March 2023

ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪ| 9 ಸಾವು; 100ಕ್ಕೂ ಹೆಚ್ಚು ಮಂದಿಗೆ ಗಾಯ

ಸಮಗ್ರ ನ್ಯೂಸ್: ಪಾಕಿಸ್ತಾನದಲ್ಲಿ ಕಳೆದ ದಿನ ರಾತ್ರಿ ಪ್ರಬಲ ಭೂಕಂಪ ಸಂಭವಿಸಿದ್ದು ಕನಿಷ್ಟ 9 ಜನರು ಸಾವನ್ನಪ್ಪಿದ್ದಾರೆ ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪಾಕಿಸ್ತಾನದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನದ ಹಿಂದೂಕುಶ್ ಪ್ರದೇಶ ಎಂದು ಪಿಎಂಡಿ ಹೇಳಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.8 ಇದೆ. ಖೈಬರ್ ಪಖ್ತುಂಖ್ವಾ ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರದಿಯ ಪ್ರಕಾರ, ಪಾಕಿಸ್ತಾನದಲ್ಲಿ ಭೂಕಂಪದ ಸಮಯದಲ್ಲಿ ಛಾವಣಿ, ಗೋಡೆ ಮತ್ತು ಮನೆ ಕುಸಿದ ಘಟನೆಗಳಲ್ಲಿ 9 […]

ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪ| 9 ಸಾವು; 100ಕ್ಕೂ ಹೆಚ್ಚು ಮಂದಿಗೆ ಗಾಯ Read More »

ಮಂಗಳೂರು ಬಂದರು ತಲುಪಿದ ಸಿಲ್ವರ್ ಸ್ಪಿರಿಟ್| ಏನಿದರ ವೈಶಿಷ್ಟ್ಯತೆ ಗೊತ್ತಾ?

ಸಮಗ್ರ ನ್ಯೂಸ್: “ಸಿಲ್ವರ್ ಸ್ಪಿರಿಟ್” ಹೆಸರಿನ ಪ್ರವಾಸಿ ಹಡಗು ಎನ್‌ಎಂಪಿಎಗೆ ಇಂದು ಬೆಳಗ್ಗೆ ಬಂದಿಳಿದಿದೆ. ಹಡಗಿನಲ್ಲಿ 497 ಪ್ರಯಾಣಿಕರು ಮತ್ತು 411 ಸಿಬ್ಬಂದಿ ಇದ್ದರು. ಹಡಗಿನ ಒಟ್ಟಾರೆ ಉದ್ದವು 210.70 ಮೀಟರ್ ಆಗಿದ್ದು, 39,444 ಗ್ರಾಸ್ ಟನ್ ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು 6.60 ಮೀಟರ್ ಡ್ರಾಫ್ಟ್ ಹೊಂದಿದೆ. ಹಡಗು ಕೊಚ್ಚಿನ್ ಬಂದರಿನಿಂದ ಬಂದಿದ್ದು ಮಂಗಳೂರಿನಿಂದ ಮೊರ್ಮುಗಾವೊ ಬಂದರಿಗೆ ಪ್ರಯಾಣಿಸಲಿದೆ. ಪ್ರಯಾಣಿಕರಿಗೆ ಸಾಂಪ್ರದಾಯಿಕ ಡ್ರಮ್ (ಚೆಂಡೆ) ನುಡಿಸುವ ಮೂಲಕ ಆತ್ಮೀಯ ಸ್ವಾಗತ ನೀಡಲಾಯಿತು. ಕ್ರೂಸ್ ಪ್ರಯಾಣಿಕರ ಆಹ್ಲಾದಕರ

ಮಂಗಳೂರು ಬಂದರು ತಲುಪಿದ ಸಿಲ್ವರ್ ಸ್ಪಿರಿಟ್| ಏನಿದರ ವೈಶಿಷ್ಟ್ಯತೆ ಗೊತ್ತಾ? Read More »

