March 2023

Accenture given gate pass to employees| ಐಟಿ‌ ದಿಗ್ಗಜ ಅಕ್ಸೆಂಚರ್ ನಿಂದ 19 ಸಾವಿರ ಉದ್ಯೋಗಿಗಳಿಗೆ ಗೇಟ್ ಪಾಸ್

ಸಮಗ್ರ ನ್ಯೂಸ್: ಐಟಿ ದೈತ್ಯ ಅಕ್ಸೆಂಚರ್ ಗುರುವಾರ ಸುಮಾರು 19,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ಇದು ತನ್ನ ಉದ್ಯೋಗಿಗಳ ಶೇಕಡಾ 2.5ರಷ್ಟನ್ನು ಪ್ರತಿನಿಧಿಸುತ್ತದೆ. ಅರ್ಧಕ್ಕಿಂತ ಹೆಚ್ಚು ವಜಾಗಳು ತನ್ನ ಬಿಲ್ ಮಾಡಲಾಗದ ಕಾರ್ಪೊರೇಟ್ ಕಾರ್ಯಗಳಲ್ಲಿನ ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ಕಂಪನಿ ಘೋಷಿಸಿದೆ. ಅಕ್ಸೆಂಚರ್ ತನ್ನ ವಾರ್ಷಿಕ ಆದಾಯ ಮತ್ತು ಲಾಭದ ಅಂದಾಜುಗಳನ್ನ ಸಹ ಕಡಿಮೆ ಮಾಡಿದೆ. ಐಟಿ ಕಂಪನಿಯು ಈಗ ತನ್ನ ವಾರ್ಷಿಕ ಆದಾಯದ ಬೆಳವಣಿಗೆಯನ್ನ ಸ್ಥಳೀಯ ಕರೆನ್ಸಿಯಲ್ಲಿ ಶೇಕಡಾ 8ರಿಂದ 10ರ ವ್ಯಾಪ್ತಿಯಲ್ಲಿ […]

Accenture given gate pass to employees| ಐಟಿ‌ ದಿಗ್ಗಜ ಅಕ್ಸೆಂಚರ್ ನಿಂದ 19 ಸಾವಿರ ಉದ್ಯೋಗಿಗಳಿಗೆ ಗೇಟ್ ಪಾಸ್ Read More »

ಶ್ರವಣಬೆಳಗೊಳ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯ

ಸಮಗ್ರ ನ್ಯೂಸ್: ಅನಾರೋಗ್ಯದಿಂದ ಬಳಲುತ್ತಿದ್ದ ಶ್ರವಣಬೆಳಗೊಳದ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ (73) ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರನ್ನು ಅಂಬ್ಯುಲೆನ್ಸ್ ಮೂಲಕ ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ನಿಧನರಾಗಿದ್ದಾರೆ. ಸ್ವಸ್ಥಿ ಶ್ರಿ ಚಾರುಕೀರ್ತಿ ಅನ್ನುವ ಬಿರುದಾಂಕಿತ ಜೈನಭಟ್ಟಾರಕ

ಶ್ರವಣಬೆಳಗೊಳ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯ Read More »

ಸುಳ್ಯ ಮೂಲದ ಯುವಕ ಚಿಕ್ಕಮಗಳೂರಿನಲ್ಲಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಕಲ್ಮಕಾರು ಗ್ರಾಮದ ಯುವಕನೋರ್ವ ಚಿಕ್ಕಮಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.22ರಂದು ವರದಿಯಾಗಿದೆ. ಕಲ್ಮಕಾರು ಗ್ರಾಮದ ಮೆಂಟೆಕಜೆ ತೇಜಕುಮಾರ್ ಅವರ ಪುತ್ರ ಲೋಕೇಶ(25) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಚಿಕ್ಕಮಗಳೂರಿನಲ್ಲಿ ಜಿಯೋ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು, ತನ್ನ ರೂಮಿನಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತ ಲೋಕೇಶ್ ತಂದೆ, ತಾಯಿ ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.

ಸುಳ್ಯ ಮೂಲದ ಯುವಕ ಚಿಕ್ಕಮಗಳೂರಿನಲ್ಲಿ ಆತ್ಮಹತ್ಯೆ Read More »

