Ad Widget .

ಕರ್ನಾಟಕ ಬಿಜೆಪಿ ಶಾಸಕನಿಂದಪ್ರಧಾನಿ ಮೋದಿ ವಿರುದ್ಧವೇ ಅವಹೇಳನಕಾರಿ ಮಾತು..!|ಆಡಿಯೋನಲ್ಲೇನಿದೆ?

Samagra news: ಪ್ರಧಾನಿ ನರೇಂದ್ರ ಮೋದಿ ವಿರುದ್ದವೇ ಅವಹೇಳನಕಾರಿಯಾಗಿ ಮಾತನಾಡಿದ ರಾಯಚೂರು ನಗರ ಬಿಜೆಪಿ ಶಾಸಕನದ್ದು ಎನ್ನಲಾದ ಆಡಿಯೋವೊಂದು ಜಾಲತಾಣದಲ್ಲಿ ವೈರಲ್ ಆಗಿದೆ.

Ad Widget . Ad Widget .

ಆಡಿಯೋನಲ್ಲೇನಿದೆ?
ಯಾವ ಮೋದಿಯಿಲ್ಲ,ಪಾದಿಯಿಲ್ಲ.. ನಾನೊಬ್ಬನೇ ಶಿವರಾಜ್ ಪಾಟೀಲ್.. ಯಾವ ಬದನೆಕಾಯಿ ಮಾತು ನಾನು ಕೇಳಲ್ಲ.. ಮೋದಿ ರೈಟ್ ಹ್ಯಾಂಡ್‌ ಗೆ ನಾನು ಕೇಳಲ್ಲ. ನಾನೇ ಸಿಂಗಲ್ ಆರ್ಮಿ, ನನಗೆ ರೈಟ್ ಇಲ್ಲ, ಲೆಫ್ಟ್ ಇಲ್ಲ. ನನ್ನ ಕೈ ನನ್ನ ಕಾಲು ನಾನೇ ಮೋದಿ,ನಾನೇ ಟ್ರಂಪ್..ಯಾವನ ಬದನೆಕಾಯಿ ಮಾತು ಸಹ ನಾನು‌ ಕೇಳಲ್ಲ. ನನ್ನ ಮುಂದೆ ಹೇಳಿದ್ರೆ ಏನೂ ನಡೆಯಂಗಿಲ್ಲ. ಮೊದಲಿನಿಂದಲೂ ನನ್ನ ಕ್ಷೇತ್ರಕ್ಕೆ ‌ಲೀಡರ್ ಗಳಿಗೆ ಬಾ ಅಂತೀನಾ..? ನನಗೆ ಯಾರೂ‌ ಇಲ್ಲ..ನಾನು‌ ಸಿಂಗಲ್ ಆರ್ಮಿ. ಎಲೆಕ್ಷನ್ ನಲ್ಲಿ ಸೋತರು ಚಿಂತೆಯಿಲ್ಲ,ಗೆದ್ರು ಚಿಂತೆಯಿಲ್ಲ,ಮಲಗಿದರು ಚಿಂತೆಯಿಲ್ಲ.. ಜಗತ್ತಿನಲ್ಲಿ ಚಿಂತೆಯಿಲ್ಲದ ಪುರುಷ ಅಂದ್ರೆ ಅದು ಶಿವರಾಜ್ ಪಾಟೀಲ್. ನಾನು ದೇವರು ಇದ್ದಂಗೆ,ಅದಕ್ಕೆ ನಮ್ಮ ಹುಡುಗರಿಗೆ ದಿನಾಲೂ ನನ್ನ ಕಾಲಿಗೆ ನಮಸ್ಕಾರ ಮಾಡ್ರಿ ಅಂತ ಹೇಳ್ತಿನಿ.. ಶಿವರಾಜ್ ಪಾಟೀಲ್ ದೈವ ಬರೆಸಿಕೊಳ್ಳಲ್ಲ..ನಾನೇ ದೈವ ಬರಿತೀನಿ ಎಂದು ಮಾತುಗಳನ್ನಾಡಿರುವ ಆಡಿಯೋ ಇದೀಗ ವೈರಲ್ ಆಗಿದೆ.

Ad Widget . Ad Widget .

ಚುನಾವಣೆ ಹೊಸ್ತಿಲಲ್ಲೇ ಶಿವರಾಜ್ ಪಾಟೀಲ್ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಕ್ಷೇತ್ರದಲ್ಲಿ ಬಾರೀ ಸಂಚಲನ ಮೂಡಿಸಿದೆ. ಆದ್ರೆ, ಈ ಬಗ್ಗೆ ಶಿವರಾಜ್ ಪಾಟೀಲ್ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Leave a Comment

Your email address will not be published. Required fields are marked *