ಕನ್ನಡಿಗರಿಗೆ ಕನ್ನಡದಲ್ಲೇ ಯುಗಾದಿ‌ ಶುಭಾಶಯ ಕೋರಿದ ಪ್ರಧಾನಿ ಮೋದಿ

ಸಮಗ್ರ ನ್ಯೂಸ್: ನಾಡಿನಾದ್ಯಂತ ಜನರು ಯುಗಾದಿ ಹಬ್ಬ ಸಂತಸದಲ್ಲಿದ್ದಾರೆ. ಮನೆ ಮನೆಯಲ್ಲೂ ಈ ಹಬ್ಬವನ್ನು ಆಚರಿಸುತ್ತಿದ್ದಾರೆ. ಅದರಂತೆಯೇ ಪ್ರಧಾನಿ ನರೇಂದ್ರ ಮೋದಿಯವರು ಕನ್ನಡಿಗರಿಗೆ ಯುಗಾದಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಕನ್ನಡದಲ್ಲೇ ಟ್ವೀಟ್​ ಮಾಡುವ ಮೂಲಕ ಪ್ರಾರ್ಥಿಸಿದ್ದಾರೆ. ಮೋದಿ ಅವರು ಟ್ವೀಟ್​ನಲ್ಲಿ ಎಲ್ಲರಿಗೂ ಸಂತಸದ ಯುಗಾದಿಯ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಭರವಸೆ ಮತ್ತು ಹೊಸ ಆರಂಭಗಳನ್ನು ಒಳಗೊಂಡ ಈ ಹಬ್ಬವು, ಮುಂಬರುವ ವರ್ಷದಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ಅಪಾರ ಸಂತೋಷ ಮತ್ತು ಉತ್ತಮ ಆರೋಗ್ಯ ತರಲಿ ಎಂದು ನಾನು ಪ್ರಾರ್ಥಿಸುತ್ತೇನೆ

ಕನ್ನಡಿಗರಿಗೆ ಕನ್ನಡದಲ್ಲೇ ಯುಗಾದಿ‌ ಶುಭಾಶಯ ಕೋರಿದ ಪ್ರಧಾನಿ ಮೋದಿ Read More »

ಯುಗಾದಿ ವರ್ಷ ಭವಿಷ್ಯ| ನೂತನ ಸಂವತ್ಸರದಲ್ಲಿ ದ್ವಾದಶ ರಾಶಿಗಳ ಗೋಚಾರಫಲ

ಸಮಗ್ರ ನ್ಯೂಸ್: ಈ ನವ ಸಂವತ್ಸರದಲ್ಲಿ ಶನಿ ಗ್ರಹವು ಯುಗಾದಿ ಆರಂಭದಿಂದ ಸಂವತ್ಸರದ ಅಂತ್ಯದ ತನಕ ಈಗಿರುವ ಕುಂಭ ರಾಶಿಯಲ್ಲಿಯೇ ಸಂಚಾರ ಮುಂದುವರಿಸಲಿದೆ. ಇನ್ನು ಗುರು ಗ್ರಹವು ಇದೇ ಏಪ್ರಿಲ್ 22 ತನಕ ಮೀನ ರಾಶಿಯಲ್ಲಿದ್ದು, ಏಪ್ರಿಲ್ 22 ನಂತರ ಈ ಸಂವತ್ಸರದ ಅಂತ್ಯದ ತನಕ ಮೇಷ ರಾಶಿಯಲ್ಲಿ ಸಂಚಾರ ನಡೆಸಲಿದೆ. ಯುಗಾದಿ ಆರಂಭದಿಂದ ಅಕ್ಟೋಬರ್ 30ರವರೆಗೆ ರಾಹು ಮೇಷದಲ್ಲಿ, ತುಲಾದಲ್ಲಿ ಕೇತು ಇದ್ದು, ಅಕ್ಟೋಬರ್ 30 ರಿಂದ ಸಂವತ್ಸರದ ಕೊನೆ ತನಕ ಮೀನದಲ್ಲಿ ರಾಹು, ಕನ್ಯಾದಲ್ಲಿ

