Ad Widget .

IPL 2023: ಆರಂಭಿಕ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಆಡುವುದು ಡೌಟ್‌

Samagra sports news: ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಅವರ ಎಡಗಾಲಿನ ಮೊಣಕಾಲಿಗೆ ಗಾಯವಾಗಿದ್ದು, ಶುಕ್ರವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಆಡುತ್ತಾರೆಯೇ ಎನ್ನುವ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ.

Ad Widget . Ad Widget .

ಗುಜರಾತ್‌ ಟೈಟಾನ್ಸ್‌ ವಿರುದ್ಧ ನಡೆಯಲಿರುವ 2023ರ ಐಪಿಎಲ್‌ನ ಮೊದಲ ಪಂದ್ಯ ಆರಂಭಕ್ಕೂ ಮುನ್ನವೇ ಧೋನಿ ಕಾಲಿಗೆ ಪೆಟ್ಟಾಗಿಸಿಕೊಂಡಿದ್ದಾರೆ. ಇದರಿಂದ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ. ಈ ಬಾರಿ ಐಪಿಎಲ್‌ ಆವೃತ್ತಿ ಮಾಹಿ ವೃತ್ತಿ ಬದುಕಿನ ಕೊನೆಯ ಟೂರ್ನಿಯಾಗಿದ್ದು, ಸಿಎಸ್‌ಕೆ ಕಪ್‌ ಗೆಲ್ಲಲೇಬೇಕೆಂಬ ಪಣ ತೊಟ್ಟಿದೆ.

Ad Widget . Ad Widget .

41 ವರ್ಷದ ಟೀಂ ಇಂಡಿಯಾ ಮಾಜಿ ನಾಯಕ ಚೆನ್ನೈನಲ್ಲಿ ತರಬೇತಿ ವೇಳೆ ಎಡ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಹೀಗಾಗಿ ಗುರುವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಅಭ್ಯಾಸದಲ್ಲೂ ಅವರು ಪಾಲ್ಗೊಂಡಿಲ್ಲ. ಒಂದು ವೇಳೆ ಮೊದಲ ಪಂದ್ಯಕ್ಕೆ ಧೋನಿ ಗೈರಾದರೆ, ಯಾರ ಹೆಗಲಿಗೆ ನಾಯಕತ್ವ ಬೀಳಲಿದೆ ಅನ್ನೋದು ಕುತೂಹಲವಾಗಿದೆ.

Leave a Comment

Your email address will not be published. Required fields are marked *