March 2023

ಅಪ್ಪು ಜನ್ಮದಿನಕ್ಕೆ ಪ್ರೈಂನಲ್ಲಿ ‘ಗಂಧದಗುಡಿ’

ಸಮಗ್ರ ಸಿನಿಮಾ: ಪಿಆರ್‌ಕೆ ಪ್ರೊಡಕ್ಷನ್ಸ್‌ನಡಿ, ‘ವೈಲ್ಡ್‌ ಕರ್ನಾಟಕ’ ಖ್ಯಾತಿಯ ಅಮೋಘವರ್ಷ ಅವರ ಜೊತೆಗೂಡಿ ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ತಯಾರಿಸಿದ್ದ ಡಾಕ್ಯೂಫಿಲಂ ‘ಗಂಧದಗುಡಿ’ ಒಟಿಟಿ ರಿಲೀಸ್‌ಗೆ ಸಜ್ಜಾಗಿದೆ. ಪ್ರೈಂ ವಿಡಿಯೊದಲ್ಲಿ ಪುನೀತ್‌ ಅವರ ಜನ್ಮದಿನವಾದ ಮಾರ್ಚ್ 17 ರಂದು ಈ ಡಾಕ್ಯೂಫಿಲಂ ಸ್ಟ್ರೀಮ್‌ ಆಗಲಿದೆ. ಪಿಆರ್‌ಕೆ ಪ್ರೊಡಕ್ಷನ್ಸ್‌ ಬ್ಯಾನರ್‌ ಅಡಿಯಲ್ಲಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರು ಈ ಡಾಕ್ಯೂಫಿಲಂ ನಿರ್ಮಾಣ ಮಾಡಿದ್ದು, ಮಡ್‌ಸ್ಕಿಪ್ಪರ್‌ ಸಹಭಾಗಿತ್ವ ಇದಕ್ಕಿದೆ. ಬಿ. ಅಜನೀಶ್ ಲೋಕನಾಥ್‌ ಸಂಗೀತ ಈ ಸಿನಿಮಾಗಿದೆ. ಕಳೆದ ಅಕ್ಟೋಬರ್‌ […]

ಅಪ್ಪು ಜನ್ಮದಿನಕ್ಕೆ ಪ್ರೈಂನಲ್ಲಿ ‘ಗಂಧದಗುಡಿ’ Read More »

ಚಿಕ್ಕಮಗಳೂರು: ಕಾಫಿನಾಡಲ್ಲಿ ವರ್ಷದ ಮೊದಲ ಮಳೆ

ಸಮಗ್ರ ನ್ಯೂಸ್: ಬಿಸಿಲಿನಿಂದ ತತ್ತರಿಸಿದ್ದ ಮಲೆನಾಡಿಗೆ ತಂಪೆರೆದ ವರುಣದೇವ ಕಳಸ ತಾಲೂಕಿನ ಹೊರನಾಡು ಸುತ್ತಮುತ್ತ ಮಧ್ಯಾಹ್ನದ ನಂತರ ಮಳೆಯಾಗಿದೆ. ಬಲಿಗೆ, ಹೊರನಾಡು, ಕಳಸ, ಹೊನ್ನೆ ಕಾಡು ಮುನ್ನುರ್ ಪಾಲ್, ಹಳುವಳ್ಳಿಯಲ್ಲಿ ಮಳೆಯಾಗಿದ್ದು ಮಲೆನಾಡಿಗರಲ್ಲಿ ಸಂತಸ ತುಂಬಿದೆ. ನಾಳೆ ಮಳೆಗಾಗಿ ಕಳಸೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಗೆ ಮುಂದಾಗಿದ್ದರು ಆದರೆ ಪೂಜೆಗೂ ಮುನ್ನ ವರ್ಷದ ಮೊದಲ ವರುಣ ಸಿಂಚನವಾಗಿದೆ.