ಯುಗಾದಿ ವರ್ಷ ಭವಿಷ್ಯ| ನೂತನ ಸಂವತ್ಸರದಲ್ಲಿ ದ್ವಾದಶ ರಾಶಿಗಳ ಗೋಚಾರಫಲ Read More »

“ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ” | ಕಹಿ ನೆನಪು ಮರೆಯಲಿ; ಸಿಹಿ ನೆನಪು ಚಿರವಾಗಲಿ

ಸಮಗ್ರ ನ್ಯೂಸ್: ಯುಗಾದಿ ಹಿಂದುಗಳ ಪಾಲಿಗೆ ಹೊಸವರ್ಷ. ಚೈತ್ರ ಮಾಸದಲ್ಲಿ ಇದನ್ನು ಆಚರಿಸಲಾಗುತ್ತದೆ. ಬ್ರಹ್ಮ ಈ ದಿನದಂದು ಇಡೀ ಜಗತ್ತನ್ನೇ ಸೃಷ್ಟಿಸಿದ ಎಂಬ ನಂಬಿಕೆಯಿದೆ. ಬ್ರಹ್ಮ ಹಾಗೂ ವಿಷ್ಣುವನ್ನು ಈ ದಿನ ಪೂಜಿಸಲಾಗುತ್ತದೆ. ಯುಗಾದಿಯ ಹಬ್ಬವು ಬ್ರಹ್ಮಾಂಡವನ್ನು ಸೃಷ್ಟಿಸಲು ಬ್ರಹ್ಮನಿಗೆ ಸಮರ್ಪಿತವಾಗಿದ್ದರೂ, ಈ ದಿನದಂದು ಹೆಚ್ಚಿನ ದೇವತೆಗಳನ್ನು ಪೂಜಿಸಲಾಗುತ್ತದೆ. ಏಕೆಂದರೆ ನಾವು ನಮ್ಮ ಪ್ರಾರ್ಥನೆಗಳನ್ನು ಗಣೇಶ, ಮಾತಾ ಪಾರ್ವತಿ, ಭಗವಾನ್ ವಿಷ್ಣು, ಭಗವಾನ್ ರಾಮ ಮತ್ತು ಲಕ್ಷ್ಮಿ ದೇವಿಗೆ ಸಲ್ಲಿಸುತ್ತೇವೆ. ಮುಂದಿನ ವರ್ಷಕ್ಕೆ ಆಶೀರ್ವಾದ ಮತ್ತು ನಮ್ಮ

“ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ” | ಕಹಿ ನೆನಪು ಮರೆಯಲಿ; ಸಿಹಿ ನೆನಪು ಚಿರವಾಗಲಿ Read More »

ಸಾರ್ವಜನಿಕ ಶಿಕ್ಷಣ ಇಲಾಖೆ ಇನ್ಮುಂದೆ ಶಾಲಾ ಶಿಕ್ಷಣ ಇಲಾಖೆ

ಸಮಗ್ರ ನ್ಯೂಸ್: ಎಸ್ ಎಸ್ ಎಲ್ ಸಿ ಪರೀಕ್ಷಾ ಮಂಡಳಿ ಹಾಗೂ ಪದವಿ ಪೂರ್ವ ಶಿಕ್ಷಣ ಮಂಡಳಿಯನ್ನು ಒಂದು ಮಾಡಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಂಬುದಾಗಿ ಮರು ನಾಮಕರಣ ಮಾಡಲಾಗಿತ್ತು. ಈ ಬೆನ್ನಲ್ಲೇ ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ಶಾಲಾ ಶಿಕ್ಷಣ ಇಲಾಖೆ ಎಂದು ಮರು ಪದನಾಮೀಕರಿಸಿ ಸರ್ಕಾರ ಆದೇಶಿಸಿದೆ. ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಸಾರ್ವಜನಿಕ ಶಿಕ್ಷಣ ಆಯುಕ್ತರು ಹಾಗೂ ಅದರ ಅಧೀನದಲ್ಲಿ ಬರುವ

ಸಾರ್ವಜನಿಕ ಶಿಕ್ಷಣ ಇಲಾಖೆ ಇನ್ಮುಂದೆ ಶಾಲಾ ಶಿಕ್ಷಣ ಇಲಾಖೆ Read More »

ಸುಳ್ಯ: ರಸ್ತೆ ಬಿಟ್ಟು ಗುಡ್ಡವೇರಿದ ಕಾರು!

