Ad Widget .

ಬಸ್ ಮೇಲಿದ್ದ ಮೋದಿ ಭಾವಚಿತ್ರಕ್ಕೆ ಮುತ್ತಿಕ್ಕಿದ ರೈತ| ವೈರಲ್ ಆಯ್ತು ಫೋಟೋ, ವಿಡಿಯೋ

ಸಮಗ್ರ ನ್ಯೂಸ್: ಕರ್ನಾಟಕದ ಗುರುತಿಸಲಾಗದ ಊರೊಂದರ ಬಸ್‌ಸ್ಟಾಂಡ್‌ನಲ್ಲಿ ರೈತರೊಬ್ಬರು ಬಸ್‌ನಲ್ಲಿ ಪ್ರಧಾನಿ ಮೋದಿಯವರ ಚಿತ್ರಕ್ಕೆ ಮುತ್ತಿಟ್ಟು ಅವರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Ad Widget . Ad Widget .

ಕರ್ನಾಟಕದಲ್ಲಿ ರೈತನೊಬ್ಬ ಪ್ರಧಾನಿ ಮೋದಿಯವರನ್ನು ಹಾಡಿ ಹೊಗಳಿ, ಮೋದಿ ಚಿತ್ರಕ್ಕೆ ಮುತ್ತಿಟ್ಟಿರುವ ವಿಡಿಯೋವೊಂದು ವೈರಲ್‌ ಆಗಿದೆ. ಪ್ರಧಾನಮಂತ್ರಿಯವರ ಚಿತ್ರದ ಮೇಲೆ ಕೈ ಮಾಡಿ ರೈತ ಭಾವುಕರಾಗಿ ನನಗೆ ಒಂದು ಸಾವಿರ ರೂಪಾಯಿ ಸಿಗುತ್ತಿತ್ತು, ನೀವು ನನಗೆ ಇನ್ನೂ 500 ರೂಪಾಯಿ ಕೊಟ್ಟಿದ್ದೀರಿ. ನಮ್ಮ ಆರೋಗ್ಯ ರಕ್ಷಣೆಗೆ 5 ಲಕ್ಷ ರೂಪಾಯಿ ನೀಡಲು ನೀವು ನಿರ್ಧರಿಸಿದ್ದೀರಿ, ನೀವು ಜಗತ್ತನ್ನು ಗೆಲ್ಲುತ್ತೀರಿ. ‘ ಈ ವಿಡಿಯೋ ವೈರಲ್ ಆದ ನಂತರ ಬಿಜೆಪಿ ಬೆಂಬಲಿಗರು ಮತ್ತು ಕಾರ್ಯಕರ್ತರು ತುಂಬಾ ಸಂತೋಷಪಟ್ಟಿದ್ದಾರೆ. ಜಿ20 ಶೃಂಗಸಭೆಯ ಜಾಹೀರಾತಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಹಾಕಲಾಗಿದೆ. ಈ ಚಿತ್ರವನ್ನು ವೃದ್ಧ ರೈತ ಚುಂಬಿಸಿ, ಮೋದಿಯನ್ನು ಹೋಗಳಿ, ಮೋದಿಗೆ ಧನ್ಯವಾದ ಅರ್ಪಿಸಿದರು.

Ad Widget . Ad Widget .

ನೀವು ಬೆಂಗಳೂರು, ಮೈಸೂರು, ತುಮಕೂರು ಮಾತ್ರವಲ್ಲದೆ ಇಡೀ ವಿಶ್ವವನ್ನೇ ಗೆಲ್ಲುತ್ತೀರಿ ಎಂದು ಅವರು ಹೇಳುತ್ತಿರುವುದು ವಿಡಿಯೋದಲ್ಲಿ ಕೇಳಿಬರುತ್ತಿದೆ. ಈ ವಿಡಿಯೋವನ್ನು ಮೋಹನ್‌ದಾಸ್ ಕಾಮತ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಕರ್ನಾಟಕದ ರೈತ ತೋರುತ್ತಿರುವ ಆಳವಾದ ಪ್ರೀತಿಯಾಗಿದೆ ಅಂಥ ಅವರು ಹೇಳಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ನೆಟ್ಟಿಗರಿಂದ ವಿವಿಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.

Leave a Comment

Your email address will not be published. Required fields are marked *