sports news| ಇಂಡೋ – ಆಸೀಸ್ ಏಕದಿನ ಸರಣಿ| ಸೋತು ನಂ.1 ಪಟ್ಟ‌ ಕಳೆದುಕೊಂಡ ಭಾರತ

ಸಮಗ್ರ ನ್ಯೂಸ್: ಪ್ರವಾಸಿ ಆಸ್ಟ್ರೇಲಿಯಾ ಎದುರು 3 ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯಲ್ಲಿ 1-2 ಅಂತರದ ಸೋಲುಂಡ ರೋಹಿತ್‌ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ, ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಒಡಿಐ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಪಟ್ಟವನ್ನು ಕಳೆದುಕೊಂಡಿದೆ. ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಸರಣಿಯ ನಿರ್ಣಾಯಕ ಹಾಗೂ ಅಂತಿಮ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ 21 ರನ್‌ಗಳ ಜಯ ದಾಖಲಿಸಿದ ಆಸ್ಟ್ರೇಲಿಯಾ ತಂಡ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಅಂದಹಾಗೆ ಐಸಿಸಿ ಒಡಿಐ ಶ್ರೇಯಾಂಕ ಪಟ್ಟಿಯಲ್ಲಿ

sports news| ಇಂಡೋ – ಆಸೀಸ್ ಏಕದಿನ ಸರಣಿ| ಸೋತು ನಂ.1 ಪಟ್ಟ‌ ಕಳೆದುಕೊಂಡ ಭಾರತ Read More »

ಬಸ್ ಮತ್ತು ಬೈಕ್ ನಡುವೆ ಅಪಘಾತ; ಸವಾರರು ದುರ್ಮರಣ

ಸಮಗ್ರ ನ್ಯೂಸ್: ಕೆಎಸ್‌ಆರ್ ಟಿಸಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರಿನ ಎಪಿಎಂಸಿ ಬಳಿ ಅಪಘಾತ ಸಂಭವಿಸಿದೆ. ಮೃತರನ್ನು ದಂಟರಮಕ್ಕಿ ನಿವಾಸಿ 28 ವರ್ಷದ ಶ್ರೀಧರ್ ಮತ್ತು ಹಿರೇಮಗಳೂರು ನಿವಾಸಿ 30 ವರ್ಷದ ದಯಾನಂದ ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆಗೆ ಬಸ್ಸಿನ ಮುಂಭಾಗಕ್ಕೆ ಹಾನಿಯಾಗಿದ್ದು, ಬೈಕ್ ಸಂಪೂರ್ಣ ಜಖಂಗೊಂಡಿದೆ ಎನ್ನಲಾಗಿದೆ. ಘಟನೆ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಬಸ್ ಮತ್ತು ಬೈಕ್ ನಡುವೆ ಅಪಘಾತ; ಸವಾರರು ದುರ್ಮರಣ Read More »

ನೂರರ ಸಂಭ್ರಮದಲ್ಲಿ ‘ಮನ್ ಕಿ ಬಾತ್’ | ಈ ಸಂಚಿಕೆಯ ಮೋದಿ ಮಾತಿಗೆ ಕಿವಿಯಾಗಲಿದೆ ಜಗತ್ತು

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ತಿಂಗಳ ಕೊನೆಯ ಭಾನುವಾರ ನಡೆಸಿಕೊಡುವ ಮನ್‌ ಕಿ ಬಾತ್‌ ರೇಡಿಯೊ ಕಾರ್ಯಕ್ರಮ ಹೆಚ್ಚು ಖ್ಯಾತಿಯಾಗಿದೆ. ಭಾರತದ ಕೋಟ್ಯಂತರ ಜನ ಅದನ್ನು ಕೇಳುತ್ತಾರೆ. ನರೇಂದ್ರ ಮೋದಿ ಅವರೂ ದೇಶದ ಅಭಿವೃದ್ಧಿ, ತಂತ್ರಜ್ಞಾನ, ಕೃಷಿ, ಸಿರಿಧಾನ್ಯ, ಬಾಲ ಪ್ರತಿಭೆಗಳಿಂದ ಹಿಡಿದು ಎಲ್ಲ ವಿಷಯಗಳ ಕುರಿತು ಮಾಹಿತಿ ಹಂಚಿಕೊಳ್ಳುತ್ತಾರೆ. ಇಂತಹ ಮನ್‌ ಕಿ ಬಾತ್‌ ರೇಡಿಯೊ ಕಾರ್ಯಕ್ರಮವು ಏಪ್ರಿಲ್‌ 30ರಂದು 100ನೇ ಆವೃತ್ತಿ ಪೂರ್ಣಗೊಳಿಸಲಿದ್ದು, ಇದಕ್ಕಾಗಿ ಬಿಜೆಪಿ ಹಲವು ಯೋಜನೆ ರೂಪಿಸಿದೆ.