ಚಿಕ್ಕಮಗಳೂರು: ಕಾಫಿನಾಡಲ್ಲಿ ವರ್ಷದ ಮೊದಲ ಮಳೆ Read More »

ಕೊಡಗು ಸೇರಿದಂತೆ ಮಲೆನಾಡಿನ ಹಲವೆಡೆ ತಂಪೆರೆದ ಮಳೆರಾಯ

ಸಮಗ್ರ ನ್ಯೂಸ್: ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಇಳೆಗೆ ಮಳೆಯ ಸಿಂಚನವಾಗಿದೆ. ಕೊಡಗು ಜಿಲ್ಲೆಯ ನಾಪೊಕ್ಲು ಸೇರಿದಂತೆ ಮಲೆನಾಡಿನ ಹಲವೆಡೆ ಸಾಧಾರಣ ಮಳೆಯಾಗಿದೆ. ಅನಿರೀಕ್ಷಿತವಾಗಿ ಮಳೆ ಸುರಿದಿದ್ದರಿಂದ ಸಾರ್ವಜನಿಕರು ತೊಂದರೆಗೊಳಗಾದರು. ಆದರೆ ಮೊದಲ ಮಳೆಯಿಂದ ರೈತ ವರ್ಗ ಹರ್ಷಗೊಂಡಿದೆ. ಮೂಡಿಗೆರೆ, ನಾಪೋಕ್ಲು, ಚಿಕ್ಕಮಗಳೂರು ಜಿಲ್ಲೆಯ ಕೆಲವೆಡೆ ಮಳೆಯಾದ ಬಗ್ಗೆ ವರದಿಯಾಗಿದೆ. ಇನ್ನು ಮಾ.14 ರಿಂದ 18ರವರೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೆಲವೆಡೆ ಮಳೆ ಬರಲಿದ್ದು, ಮಾ.16 ರಿಂದ 18ರವರೆಗೆ ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಸಾಧಾರಣ

ಕೊಡಗು ಸೇರಿದಂತೆ ಮಲೆನಾಡಿನ ಹಲವೆಡೆ ತಂಪೆರೆದ ಮಳೆರಾಯ Read More »

ಕಾಂಗ್ರೆಸ್ ಮುಖಂಡ ಮಿಥುನ್ ರೈ ಗೆ ಕೊಲೆ ಬೆದರಿಕೆ; ದೂರು ದಾಖಲು

ಸಮಗ್ರ ನ್ಯೂಸ್: ಕಾಂಗ್ರೆಸ್ ಮುಖಂಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮುಲ್ಕಿ -ಮೂಡುಬಿದಿರೆ ಕ್ಷೇತ್ರದ ಚುನಾವಣೆ ಉಸ್ತುವಾರಿಯಾಗಿರುವ ಮಿಥುನ್ ರೈಯವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಮುಲ್ಕಿ ಬ್ಲಾಕ್ ಕಾಂಗ್ರೆಸ್ ದೂರು ದಾಖಲಿಸಿದೆ. ಜೈ ಶ್ರೀ ರಾಮ್ ಎಂಬ ಹೆಸರಿನ ವಾಟ್ಸ್ ಆ್ಯಪ್ ಗ್ರೂಪ್ ನಲ್ಲಿ ಹನಿ ಹಿಂದೂಸ್ತಾನಿ ಮುಂಬೈ ಎಂಬ ಹೆಸರಿನಲ್ಲಿ “ಮಿಥುನ್ ರೈಯವರಿಗೆ ಗುಂಡಿನೂಟ ಮಾಡಿಸುತ್ತೇನೆ” ಎಂಬ ಸಂದೇಶದೊಂದಿಗೆ ಕೊಲೆ ಬೆದರಿಕೆ ಪೋಸ್ಟ್ ಒಂದನ್ನು ಹಾಕಲಾಗಿದೆ

ಕಾಂಗ್ರೆಸ್ ಮುಖಂಡ ಮಿಥುನ್ ರೈ ಗೆ ಕೊಲೆ ಬೆದರಿಕೆ; ದೂರು ದಾಖಲು Read More »

ಜಾತ್ರೆ ಮುಗಿಸಿ ಮರಳುತ್ತಿದ್ದ ಇಬ್ಬರು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ

