತಪ್ಪುವ ತಂಪು ಪಾನೀಯ ಕುಡಿಸಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಬಂಧಿತ ವ್ಯಕ್ತಿ ಕಾನ್ಪುರ ನಿವಾಸಿ ವಿನಯ್ ಠಾಕೂರ್ ಸೇರಿದಂತೆ ಏಳು ಮಂದಿಯ ವಿರುದ್ಧ ಬಾಲಕಿ ತಂದೆ ದೂರು ದಾಖಲಿಸಿದ್ದಾರೆ. ವೈದ್ಯ ದಂಪತಿಯ ಪುತ್ರಿ 16 ವರ್ಷದ ಬಾಲಕಿ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ಆರೋಪಿ ವಿನಯ್ ಠಾಕೂರ್ ನೊಂದಿಗೆ ಸಂಪರ್ಕ ಹೊಂದಿದ್ದಳು. ಈತ ಮಾರ್ಚ್ 4ರಂದು ಕರ್ರಾಹಿಯ

ಇನ್ಸ್ಟಾಗ್ರಾಂ ಕ್ರೈಂ ಸ್ಟೋರಿ| ಮತ್ತು ಬರುವ ಪಾನೀಯ ನೀಡಿ ಅಪ್ರಾಪ್ತ ಬಾಲಕಿಯ ಸಾಮೂಹಿಕ ಅತ್ಯಾಚಾರ| ಓರ್ವ ಆರೋಪಿಯ ಬಂಧನ; ಏಳು ಮಂದಿ ವಿರುದ್ದ ದೂರು ದಾಖಲು Read More »