ಸಮಗ್ರ ನ್ಯೂಸ್: ವೇಗದ ಚಾಲನೆಯಿಂದ ನಿಯಂತ್ರಣ ಕಳೆದುಕೊಂಡ ಕಾರೊಂದು ರಸ್ತೆ ಬಿಟ್ಟು ಗುಡ್ಡ‌ ಏರಿ ಪಲ್ಟಿಯಾದ ಘಟನೆ ಮಾ. 21 ರ ಸಂಜೆ ಮಾಣಿ – ಮೈಸೂರು ರಾ.ಹೆದ್ದಾರಿಯ ಅಡ್ಕಾರ್ ಬಳಿ ಸಂಭವಿಸಿದೆ. ಕಾರಿನಲ್ಲಿ 4 ಜನ ಪ್ರಯಾಣಿಕರು ಇದ್ದು ಕಾಸರಗೋಡಿನಿಂದ ಸುಳ್ಯ ಕಡೆಗೆ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಸುಳ್ಯ: ರಸ್ತೆ ಬಿಟ್ಟು ಗುಡ್ಡವೇರಿದ ಕಾರು! Read More »

ಕೊಹ್ಲಿ‌ ಫಿಟ್ನೆಸ್ ಗಾಗಿ ಮಾಡೋ‌ ಖರ್ಚೆಷ್ಟು ಗೊತ್ತಾ? ಊಟದ ರೇಟು ಕೇಳಿದ್ರೇ ಬೆಚ್ಚಿ ಬೀಳ್ತೀರಾ!!

ಸಮಗ್ರ ನ್ಯೂಸ್: ಭಾರತದ ಮಾಜಿ ನಾಯಕ ಮತ್ತು ರನ್ ಮೆಷಿನ್ ವಿರಾಟ್ ಕೊಹ್ಲಿ ಯಾವಾಗಲೂ ತಮ್ಮ ಫಿಟ್ನೆಸ್ ಬಗ್ಗೆ ಜಾಗೃತರಾಗಿದ್ದಾರೆ. ವಿರಾಟ್ ಕೊಹ್ಲಿ ಮೊಸರು, ಹಾಲಿನ ಉತ್ಪನ್ನಗಳು ಅಥವಾ ಗೋಧಿ ಹಿಟ್ಟಿನ ಚಪಾತಿಗಳನ್ನು ತಿನ್ನುವುದಿಲ್ಲವಂತೆ. ವಿರಾಟ್ ತನ್ನ ಆಹಾರದಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸುವುದಿಲ್ಲ. ಇದು ದೇಹವನ್ನು ಕೊಬ್ಬನ್ನು ಮುಕ್ತಗೊಳಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ವಿರಾಟ್ ಕೊಹ್ಲಿ ವಿವಿಧ ಪದಾರ್ಥಗಳ ಹಿಟ್ಟಿನ ಬ್ರೆಡ್ ಮಾತ್ರ ತಿನ್ನುತ್ತಾರೆ. ಸಾಮಾನ್ಯ ಅನ್ನದ ಬದಲು ಸ್ಪೇಷಲ್​ ಅನ್ನ ತಿನ್ನುತ್ತಾರೆ. ಈ ಅಕ್ಕಿಯನ್ನು ಆಹಾರ

