Ad Widget .

2023ನೇ ಐಪಿಎಲ್‌ ಟೂರ್ನಿಯಲ್ಲಿ ಹಲವು ಹೊಸ ನಿಯಮಗಳು|ಫ್ಯಾನ್ಸ್‌ ತಿಳಿಯಲೇಬೇಕಾದ ಸಂಗತಿಗಳಿವು

Samagra sports news: 2023ನೇ ಐಪಿಎಲ್‌ ಆರಂಭಕ್ಕೆ ಕ್ಷಣಗಣನೆ ಬಾಕಿಯಿದ್ದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಾ.31ರಂದು ಉದ್ಘಾಟನಾ ಸಮಾರಂಭ ನಡೆಯಲಿದೆ. ನಂತರ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ಹಾಗೂ ಗುಜರಾತ್‌ ಟೈಟಾನ್ಸ್‌ (Gujarat Titans) ತಂಡಗಳ ನಡುವೆ ಹಣಾಹಣಿ ನಡೆಯಲಿದೆ.

Ad Widget . Ad Widget .

ಮೇ 28ರ ವರೆಗೆ ನಡೆಯಲಿರುವ ಐಪಿಎಲ್‌ ಟೂರ್ನಿಯಲ್ಲಿ ಹಲವು ಹೊಸ ನಿಯಮಗಳನ್ನ ತರಲಾಗಿದೆ.

Ad Widget . Ad Widget .
  1. ಟಾಸ್ ಬಳಿಕ ಪ್ಲೇಯಿಂಗ್-11 ಬದಲಾವಣೆ:
    ಐಪಿಎಲ್ ಮಂಡಳಿಯ ನೂತನ ನಿಯಮದ ಪ್ರಕಾರ ಟಾಸ್ ಪ್ರಕ್ರಿಯೆ ನಂತರವೂ ಕ್ಯಾಪ್ಟನ್​ಗಳು ತಮ್ಮ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆ ಮಾಡಬಹುದು. ಈ ಮೊದಲು ಟಾಸ್​ಗೂ ಮುನ್ನ ಉಭಯ ತಂಡಗಳ ನಾಯಕರು ಪ್ಲೇಯಿಂಗ್-11 ಪಟ್ಟಿ ಸಲ್ಲಿಸಬೇಕಿತ್ತು. ಈ ಬಾರಿ ಈ ನಿಯಮದಲ್ಲಿ ಬದಲಾವಣೆ ತರಲಾಗಿದೆ.
  2. ಇಂಪ್ಯಾಕ್ಟ್ ಪ್ಲೇಯರ್:
    ಇಂಪ್ಯಾಕ್ಟ್ ಪ್ಲೇಯರ್ ಎಂದರೆ ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಉಭಯ ತಂಡಗಳು ತಮ್ಮ ತಂಡದಲ್ಲಿನ ಒಬ್ಬ ಆಟಗಾರನನ್ನು ಬದಲಿಸುವ ಅವಕಾಶ ಪಡೆಯುವುದು. ಹೊಸ ನಿಯಮದ ಪ್ರಕಾರ, ತಂಡಗಳು ತಾವು ಘೋಷಿಸಿರುವ ತಂಡದಲ್ಲಿ ಬೌಲರ್, ಬ್ಯಾಟ್ಸ್‌ಮ್ಯಾನ್‌ ಅಥವಾ ಫೀಲ್ಡಿಂಗ್‌ಗೆ ಆಟಗಾರರನ್ನ ಬದಲಾವಣೆ ಮಾಡಬಹುದು. ಆದರೆ ಕ್ಯಾಪ್ಟನ್‌ಗಳಾಗಿ ತಂಡವನ್ನು ಮುನ್ನಡೆಸಲು ಆಗುವುದಿಲ್ಲ.
  3. ವೈಡ್-ನೋ ಬಾಲ್​ಗೆ ಡಿಆರ್‌ಎಸ್‌:
    ಇದೇ ಮೊದಲ ಬಾರಿಗೆ ವೈಡ್ ಮತ್ತು ನೋ ಬಾಲ್‌ಗೆ ನಿರ್ಧಾರ ಪರಿಶೀಲಿಸುವ ಡಿಆರ್‌ಎಸ್‌ (DRS) ನಿಯಮ ಜಾರಿಗೆ ತರಲಾಗಿದೆ. ಈ ಹಿಂದೆ ಕೇವಲ ಅಂಪೈರ್ ನೀಡಿದ ಔಟ್ ನಿರ್ಣಯದ ವಿರುದ್ಧ ಡಿಆರ್​ಎಸ್​ ತೆಗದುಕೊಳ್ಳಲಾಗುತ್ತಿತ್ತು. ಆದರೆ ಈಗ ವೈಡ್‌ ಮತ್ತು ನೋ ಬಾಲ್‌ ನಿರ್ಧಾರದ ವಿರುದ್ಧವೂ ಡಿಆರ್​ಎಸ್ ತೆಗೆದುಕೊಳ್ಳಬಹುದಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಚೊಚ್ಚಲ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲೂ ವೈಡ್‌ಗೆ ಡಿಆರ್‌ಎಸ್‌ ಮೊರೆ ಹೋಗುವ ನಿಯಮ ಬಳಸಲಾಗಿತ್ತು.
  4. ಆಟಗಾರರ ಅನಗತ್ಯ ಬದಲಾವಣೆಗೆ ಬ್ರೇಕ್‌:
    ಐಪಿಎಲ್​ನಲ್ಲಿ ಬೌಲಿಂಗ್​ ಮಾಡುವ ವೇಳೆ ಬ್ಯಾಟ್ಸ್‌ಮ್ಯಾನ್‌ ಬಾಲ್‌ ಹೊಡೆಯುವುದಕ್ಕೂ ಮುನ್ನ ವಿಕೆಟ್ ಕೀಪರ್ ಅಥವಾ ಫೀಲ್ಡರ್​ ತಮ್ಮ ಸ್ಥಾನ ಬದಲಾವಣೆ ಮಾಡುವುದು ಕಂಡು ಬಂದರೆ ಪೆನಾಲ್ಟಿ ಕೂಡ ಹಾಕಲಾಗುತ್ತದೆ.
  5. ನಿಧಾನಗತಿಯ ಬೌಲಿಂಗ್‌ ಮಾಡಿದ್ರೆ ಪೆನಾಲ್ಟಿ:
    ಐಪಿಎಲ್‌ನಲ್ಲಿ ಒಂದು ಪಂದ್ಯಕ್ಕೆ 3 ಗಂಟೆ ಸಮಯ ನಿಗದಿಯಾಗಿರುತ್ತದೆ. ಹಾಗಾಗಿ ಪ್ರತಿ ತಂಡ 90 ನಿಮಿಷಗಳ ಒಳಗೆ 20 ಓವರ್​ಗಳ ಕೋಟಾ ಮುಗಿಸಬೇಕಿರುತ್ತದೆ. ಒಂದು ವೇಳೆ ಅದು ಸಾಧ್ಯವಾಗದೇ ಇದ್ದಲ್ಲಿ, ಪ್ರತಿ ಓವರ್‌ನಲ್ಲಿ ಹೆಚ್ಚುವರಿ ಆಟಗಾರರನ್ನು 30 ಯಾರ್ಡ್‌ ವೃತ್ತದೊಳಗೆ ಇರಿಸಬೇಕಾಗುತ್ತದೆ. ಇದು ಎದುರಾಳಿ ತಂಡ ಮತ್ತಷ್ಟು ರನ್‌ ಗಳಿಸಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ.

Leave a Comment

Your email address will not be published. Required fields are marked *