ಸಮಗ್ರ ನ್ಯೂಸ್: ಜಾತ್ರೆಯಿಂದ ಹಿಂತಿರುಗುತ್ತಿದ್ದ ಇಬ್ಬರು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯ ಹುಸೇನಗುಂಜ್‍ನಲ್ಲಿ ಸಂಭವಿಸಿದೆ. ಆರು ಮಂದಿ ಕಾಮುಕರು ದಾಳಿ ನಡೆಸಿ ಮೃಗೀಯ ರೀತಿಯಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸ್ ಅೀಧಿಕ್ಷಕ ರಾಜೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವ ಆರು ಕಾಮುಕರನ್ನು ಬಂಧಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಕಳೆದ ಮಾರ್ಚ್ 5 ರಂದು ಅಲಿಗಢ

ಜಾತ್ರೆ ಮುಗಿಸಿ ಮರಳುತ್ತಿದ್ದ ಇಬ್ಬರು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ Read More »

ಮೂಡುಬಿದಿರೆ: ಶಂಕಿತ ಡೆಂಗ್ಯೂಗೆ ಪಿಯುಸಿ ವಿದ್ಯಾರ್ಥಿನಿ ಬಲಿ

ಸಮಗ್ರ ನ್ಯೂಸ್: ಶಂಕಿತ ಡೆಂಗ್ಯೂ ಜ್ವರಕ್ಕೆ ಪ್ರಥಮ ಪಿಯುಸಿ ಓದುತ್ತಿರುವ ವಿಧ್ಯಾರ್ಥಿನಿ ಸಾವನಪ್ಪಿರುವ ಘಟನೆ ಮೂಡಬಿದಿರೆಯಿಂದ ವರದಿಯಾಗಿದೆ. ಪುರಸಭೆ ವ್ಯಾಪ್ತಿಯ ಜ್ಯೋತಿನಗರ ನಿವಾಸಿ, ಪ್ರಥಮ ಪಿಯುಸಿ ವಿದ್ಯಾರ್ಥಿನಿ ಮಿಸ್ರಿಯಾ (17) ಮೃತ ವಿದ್ಯಾರ್ಥಿನಿ.ಇವರಿಗೆ ಬಿಳಿ ರಕ್ತ ಕಣಗಳ ಕುಸಿತ ಕಂಡುಬಂದಿರುವುದರಿಂದ ಸಾವು ಸಂಭವಿಸಿದ್ದು, ಇದು ಡೆಂಗ್ಯೂ ಪ್ರಕರಣ ಎಂದು ಶಂಕಿಸಲಾಗಿದೆ. ಜ್ಯೋತಿನಗರದ ಮಯ್ಯದ್ದಿ -ರಮ್ಲಾತ್‌ ದಂಪತಿಯ ದ್ವಿತೀಯ ಪುತ್ರಿ ಮಿಸ್ರಿಯಾ ಆಳ್ವಾಸ್‌ ಪ.ಪೂ. ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದರು. ಇನ್ನು ವಿದ್ಯಾರ್ಥಿನಿಗೆ ಕೆಲವು ದಿನಗಳಿಂದ

ಮೂಡುಬಿದಿರೆ: ಶಂಕಿತ ಡೆಂಗ್ಯೂಗೆ ಪಿಯುಸಿ ವಿದ್ಯಾರ್ಥಿನಿ ಬಲಿ Read More »

ಪತ್ನಿ ಸಂಜೆ 5ಕ್ಕೇ ಮಲಗಿ ಮರುದಿನ ಮಧ್ಯಾಹ್ನ ಏಳ್ತಾಳೆ; ಅಡುಗೆ ಮಾಡು ಅಂದ್ರೆ ಜಗಳವಾಡ್ತಾಳೆ| ಸಂಕಟ ತಾಳಲಾರದೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ ಪತಿ ಮಹಾಶಯ!!