ನೂರರ ಸಂಭ್ರಮದಲ್ಲಿ ‘ಮನ್ ಕಿ ಬಾತ್’ | ಈ ಸಂಚಿಕೆಯ ಮೋದಿ ಮಾತಿಗೆ ಕಿವಿಯಾಗಲಿದೆ ಜಗತ್ತು Read More »

ಚಂದ್ರ ದರ್ಶನ ಹಿನ್ನಲೆ| ಕರಾವಳಿಯಲ್ಲಿ ನಾಳೆಯಿಂದ (ಮಾ.23) ಪವಿತ್ರ ರಂಝಾನ್ ಉಪವಾಸ ಆರಂಭ

ಸಮಗ್ರ ನ್ಯೂಸ್: ರಂಜಾನ್ ಮಾಸದ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ನಾಳೆಯಿಂದ ಕರಾವಳಿಯಾದ್ಯಂತ ಉಪವಾಸ ವ್ರತ ಆರಂಭವಾಗಲಿದೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಖಾಝೀ ತ್ವಾಕಾ ಅಹ್ಮದ್ ಮುಸ್ಲಿಯಾರ್ ಘೋಷಣೆ ಮಾಡಿದ್ದಾರೆ. ಚಂದ್ರ ದರ್ಶನವಾಗಿರುವುದರಿಂದ ಕರಾವಳಿಯಲ್ಲಿ ರಂಜಾನ್ ಮಾಸದ ಉಪವಾಸ ವ್ರತ ನಾಳೆಯಿಂದ ಆರಂಭವಾಗಲಿದೆ ಎಂದು ಅವರು ಹೇಳಿದ್ದಾರೆ. ಇಸ್ಲಾಮಿಕ್ ಕ್ಯಾಲೆಂಡರ್‌ನ ಒಂಬತ್ತನೇ ತಿಂಗಳಲ್ಲಿ ರಂಜಾನ್ ಆಚರಿಸಲಾಗುತ್ತದೆ. ಪವಿತ್ರ ಮಾಸ ರಂಜಾನ್ ಅನ್ನು ಪ್ರಪಂಚದಾದ್ಯಂತ ಮುಸ್ಲಿಂ ಸಮುದಾಯದವರು ಆಚರಿಸುತ್ತಾರೆ. ಈ ಸಮಯದಲ್ಲಿ 30 ದಿನಗಳ ಕಾಲ ಪ್ರತಿದಿನ

ಚಂದ್ರ ದರ್ಶನ ಹಿನ್ನಲೆ| ಕರಾವಳಿಯಲ್ಲಿ ನಾಳೆಯಿಂದ (ಮಾ.23) ಪವಿತ್ರ ರಂಝಾನ್ ಉಪವಾಸ ಆರಂಭ Read More »

ಉರಿಗೌಡ – ನಂಜೇಗೌಡ ವಿವಾದ| ಕೆಲಸ ಮಾಡಿ ಓಟು ಕೇಳಲು ಯೋಗ್ಯತೆ ಇಲ್ಲದವರು ಜನಾಂಗವನ್ನು ಎತ್ತಿಕಟ್ಟುತ್ತಿದ್ದಾರೆ| ನಟ ಕಿಶೋರ್ ಎಚ್ಚರಿಕೆ ಸಂದೇಶ

ಸಮಗ್ರ ನ್ಯೂಸ್: ಭಾರೀ ವಿವಾದಕ್ಕೆ ಕಾರಣವಾಗಿರುವ ಟಿಪ್ಪು ಸುಲ್ತಾನರನ್ನು ಕೊಂದರು ಎಂದು ಬಿಜೆಪಿ ಹಾಗೂ ಸಂಘಪರಿವಾರ ಬಿಂಬಿಸುತ್ತಿರುವ ಉರಿಗೌಡ ಹಾಗೂ ನಂಜೇಗೌಡರ ಬಗ್ಗೆ ಕನ್ನಡದ ಹೆಸರಾಂತ ನಟ ಕಿಶೋರ್ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಕಿಶೋರ್, ‘ಮಾಡಿದ ಕೆಲಸದ ಮೇಲೆ ಮತ ಯಾಚಿಸಲು ಯೋಗ್ಯತೆಯಿಲ್ಲದ ಧರ್ಮಾಂಧ ಮನೆಹಾಳರು ಉರಿಗೌಡ, ನಂಜೇಗೌಡ ಹೆಸರಿನಲ್ಲಿ ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ”ನಂಜೇಗೌಡ ಉರಿಗೌಡರ ಸೃಷ್ಟಿ ಒಂದು

ಉರಿಗೌಡ – ನಂಜೇಗೌಡ ವಿವಾದ| ಕೆಲಸ ಮಾಡಿ ಓಟು ಕೇಳಲು ಯೋಗ್ಯತೆ ಇಲ್ಲದವರು ಜನಾಂಗವನ್ನು ಎತ್ತಿಕಟ್ಟುತ್ತಿದ್ದಾರೆ| ನಟ ಕಿಶೋರ್ ಎಚ್ಚರಿಕೆ ಸಂದೇಶ Read More »

ಕಾರ್ಕಳ: ಬೆಂಕಿ ಬಿದ್ದಿದೆ ಅಂದರೆ ನಮ್ಮಲ್ಲಿ ಗಾಡಿ ಇಲ್ಲ ಎಂದ ಅಗ್ನಿಶಾಮಕದಳ!