ಕೊಹ್ಲಿ‌ ಫಿಟ್ನೆಸ್ ಗಾಗಿ ಮಾಡೋ‌ ಖರ್ಚೆಷ್ಟು ಗೊತ್ತಾ? ಊಟದ ರೇಟು ಕೇಳಿದ್ರೇ ಬೆಚ್ಚಿ ಬೀಳ್ತೀರಾ!! Read More »

ಹಿಂದುತ್ವದ ಅವಹೇಳನಕಾರಿ ಪೋಸ್ಟ್; ನಟ ಚೇತನ್ ಅರೆಸ್ಟ್

ಸಮಗ್ರ ನ್ಯೂಸ್: ಹಿಂದುತ್ವದ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ ಚೇತನ್ ಅವರ ವಿರುದ್ಧ ಐಪಿಸಿ ಸೆಕ್ಷನ್ 295A, 505B ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಶೇಷಾದ್ರಿಪುರ ಪೊಲೀಸರು ನಟನನ್ನು ಬಂಧಿಸಿದ್ದಾರೆ. ಹಿಂದುತ್ವದ ಬಗ್ಗೆ ಚೇತನ್ ಕೆಟ್ಟದಾಗಿ ಪೋಸ್ಟ್ ಮಾಡಿದ್ದರು ಎನ್ನುವ ಆರೋಪ ಬಂತು. ಇದಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಅರೆಸ್ಟ್ ಮಾಡಲಾಗಿದೆ. ಹಿಂದುತ್ವದ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ ಚೇತನ್ ಅವರ ವಿರುದ್ಧ ಐಪಿಸಿ ಸೆಕ್ಷನ್ 295A, 505B ಅಡಿಯಲ್ಲಿ ಕೇಸ್ ದಾಖಲು

ಹಿಂದುತ್ವದ ಅವಹೇಳನಕಾರಿ ಪೋಸ್ಟ್; ನಟ ಚೇತನ್ ಅರೆಸ್ಟ್ Read More »

ಬಿಜೆಪಿಗೆ ಬಾಬುರಾವ್ ಚಿಂಚನಸೂರ್ ಗುಡ್ ಬೈ| ಎಂಎಲ್ಸಿ ಸ್ಥಾನಕ್ಕೂ ರಾಜೀನಾಮೆ

ಸಮಗ್ರ ನ್ಯೂಸ್: ವಿಧಾನ ಪರಿಷತ್ತಿನ ಸದಸ್ಯರಾದ ಬಿಜೆಪಿಯ ಬಾಬುರಾವ್‌ ಚಿಂಚನಸೂರು ಅವರು ಕೊನೆಗೂ ಬಿಜೆಪಿಗೆ ವಿದಾಯ ಹೇಳಿದ್ದಾರೆ. ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಸೋಮವಾರ ಮಧ್ಯಾಹ್ನ ಖುದ್ದಾಗಿ ಭೇಟಿಯಾಗಿ ತನ್ನ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದು, ಅದನ್ನು ಅಂಗೀಕರಿಸಲಾಗಿದೆ. ಜತೆಗೆ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ. ಇದರೊಂದಿಗೆ ಅವರು ಕಾಂಗ್ರೆಸ್‌ ಸೇರುವ ಸಾಧ್ಯತೆಗಳು ಹೆಚ್ಚಿವೆ. ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಬೆಳಗ್ಗೆ ನಿಗದಿಯಾಗಿರುವ ಕಾರ್ಯಕ್ರಮದಲ್ಲಿ ಅವರು ಮತ್ತೆ ಕಾಂಗ್ರೆಸ್‌ ಸೇರಲಿದ್ದಾರೆ ಎನ್ನಲಾಗಿದೆ. ಗುರುಮಿಠಕಲ್‌ ಹಾಗೂ ಚಿತ್ತಾಪುರ

ಬಿಜೆಪಿಗೆ ಬಾಬುರಾವ್ ಚಿಂಚನಸೂರ್ ಗುಡ್ ಬೈ| ಎಂಎಲ್ಸಿ ಸ್ಥಾನಕ್ಕೂ ರಾಜೀನಾಮೆ Read More »