ಸಮಗ್ರ ನ್ಯೂಸ್: ಪತ್ನಿ ರಾತ್ರಿ ಮಲಗಿ ಮಾರನೇ ದಿನ ಮಧ್ಯಾಹ್ನ ಏಳುತ್ತಾಳೆ. ಅಡುಗೆ ಮಾಡು ಎಂದರೆ ಜಗಳ ಮಾಡುತ್ತಾಳೆ. ಕಳೆದ ಐದು ವರ್ಷದಿಂದ ನರಕಯಾತನೆಗೆ ಕಾರಣರಾದ ಪತ್ನಿ ಹಾಗೂ ಆಕೆಯ ತವರು ಮನೆಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವ್ಯಕ್ತಿಯೊಬ್ಬರು ಬೆಂಗಳೂರಿನ ಬಸವನಗುಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಬಸವನಗುಡಿ ನಿವಾಸಿ ಕಮ್ರಾನ್‌ ಖಾನ್‌(39) ನೀಡಿದ ದೂರಿನ ಮೇರೆಗೆ ಆತನ ಪತ್ನಿ ಆಯೇಷಾ ಫರೀನ್‌, ಮಾವ ಆರೀಫ್‌ ಪಾಷಾ, ಅತ್ತೆ ಹೀನಾ ಕೌಸರ್‌, ಬಾವಮೈದುನಾ ಮೊಹಮ್ಮದ್‌

ಪತ್ನಿ ಸಂಜೆ 5ಕ್ಕೇ ಮಲಗಿ ಮರುದಿನ ಮಧ್ಯಾಹ್ನ ಏಳ್ತಾಳೆ; ಅಡುಗೆ ಮಾಡು ಅಂದ್ರೆ ಜಗಳವಾಡ್ತಾಳೆ| ಸಂಕಟ ತಾಳಲಾರದೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ ಪತಿ ಮಹಾಶಯ!! Read More »

ಪುರುಷ ಖೈದಿಗಳೊಂದಿಗೆ ಲೈಂಗಿಕ ಸಂಬಂಧ| 13 ಮಹಿಳಾ ಗಾರ್ಡ್ ಗಳು ಕೆಲಸದಿಂದ ವಜಾ

ಸಮಗ್ರ ನ್ಯೂಸ್: ಜೈಲಿನಲ್ಲಿ ಪುರುಷ ಕೈದಿಗಳೊಂದಿಗೆ ದೈಹಿಕ ಸಂಬಂಧ ಹಾಗೂ ಅವರಿಗೆ ಸಹಾಯ ಸೌಲಭ್ಯ ನೀಡಲು ನೆರವಾದ 18 ಮಹಿಳಾ ಗಾರ್ಡ್‌ಗಳನ್ನು ಕೆಲಸದಿಂದ ವಜಾ ಮಾಡಲಾದ ಘಟನೆ ಇಂಗ್ಲೆಂಡ್ ನಲ್ಲಿ ನಡೆದಿದೆ. ಇಲ್ಲಿನ ನಾರ್ತ್‌ ವೇಲ್ಸ್‌ನ ರೆಕ್ಸ್‌ಹ್ಯಾಮ್‌ನ ಎಚ್‌ಎಂಪಿ ಬರ್ವಿನ್‌ನ ಜೈಲಿನಲ್ಲಿ 18 ಮಹಿಳಾ ಗಾರ್ಡ್‌ಗಳು ಅನೇಕ ಪುರುಷ ಕೈದಿಗಳೊಂದಿಗೆ ದೈಹಿಕ ಸಂಬಂಧ ಹೊಂದಿದ್ದರು. ಅಲ್ಲದೇ ಪರಸ್ಪರ ವಾಟ್ಸಪ್‌ನಲ್ಲಿ ನಗ್ನಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಮಹಿಳಾ ಗಾರ್ಡ್‌ಗಳು ಕಳೆದ ಆರು ವರ್ಷದಿಂದ ಈ ರೀತಿಯ

ಪುರುಷ ಖೈದಿಗಳೊಂದಿಗೆ ಲೈಂಗಿಕ ಸಂಬಂಧ| 13 ಮಹಿಳಾ ಗಾರ್ಡ್ ಗಳು ಕೆಲಸದಿಂದ ವಜಾ Read More »

