Ad Widget .

ಚನ್ನರಾಯಪಟ್ಟಣ: ರಾಮನವಮಿ ಆಚರಣೆ ವೇಳೆ ಕೋಮು ಸಂಘರ್ಷ| ಇಬ್ಬರು ಹಿಂದೂ ಕಾರ್ಯಕರ್ತರಿಗೆ ಚಾಕು ಇರಿತ

ಸಮಗ್ರ ನ್ಯೂಸ್: ರಾಮ ನವಮಿ ವೇಳೆ ಎರಡು ಕೋಮುಗಳ ನಡುವೆ ಸಂಘರ್ಷ ಏರ್ಪಟ್ಟು ಇಬ್ಬರು ಹಿಂದೂಪರ ಸಂಘಟನೆಯ ಕಾರ್ಯಕರ್ತರಿಗೆ ಚಾಕುವಿನಿಂದ ಇರಿದಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.

Ad Widget . Ad Widget .

ಮುರುಳಿ, ಹರ್ಷ ಹಲ್ಲೆಗೊಳಗಾದ ಯುವಕರು. ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಮುರಳಿ ಎಂಬಾತನಿಗೆ ಕುತ್ತಿಗೆ ಹಾಗೂ ಹರ್ಷ ಎಂಬವರಿಗೆ ಹೊಟ್ಟೆಯ ಭಾಗಕ್ಕೆ ಇರಿಯಲಾಗಿದೆ.

Ad Widget . Ad Widget .

ಚನ್ನರಾಯಪಟ್ಟಣ ನಗರದ ಮೇಘಲಕ್ಕೇರಿ ಕಾಡು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರಾಮೋತ್ಸವ ಮತ್ತು ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ದೇಗುಲದ ಮೂಲಕ ಬಾಗೂರು ರಸ್ತೆಯ ದೊಡ್ಡ ಮಸೀದಿ ಸಮೀಪ ದೇವರ ಉತ್ಸವ ಆಗಮಿಸುತ್ತಿದ್ದಂತೆ ಕೆಲವು ಯುವಕರು ಗಲಾಟೆ ಆರಂಭಿಸಿದ್ದಾರೆ. ಈ ಗಲಾಟೆ ವಿಕೋಪಕ್ಕೆ ತಿರುಗಿ ಇಬ್ಬರಿಗೆ ಚಾಕುವಿನಿಂದ ಇರಿಯಲಾಗಿದೆ.

ಸ್ಥಳೀಯ ಪೊಲೀಸರೊಂದಿಗೆ ಸ್ಥಳಕ್ಕೆ ದೌಡಾಯಿಸಿದ ಡಿವೈಎಸ್ಪಿ ರವಿಪ್ರಸಾದ್ ಪರಿಸ್ಥಿತಿ ತಿಳಿಗೊಳಿಸಲು ಹರಸಾಹಸ ಪಟ್ಟರು. ರಸ್ತೆಯ ಅಲ್ಲಲ್ಲಿ ನಾಕಾಬಂದಿ ಹಾಕಿದ್ದು, ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ.

Leave a Comment

Your email address will not be published. Required fields are marked *