ಸಮಗ್ರ ನ್ಯೂಸ್: ಕಾರ್ಕಳದ ಮುಂಡ್ಕೂರು ಗ್ರಾಮದ ಸಚ್ಚರಿಪೇಟೆಯ ಕುದ್ರೊಟ್ಟುವಿನ ಪಾಲ್ದಡಿ ಎಂಬಲ್ಲಿ ಮಾ.22ರಂದು ಆಕಸ್ಮಿಕವಾಗಿ ಕೃಷಿ ತೋಟಕ್ಕೆ ಬೆಂಕಿ ಬಿದ್ದು ಅಪಾರ ಹಾನಿಯಾಗಿದೆ. ಬೈಹುಲ್ಲಿನ ಬೃಹತ್ ರಾಶಿಯೊಂದು ಬೆಂಕಿಯಲ್ಲಿ, ಕೃಷಿ ತೋಟಕ್ಕೆ ಬಳಸುತ್ತಿದ್ದ ಪಂಪ್‌ಶೆಡ್,ಅಲ್ಲದೇ ತೆಂಗು, ಹಲಸು, ಮಾವಿನ ಮರಗಳು ಕೂಡಾ ಬೆಂಕಿಗೆ ಆಹುತಿಯಾಗಿದೆ. ಮೇಯಲು ಕಟ್ಟಿದ್ದ ಹಲವು ಜಾನುವಾರುಗಳನ್ನು ಕೂಡಲೇ ಸ್ಥಳೀಯರು ರಕ್ಷಿಸಿದ್ದಾರೆ. ಕೃಷಿ ತೋಟಕ್ಕೆ ಬೆಂಕಿ ಬಿದ್ದು ಉರಿಯುತ್ತಿರುವ ಸಂದರ್ಭದಲ್ಲಿ ಸ್ಥಳೀಯರು ಕಾರ್ಕಳದ ಅಗ್ನಿಶಾಮಕದಳದವರನ್ನು ಫೋನ್ ಮಾಡಿ ಸಂಪರ್ಕಿಸಿದಾಗ ಸರಿಯಾದ ಸ್ಪಂದನೆ ಸಿಕ್ಕಿಲ್ಲವೆಂದು ಆರೋಪಿಸಿದ್ದಾರೆ.

ಕಾರ್ಕಳ: ಬೆಂಕಿ ಬಿದ್ದಿದೆ ಅಂದರೆ ನಮ್ಮಲ್ಲಿ ಗಾಡಿ ಇಲ್ಲ ಎಂದ ಅಗ್ನಿಶಾಮಕದಳ! Read More »

ಸುಳ್ಯ: ಅರಂತೋಡು ಅರಮನೆಗಯದಲ್ಲಿ ಮತ ಬಹಿಷ್ಕಾರ ಬ್ಯಾನರ್| ಸೇತುವೆ ನಿರ್ಮಿಸಿಕೊಡಲು ಸುಂದರ ಪಾಟಾಜೆ ಮನವಿ

ಸಮಗ್ರ ನ್ಯೂಸ್ : ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಅರಮನೆಗಾಯ ಎಂಬಲ್ಲಿ 40 ವರ್ಷಗಳಿಂದ ಸೇತುವೆ ನಿರ್ಮಿಸಲು ಸಚಿವರಾದ ಎಸ್ ಅಂಗಾರವರಿಗೆ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರಮನೆ ಗಾಯದ 40 ದಲಿತ ಕುಟುಂಬದವರು ಚುನಾವಣೆ ಬಹಿಷ್ಕಾರದ ಬ್ಯಾನರನ್ನು ಅಳವಡಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದು ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆಯವರು ದಿನಾಂಕ ಮಾ.14 ರಂದು ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ ಇಲ್ಲಿ ಸುಮಾರು 40 ದಲಿತ ಕುಟುಂಬಗಳು ವಾಸವಾಗಿದ್ದಾರೆ, 40

ಸುಳ್ಯ: ಅರಂತೋಡು ಅರಮನೆಗಯದಲ್ಲಿ ಮತ ಬಹಿಷ್ಕಾರ ಬ್ಯಾನರ್| ಸೇತುವೆ ನಿರ್ಮಿಸಿಕೊಡಲು ಸುಂದರ ಪಾಟಾಜೆ ಮನವಿ Read More »