ಹೊಸರೂಪದಲ್ಲಿ ಎಂಟ್ರಿ ಕೊಡ್ತಿದೆ ಕೊರೊನಾ| ಸಕ್ರಿಯ ಪ್ರಕರಣಗಳಲ್ಲಿ ದಿಢೀರ್ ಏರಿಕೆ

ಸಮಗ್ರ ನ್ಯೂಸ್: ಅಬ್ಬರಿಸಿ ಬೊಬ್ಬಿರಿದಿದ್ದ ಮಹಾಮಾರಿ ಕೊರೊನಾ ಇನ್ನೇನು ತೊಲಗೇಬಿಡ್ತು ಅಂತ ಜನ ನಿಟ್ಟುಸಿರು ಬಿಡ್ತಿರೋ ಹೊತ್ತಲ್ಲೇ H3N3 ರೂಪದಲ್ಲಿ ಶಾಕ್ ನೀಡುತ್ತಿದೆ. 3 ತಿಂಗಳ ಬಳಿಕ ದೇಶದಲ್ಲಿ ಕೋವಿಡ್ ಮತ್ತೆ ಏರಿಕೆ ಕಾಣ್ತಿದ್ದು ಕರ್ನಾಟಕ, ಕೇರಳ, ಮಹಾರಾಷ್ಟ್ರದಲ್ಲಿ ಅಪಾಯದ ಮುನ್ಸೂಚನೆ ನೀಡಿದೆ. ದೇಶದಲ್ಲಿ ಮತ್ತೆ ಕೊರೊನಾ ಮಹಾಮಾರಿ ಅಟ್ಟಹಾಸದೇಶದಲ್ಲಿ ಸಂಪೂರ್ಣ ಹತೋಟಿಗೆ ಬಂದಿದ್ದ ಕೊರೊನಾ ಮಹಾಮಾರಿ ಕಳೆದೊಂದು ವಾರದಿಂದ ಮತ್ತೆ ತನ್ನ ಆರ್ಭಟ ಶುರು ಮಾಡಿದೆ. 114 ದಿನಗಳ ಬಳಿಕ ಭಾರತದಲ್ಲಿ ದೈನಂದಿನ ಕೇಸ್​ಗಳ ಸಂಖ್ಯೆ

ಹೊಸರೂಪದಲ್ಲಿ ಎಂಟ್ರಿ ಕೊಡ್ತಿದೆ ಕೊರೊನಾ| ಸಕ್ರಿಯ ಪ್ರಕರಣಗಳಲ್ಲಿ ದಿಢೀರ್ ಏರಿಕೆ Read More »

ಉಪ್ಪಿನಂಗಡಿ: ಮನೆಗೆ ನುಗ್ಗಿ ಅಪ್ರಾಪ್ತ ಬಾಲಕಿಯ ಅತ್ಯಾಚಾರಕ್ಕೆ ಯತ್ನ| ಇಬ್ಬರು ಆರೋಪಿಗಳು ಅರೆಸ್ಟ್

ಸಮಗ್ರ ನ್ಯೂಸ್: ಮನೆಗೆ ನುಗ್ಗಿ ಅಪ್ರಾಪ್ತ ಬಾಲಕಿಯೋರ್ವಳನ್ನು ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಉಪ್ಫಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕಡಬ ತಾಲೂಕಿನ ಕೊಯಿಲ ಗ್ರಾಮದ ನಿವಾಸಿಗಳಾದ ಹಸೈನಾರ್ (24) ಹಾಗೂ ಅಬ್ಬಾಸ್ (30) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಕಳೆದ ಮೂರು ದಿನಗಳಿಂದ ಮರ ತುಂಡರಿಸುವ ಕೆಲಸದ ನಿಮಿತ್ತ ಕರಾಯ ಗ್ರಾಮದಲ್ಲಿ ಕಾರ್ಯ ನಿರ್ವಹಿಸಿದ್ದು, ಈ ಸಂದರ್ಭ ನೀರು ಕೇಳುವ ನೆಪದಲ್ಲಿ

ಉಪ್ಪಿನಂಗಡಿ: ಮನೆಗೆ ನುಗ್ಗಿ ಅಪ್ರಾಪ್ತ ಬಾಲಕಿಯ ಅತ್ಯಾಚಾರಕ್ಕೆ ಯತ್ನ| ಇಬ್ಬರು ಆರೋಪಿಗಳು ಅರೆಸ್ಟ್ Read More »