ಸಮಗ್ರ ನ್ಯೂಸ್: ಟ್ರಾವೆಲ್(travel) ಹೋಗಬೇಕೆಂದು ನಿಮ್ಮ ಫ್ರೆಂಡ್ಸ್ ಜೊತೆ ಪ್ಲ್ಯಾನ್ ಮಾಡುವಾಗ ಮೊದಲು ಕೇಳಿಬರುವ ಹೆಸರೇ ಗೋವಾ(Goa). ಈ ಹೆಸರು ಕೇಳಿದ ತಕ್ಷಣ ಎಲ್ಲರ ಮನಸ್ಸು ಉತ್ಸಾಹದಿಂದ ತುಂಬಿರುತ್ತದೆ. ಕೊನೆಗೆ ನಾವು ಗೋವಾ ಪ್ರವಾಸಕ್ಕೆ ಹೋಗುತ್ತಿವೋ, ಇಲ್ಲವೋ ಆದ್ರೆ ಎಲ್ಲರ ಮನಸ್ಸಿನಲ್ಲಿ ಒಂದಷ್ಟು ಕಲ್ಪನೆಗಳು ಮಾತ್ರ ಇದ್ದೇ ಇರುತ್ತದೆ.
ಸದ್ಯ ಈಗ ಹೇಗಿದ್ದರೂ ಬೇಸಿಗೆ ಮನಸ್ಸು ಮಾಡಿದರೆ ಈ ಸಮಯದಲ್ಲಿ ನೀವು ಗೋವಾಗೆ ಭೇಟಿ ನೀಡಬಹುದು. ಒಂದು ವೇಳೆ ಗೋವಾ ಪ್ರವಾಸಕ್ಕೆ ಹೋದರೆ ಈ 5 ಸ್ಥಳಗಳಿಗೆ ತಪ್ಪದೇ ಭೇಟಿ ನೀಡಿ. ಇವು ಖಂಡಿತ ನಿಮ್ಮ ಕಣ್ಮನ ಸೆಳೆಯುತ್ತದೆ.
ಇಮ್ಯಾಕ್ಯುಲೇಟ್ ಕಾನ್ಸೆಪ್ಶನ್ ಚರ್ಚ್: ಚರ್ಚ್ ಆಫ್ ಅವರ್ ಲೇಡಿ ಆಫ್ ದಿ ಇಮ್ಯಾಕ್ಯುಲೇಟ್ ಕಾನ್ಸೆಪ್ಶನ್ ಅನ್ನು 1541 ರಲ್ಲಿ ಪೋರ್ಚುಗೀಸ್ ಆಡಳಿತಗಾರರು ನಿರ್ಮಿಸಿದರು. ಅಂದರೆ, ಇದು ಸುಮಾರು 6 ಶತಮಾನಗಳಷ್ಟು ಹಳೆಯದಾದ ಚರ್ಚ್. ಈ ಚರ್ಚ್ ಅನ್ನು ಪೋರ್ಚುಗೀಸ್ ಬರೋಕ್ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ಸ್ಥಳವನ್ನು ನಾವು ಸಾಕಷ್ಟು ಸಿನಿಮಾಗಳಲ್ಲಿ ನೋಡಿರುತ್ತೇವೆ.

ಬೆಸಿಲಿಕಾ: ‘ದಿ ಬೆಸಿಲಿಕಾ ಆಫ್ ಬರ್ನ್ ಜೀಸಸ್’ ಎಂಬ ಸ್ಮಾರಕವನ್ನು 1605 ರಲ್ಲಿ ನಿರ್ಮಿಸಲಾಯಿತು. ಇದನ್ನು ಕೂಡ ಸ್ಥಾಪಿಸಿ 5 ಶತಕಗಳಾಗಿದೆ. ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಅವರ ಸ್ಮಾರಕ ಮನೆ ಎಂದು ಪರಿಗಣಿಸಲಾಗಿದೆ, ಇದು ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿದೆ.

ಪೋರ್ಚುಗೀಸ್ ಕೋಟೆ: ಅರಬ್ಬಿ ಸಮುದ್ರದ ಮೇಲೆ 17 ನೇ ಶತಮಾನದಲ್ಲಿ ನಿರ್ಮಿಸಲಾದ ಈ ಕೋಟೆಯು ಗೋವಾಕ್ಕೆ ಭೇಟಿ ನೀಡುವ ಪ್ರವಾಸಿಗರ ನೆಚ್ಚಿನ ಆಯ್ಕೆಯಾಗಿದೆ. ಪೋರ್ಚುಗೀಸ್ ಆಡಳಿತಗಾರರು ಯುದ್ಧದಲ್ಲಿ ಡಚ್ ಆಡಳಿತಗಾರರ ಮೇಲೆ ತಮ್ಮ ವಿಜಯದ ನೆನಪಿಗಾಗಿ ಈ ಕೋಟೆಯನ್ನು ನಿರ್ಮಿಸಿದರು.

ವೆಜಿಟಾರ್ ಬೀಚ್: ವೆಜಿಟಾರ್ ಬೀಚ್ ಮರಳು ಮತ್ತು ಅಪ್ಪಳಿಸುವ ಅಲೆಗಳಿಂದ ಕೂಡಿದ ಒಂದು ರಮಣೀಯ ತಾಣವಾಗಿದೆ. ಬೀಚ್ ಪಾರ್ಟಿಗಳು ಮತ್ತು ಸಂಗೀತ ಕಚೇರಿಗಳನ್ನು ಏರ್ಪಡಿಸಲು ಇದು ಜನಪ್ರಿಯವಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಇಲ್ಲಿ ರಾತ್ರಿ ಹೊತ್ತು ಹೆಚ್ಚಾಗಿ ಪಾರ್ಟಿಯನ್ನು ಏರ್ಪಡಿಸಲಾಗುತ್ತದೆ.

ಮಾಗೋಸ್ ಕೋಟೆ: ಇದು ಪೋರ್ಚುಗೀಸ್ ರಾಜರು ನಿರ್ಮಿಸಿದ ಕೋಟೆಯಾಗಿದೆ. ಇದನ್ನು 1551 ರಲ್ಲಿ ನಿರ್ಮಿಸಲಾಯಿತು. 19ನೇ ಶತಮಾನದ ವೇಳೆಗೆ, ಇದು ಹಾಳಾಗುವುದು ಹೆಚ್ಚಾಯಿತು. ಈ ವೇಳೆ, 1993 ರಲ್ಲಿ ಗೆರಾರ್ಡ್ ಡ ಕ್ಯಾನ್ಹಾ ಎಂಬ ವಾಸ್ತುಶಿಲ್ಪಿ ಅದನ್ನು ನವೀಕರಿಸುವ ಕಾರ್ಯವನ್ನು ಕೈಗೊಂಡರು. ಇದು ಈಗ ಅನೇಕ ಪ್ರವಾಸಿಗರ ನೆಚ್ಚಿನ ತಾಣವಾಗಿದೆ.
